JIO Prepaid Plans: ಜಿಯೋದಿಂದ ಮೂರು ಹೊಸ ಧಮಾಕ ಪ್ಲಾನ್ ಬಿಡುಗಡೆ: ದಂಗಾದ ಏರ್ಟೆಲ್, ವೊಡಾಫೋನ್ ಐಡಿಯಾ
ಜಿಯೋ ದಿಢೀರ್ ಆಗಿ ತನ್ನ ಗ್ರಾಹಕರಿಗೆ ಮೂರು ಹೊಸ ಪ್ರಿಪೇಯ್ಡ್ ಪ್ಲಾನ್ಗಳನ್ನು (Prepaid Plan) ಅನ್ನು ಬಿಡುಗಡೆ ಮಾಡಿದೆ. ಮುಖ್ಯವಾಗಿ ಕ್ರಿಕೆಟ್ ಪ್ರಿಯರಿಗೆ ಈ ಯೋಜನೆ ಹೆಚ್ಚು ಸಹಕಾರಿ ಆಗಲಿದೆ.
ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ (Jio) ಹಾಗೂ ಭಾರ್ತಿ ಏರ್ಟೆಲ್ (Airtel) ನಡುವಣ ಪೈಪೋಟಿ ಮುಂದುವರೆಯುತ್ತಲೇ ಇದೆ. ನಂಬರ್ ಒನ್ ಪಟ್ಟ ಉಳಿಸಿಕೊಳ್ಳಲು ಜಿಯೋ ಹೋರಾಡುತ್ತಿದ್ದರೆ ಇತ್ತ ಏರ್ಟೆಲ್ ಬಳಕೆದಾರರಿಗೆ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡಿ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದೆ. 5ಜಿ ಸೇವೆಯನ್ನು ನೀಡಲು ಆರಂಭವಾದ ಬಳಿಕ ಜಿಯೋ-ಏರ್ಟೆಲ್ ಹೊಸ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಕೂಡ ಯಶಸ್ವಿಯಾಗುತ್ತಿದೆ. ಜಿಯೋ ಕೆಲ ಯೋಜನೆಗಳ ಬೆಲೆ ಹೆಚ್ಚಳ ಮಾಡಿದ್ದರೂ ಇದರ ಜೊತೆಗೆ ವಿಶೇಷ ಆಫರ್ಗಳನ್ನು ನೀಡಿ ಹೆಚ್ಚಿನವರ ಗಮನ ಸೆಳೆದಿದೆ. ಇದೀಗ ಜಿಯೋ ದಿಢೀರ್ ಆಗಿ ತನ್ನ ಗ್ರಾಹಕರಿಗೆ ಮೂರು ಹೊಸ ಪ್ರಿಪೇಯ್ಡ್ ಪ್ಲಾನ್ಗಳನ್ನು (Prepaid Plan) ಬಿಡುಗಡೆ ಮಾಡಿದೆ. ಮುಖ್ಯವಾಗಿ ಕ್ರಿಕೆಟ್ ಪ್ರಿಯರಿಗೆ ಈ ಯೋಜನೆ ಹೆಚ್ಚು ಸಹಕಾರಿ ಆಗಲಿದೆ.
ಜಿಯೋ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಹೊಸದಾಗಿ 219 ರೂ. ವಿನ ಯೋಜನೆ ಬಿಡುಗಡೆ ಮಾಡಿದೆ. ಇದು 14 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಪ್ರತಿ ನಿತ್ಯ 3GB ಹೈ ಸ್ಪೀಡ್ ಡೇಟಾ ಬಳಕೆ ಮಾಡಬಹುದು. ಅನಿಯಮಿತ ವಾಯಿಸ್ ಕರೆ ಸೌಲಭ್ಯ ನೀಡಲಾಗಿದೆ. ಇದರೊಂದಿಗೆ 2GB ಡೇಟಾ ಲಾಭವನ್ನು ನೀಡುವ 25 ರೂ. ಗಳ ವೂಚರ್ ಸಹ ಉಚಿತವಾಗಿ ದೊರೆಯಲಿದೆ. ಇಷ್ಟೇ ಅಲ್ಲದೆ 40GB ಡೇಟಾ ಲಾಭವನ್ನು ನೀಡುವ 241 ರೂ. ಗಳ ವೂಚರ್ ಪಡೆಯಬಹುದು.
108MP ಕ್ಯಾಮೆರಾ, 6000mAh ಬ್ಯಾಟರಿ: ಸ್ಯಾಮ್ಸಂಗ್ನಿಂದ ಹುಬ್ಬೇರಿಸುವ ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ ಎಷ್ಟು?
ಇನ್ನು 399 ರೂ. ಪ್ರಿಪೇಯ್ಡ್ ಯೋಜನ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿ ನಿತ್ಯ 3GB ಹೈ ಸ್ಪೀಡ್ ಡೇಟಾ ಬಳಕೆ ಮಾಡಬಹುದಾಗಿದೆ. ಇದರೊಂದಿಗೆ 6GB ಡೇಟಾ ಲಾಭವನ್ನು ನೀಡುವ 61 ರೂ. ಗಳ ವೂಚರ್ ಸಹ ಉಚಿತವಾಗಿ ದೊರೆಯಲಿದೆ. ಇದರಲ್ಲೂ ಅನ್ಲಿಮಿಟೆಡ್ ವಾಯಿಸ್ ಕರೆ ಸೌಲಭ್ಯವಿದೆ. ಕೊನೆಯದಾಗಿ 999 ರೂ. ಗಳ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಪ್ರತಿ ನಿತ್ಯ 3GB ಡೇಟಾವನ್ನು ನೀಡುತ್ತಿದೆ. ಇದೊರೊಂದಿಗೆ 40GB ಡೇಟಾ ಲಾಭವನ್ನು ನೀಡುವ 241 ರೂ. ಗಳ ವೂಚರ್ ಉಚಿತವಾಗಿ ಪಡೆಯಬಹುದು.
ಇವುಗಳ ಜೊತೆಗೆ ಕೆಲ ಡೇಟಾ ಆಡ್ ಆನ್ ಪ್ಲಾನ್ಗಳನ್ನು ಸಹ ಜಿಯೋ ಬಿಡುಗಡೆ ಮಾಡಿದೆ. 222 ರೂ. ಗೆ 50 ಜಿಬಿ ಡೇಟಾವನ್ನು ಪಡೆಯಬಹುದು. ಇದಕ್ಕೆ ಯಾವುದೇ ವ್ಯಾಲಿಡಿಟಿ ಇರುವುದಿಲ್ಲ. ಇನ್ನು 444 ರೂ. ಗೆ 60 ದಿನಗಳ ವ್ಯಾಲಿಡಿಟಿಗೆ 100GB ಡೇಟಾವನ್ನು ನೀಡುವ ಪ್ಲಾನ್ ಕೂಡ ಇದೆ. ಹಾಗೆಯೇ 667 ರೂ. ಗೆ 90 ದಿನಗಳ ವ್ಯಾಲಿಡಿಟಿಗೆ 150GB ಡೇಟಾ ನೀಡುತ್ತಿದೆ. ಈ ಎಲ್ಲ ಪ್ಲಾನ್ಗಳು ಇಂದಿನಿಂದಲೇ ಜಿಯೋ ಗ್ರಾಹಕರಗೆ ಲೈವ್ ಆಗಿದೆ.
4K ರೆಸಲ್ಯೂಶನ್ನಲ್ಲಿ ಐಪಿಎಲ್ 2023:
ಐಪಿಎಲ್ 2023 ಹತ್ತಿರವಾಗುತ್ತಿದ್ದಂತೆ ಕ್ರಿಕೆಟ್ ಪ್ರಿಯರಿಗಾಗಿ ಜಿಯೋ ಎಲ್ಲ ಸಿದ್ಧತೆ ನಡೆಸುತ್ತಿದೆ. ಈ ಭಾರಿಯ ಐಪಿಎಲ್ ಜಿಯೋ ಸಿನಿಮಾ ಆ್ಯಪ್ನಲ್ಲಿ ನೇರಪ್ರಸಾರ ಕಾಣಲಿದೆ. ಪ್ಯಾರಾಮೌಂಟ್ ಗ್ಲೋಬಲ್ ಮತ್ತು ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿ. ನಡುವಿನ ಜಂಟಿ ಉದ್ಯಮವಾಗಿರುವ ವಯೋಕಾಮ್18 ಮೀಡಿಯಾ ಪ್ರೈ. ಕಳೆದ ವರ್ಷದ ಹರಾಜಿನಲ್ಲಿ ಭಾರತದ ಉಪಖಂಡದಲ್ಲಿನ ಡಿಜಿಟಲ್ ಐಪಿಎಲ್ ಪ್ರಸಾರದ ಹಕ್ಕುಗಳನ್ನು 20,500 ಕೋಟಿ ರೂ.ಗೆ ಪಡೆದುಕೊಂಡಿತ್ತು. ಹೀಗಾಗಿ ಜಿಯೋ ಸಿನಿಮಾದಲ್ಲಿ ಐಪಿಎಲ್ ಲೈವ್ ಕಾಣಲಿದೆ. ಜಿಯೋ ಬಳಕೆದಾರರು ಇದನ್ನು ಉಚಿತವಾಗಿ ವೀಕ್ಷಿಸಬಹುದು. ಇದರ ಜೊತೆಗೆ ಐಪಿಎಲ್ನ ಎಲ್ಲ ಪಂದ್ಯಗಳು 4K ರೆಸಲ್ಯೂಶನ್ (UltraHD) ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆಯಂತೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Fri, 24 March 23