Smartphones: ಭಾರತೀಯರು ಎಷ್ಟು ತಿಂಗಳಿಗೊಮ್ಮೆ ಸ್ಮಾರ್ಟ್​ಫೋನ್ ಬದಲಾಯಿಸುತ್ತಾರೆ ಗೊತ್ತೇ?: ಅಚ್ಚರಿ ವಿಚಾರ ಬಹಿರಂಗ

ಮೊಬೈಲ್ ಕಂಪನಿಗಳು ಭಾರತೀಯ ಜನರ ಅನುಕೂಲಕ್ಕೆ ತಕ್ಕಂತೆ ಬೆಲೆಯನ್ನು ನಿಗದಿ ಮಾಡಿ ಹೊಸ ಸ್ಮಾರ್ಟ್​ಫೋನ್ ಅನಾವರಣ ಮಾಡುತ್ತಿದೆ. ಇದರಲ್ಲಿ ಕೆಲವು ಯಶಸ್ಸು ಸಾಧಿಸಿದರೆ ಇನ್ನೂ ಕೆಲವು ಫ್ಲಾಫ್ ಆಗುತ್ತದೆ. ಹೀಗಿರುವಾಗ ಅಧ್ಯಯನದಿಂದ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ.

Smartphones: ಭಾರತೀಯರು ಎಷ್ಟು ತಿಂಗಳಿಗೊಮ್ಮೆ ಸ್ಮಾರ್ಟ್​ಫೋನ್ ಬದಲಾಯಿಸುತ್ತಾರೆ ಗೊತ್ತೇ?: ಅಚ್ಚರಿ ವಿಚಾರ ಬಹಿರಂಗ
Smartphones
Follow us
Vinay Bhat
|

Updated on: Mar 23, 2023 | 8:15 PM

ಜಗತ್ತಿನಲ್ಲಿ ಅತಿ ಹೆಚ್ಚು ಸ್ಮಾರ್ಟ್​​ಫೋನ್​ಗಳು (Smartphones) ಬಿಡುಗಡೆ ಆಗುವ ದೇಶ ಎಂದರೆ ಅದು ಭಾರತ ಎಂದು ಹೇಳಬಹುದು. ಯಾಕೆಂದರೆ ಇಂದು ಭಾರತದಲ್ಲಿ ಮೊಬೈಲ್ (Mobile) ಮಾರುಕಟ್ಟೆ ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ವಾರಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಫೋನ್​ಗಳು ಬಿಡುಗಡೆ ಆಗುತ್ತದೆ. ಸದ್ಯ ದೇಶದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಬ್ರ್ಯಾಂಡ್ ಎಂದರೆ ಅದು ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ, ಒಪ್ಪೋ, ವಿವೋ, ಒನ್​ಪ್ಲಸ್. ಈ ಎಲ್ಲ ಬ್ರ್ಯಾಂಡ್​ಗಳು ಭಾರತೀಯ ಜನರ ಅನುಕೂಲಕ್ಕೆ ತಕ್ಕಂತೆ ಬೆಲೆಯನ್ನು ನಿಗದಿ ಮಾಡಿ ಅನಾವರಣ ಮಾಡುತ್ತಿದೆ. ಇದರಲ್ಲಿ ಕೆಲವು ಯಶಸ್ಸು ಸಾಧಿಸಿದರೆ ಇನ್ನೂ ಕೆಲ ಮೊಬೈಲ್​ಗಳು ಫ್ಲಾಫ್ ಆಗಿದ್ದೂ ಇದೆ. ಹೀಗಿರುವಾಗ ಅಧ್ಯಯನದಿಂದ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ.

ಭಾರತೀಯರು ಹೊಸ ಸ್ಮಾರ್ಟ್​​ಫೋನನ್ನು ಎಷ್ಟು ಸಮಯಕ್ಕೊಮ್ಮೆ ಬದಲಾವಣೆ ಮಾಡುತ್ತಾರೆ ಎಂಬ ಕುರಿತು ಝೀ5 ಸಂಸ್ಥೆ ಇತ್ತೀಚೆಗಷ್ಟೆ ಸರ್ವೆ ನಡೆಸಿತ್ತು. ಇದರ ಪ್ರಕಾರ ಭಾರತದ ಮೆಟ್ರೊ ನಗರಗಳಲ್ಲಿ ವಾಸಿಸುವ ಶೇ. 50 ರಷ್ಟು ಜನರು ಆರು ತಿಂಗಳಿಗೊಮ್ಮೆ ಹೊಸ ಸ್ಮಾರ್ಟ್​​ಫೋನ್ ಖರೀದಿ ಮಾಡುತ್ತಾರಂತೆ. ತಮ್ಮ ಮೊಬೈಲ್ ಕಾರ್ಯನಿರ್ವಹಿಸುವುದು ನಿಧಾನವಾದ ಕೂಡಲೇ ಹೊಸ ಫೋನ್ ಕಡೆ ಇವರು ಮುಖ ಮಾಡುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

WhatsApp New Feature: ಗ್ರೂಪ್ ಅಡ್ಮಿನ್​​ಗಳಿಗೆ ಸಹಕಾರಿಯಾಗುವ 2 ಹೊಸ ಫೀಚರ್ ಪರಿಚಯಿಸಲಿದೆ ವಾಟ್ಸ್ಆ್ಯಪ್; ಏನಿದರ ವಿಶೇಷತೆ?

ಇದನ್ನೂ ಓದಿ
Image
WhatsApp Web: ವಾಟ್ಸ್​ಆ್ಯಪ್​ನಿಂದ ವೆಬ್ ಬಳಕೆದಾರರಿಗೆ ಬಂತು ವಿಶೇಷ ಫೀಚರ್: ಕೂಡಲೇ ಅಪ್ಡೇಟ್ ಮಾಡಿ
Image
108MP ಕ್ಯಾಮೆರಾ, 6000mAh ಬ್ಯಾಟರಿ: ಸ್ಯಾಮ್​ಸಂಗ್​ನಿಂದ ಹುಬ್ಬೇರಿಸುವ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
Image
Pinduoduo: ಈ ಶಾಪಿಂಗ್ ಆ್ಯಪ್ ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ: ಗೂಗಲ್​ನಿಂದ ಎಚ್ಚರಿಕೆಯ ಸಂದೇಶ
Image
Google Down: ಭಾರತದಲ್ಲಿ ಗೂಗಲ್ ಸರ್ವರ್ ಡೌನ್: ಸರ್ಚ್ ಮಾಡಲು ಬಳಕೆದಾರರ ಪರದಾಟ

ಜನರು ಇಂದು ಮೊಬೈಲ್ ಅನ್ನು ಆರಿಸುವಲ್ಲಿ ಸಾಕಷ್ಟು ಜಾಗರೂಕರಾಗಿದ್ದಾರೆ. ಅಧ್ಯಯನದಿಂದ ತಿಳಿದುಬಂದ ಮಾಹಿತಿಯ ಪ್ರಕಾರ, ಜನರು ಇಂದು ಬ್ರ್ಯಾಂಡ್, ಕಾರ್ಯಕ್ಷಮತೆ, ಫೀಚರ್ಸ್​ ಮತ್ತು ತಂತ್ರಜ್ಞಾನವನ್ನು ಗಮನಿಸಿ ಮೊಬೈಲ್ ಅನ್ನು ಆರಿಸಿಕೊಳ್ಳುತ್ತಾರಂತೆ. ಮಹಿಳೆಯರಿಗಿಂತ ಪುರುಷರೇ ಹೆಚ್ಚು ಬ್ರ್ಯಾಂಡ್ ನೇಮ್ ಇರುವ ಫೋನನ್ನು ಆಯ್ಕೆ ಮಾಡುತ್ತಾರೆ ಎಂದು ಅಧ್ಯಯನ ಹೇಳಿದೆ.

ಐದರಲ್ಲಿ ಎರಡು ಜನರು 30,000 ರೂ. ಅಥವಾ ಅದಕ್ಕಿಂತ ಅಧಿಕ ದರ ಇರುವ ಸ್ಮಾರ್ಟ್​​ಫೋನ್ ಅನ್ನು ಖರೀದಿ ಮಾಡುತ್ತಾರಂತೆ. ಮುಖ್ಯವಾಗಿ 34 ರಿಂದ 44 ವಯಸ್ಸಿನವರು 30,000 ರೂ. ಫೋನಿನ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಅಚ್ಚರಿ ಎಂದರೆ ಶೇ. 70 ರಷ್ಟು ನಾನ್ ಮೆಟ್ರೊ ಜನರು ಆನ್​ಲೈನ್ ಮೂಲಕ ಮೊಬೈಲ್ ಅನ್ನು ಖರೀದಿ ಮಾಡಲು ಮುಂದಾಗುತ್ತಾರಂತೆ. ಇಲ್ಲೂ 30,000 ರೂ. ಗಳ ಆಸುಪಾಸಿನ ಮೊಬೈಲ್​ಗೆ ಹೆಚ್ಚು ಬೇಡಿಕೆ ಇದೆ.

ಭಾರತದಲ್ಲಿ 30,000 ರೂ. ಆಸುಪಾಸಿಗೆ ಇಂದು ಅನೇಕ ಸ್ಮಾರ್ಟ್​ಫೋನ್​ಗಳು ದೊರೆಯುತ್ತಿದೆ. ರೆಡ್ಮಿ, ಪೋಕೋ, ಸ್ಯಾಮ್​ಸಂಗ್, ಒಪ್ಪೋ ದಂತಹ ಕಂಪನಿಯ ಹೆಚ್ಚಿನ ಮೊಬೈಲ್​ಗಳು 20,000 – 30,000 ರೂ. ಒಳಗಡೆಯೇ ಇದೆ. ಕಳೆದ ವರ್ಷ ಮಾರುಕಟ್ಟೆಗೆ ಕಾಲಿಟ್ಟ ನಥಿಂಗ್ ಕಂಪನಿ ತನ್ನ ಮೊಟ್ಟ ಮೊದಲ ಸ್ಮಾರ್ಟ್​​ಫೋನ್ ನಥಿಂಗ್ ಫೋನ್ 1 ಕೂಡ ಇದೇ ಪ್ರೈಸ್ ರೇಂಜ್​ನಲ್ಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್