Google Down: ಭಾರತದಲ್ಲಿ ಗೂಗಲ್ ಸರ್ವರ್ ಡೌನ್: ಸರ್ಚ್ ಮಾಡಲು ಬಳಕೆದಾರರ ಪರದಾಟ

ಭಾರತದಾದ್ಯಂತ ಬಳಕೆದಾರರು ಇಮೇಲ್​​ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಕೂಡ ಸಾಧ್ಯವಾಗುತ್ತಿಲ್ಲ. ಗುರುವಾರ ಬೆಳಗ್ಗೆ ಗೂಗಲ್ ಸರ್ವರ್ ಡೌನ್ (Google Server Down) ಆದ ಬಗ್ಗೆ ವರದಿ ಆಗಿದೆ.

Google Down: ಭಾರತದಲ್ಲಿ ಗೂಗಲ್ ಸರ್ವರ್ ಡೌನ್: ಸರ್ಚ್ ಮಾಡಲು ಬಳಕೆದಾರರ ಪರದಾಟ
Google
Follow us
|

Updated on:Mar 23, 2023 | 12:28 PM

ಭಾರತದ ಅನೇಕ ಕಡೆಗಳಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ (Google) ಸರ್ವರ್ ಡೌನ್ ಆಗಿದೆ. ಗೂಗಲ್ ಒಡೆತನದ ಯೂಟ್ಯೂಬ್, ಜಿ-ಮೇಲ್ (G-Mail) ಗೂಗಲ್ ಡ್ರೈವ್​ನ ಸರ್ವರ್ ಡೌನ್ ಆಗಿದ್ದು ಬಳಕೆದಾರರು ಉಪಯೋಗಿಸಲು ಪರದಾಡುತ್ತಿದ್ದಾರೆ. ಭಾರತದಾದ್ಯಂತ ಬಳಕೆದಾರರು ಇಮೇಲ್​​ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಕೂಡ ಸಾಧ್ಯವಾಗುತ್ತಿಲ್ಲ. ಗುರುವಾರ ಬೆಳಗ್ಗೆ ಗೂಗಲ್ ಸರ್ವರ್ ಡೌನ್ (Google Server Down) ಆದ ಬಗ್ಗೆ ವರದಿ ಆಗಿದೆ. ಡೌನ್​ಡೆಟೆಕ್ಟರ್ ಮಾಡಿರುವ ವರದಿಯ ಪ್ರಕಾರ, ಗೂಗಲ್ ಸರ್ವರ್ ಡೌನ್ ಆದ ಬಗ್ಗೆ ಭಾರತದಲ್ಲಿ 1,500 ಕ್ಕೂ ಅಧಿಕ ರಿಪೋರ್ಟ್ ಬಂದಿದೆಯಂತೆ. ಟ್ವಿಟ್ಟರ್​ನಲ್ಲಿ ಗೂಗಲ್ ಡೌನ್ ಹ್ಯಾಶ್​ಟ್ಯಾಗ್ ಟ್ರೆಂಡ್ ಆಗಿದ್ದು ಅನೇಕರು ಟ್ವೀಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
WhatsApp New Feature: ಗ್ರೂಪ್ ಅಡ್ಮಿನ್​​ಗಳಿಗೆ ಸಹಕಾರಿಯಾಗುವ 2 ಹೊಸ ಫೀಚರ್ ಪರಿಚಯಿಸಲಿದೆ ವಾಟ್ಸ್ಆ್ಯಪ್; ಏನಿದರ ವಿಶೇಷತೆ?
Image
Moto G32: ಮೋಟೋ ಫೋನ್​ಗಳಿಗೆ ಭರ್ಜರಿ ಬೇಡಿಕೆ: ಹಳೆಯ ಮೊಬೈಲ್ ಹೊಸ ಸ್ಟೋರೇಜ್​ನಲ್ಲಿ ಬಿಡುಗಡೆ
Image
Tech Tips: ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಸೇಲ್ ಆಗುತ್ತಿದೆ ಫೇಕ್ ಸ್ಮಾರ್ಟ್​ಫೋನ್​ಗಳು: ಕಂಡುಹಿಡಿಯುವುದು ಹೇಗೆ?
Image
Twitter: ಶೀಘ್ರದಲ್ಲೇ ದೀರ್ಘ ರೂಪದ ಟ್ವೀಟ್‌ಗಳ ಅಕ್ಷರ ಮಿತಿ 10,000ಕ್ಕೆ ಹೆಚ್ಚಿಸಲಿದೆ ಟ್ವಿಟರ್: ಸಿಇಒ ಎಲಾನ್ ಮಸ್ಕ್

”502 ದೋಷ ಕಂಡುಬಂದಿದ್ದು ಸರ್ವರ್ ತಾತ್ಕಾಲಿಕ ತೊಂದರೆ ಎದುರಿಸಿದೆ. ನಿಮ್ಮ ವಿನಂತಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು 30 ಸೆಕೆಂಡುಗಳ ನಂತರ ಮತ್ತೆ ಪ್ರಯತ್ನಿಸಿ”, ಎಂಬ ಸಂದೇಶ ಗೂಗಲ್​ನಲ್ಲಿ ಸರ್ಚ್ ಕೊಟ್ಟಾಗ ಕಾಣಿಸುತ್ತದೆ.

ಗೂಗಲ್ ಮಾಲೀಕತ್ವದ ಯೂಟ್ಯೂಬ್, ಡ್ರೈವ್, ಜಿಮೇಲ್, ಡ್ಯೂ, ಗೂಗಲ್ ಮೀಟ್, ಹ್ಯಾಂಗ್​ಔಟ್ಸ್, ಡಾಕ್ಸ್, ಶೀಟ್‌ಗಳಂತಹ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಬಳಕೆದಾರರು ತಮಗೆ ಕಂಡುಬಂದ ದೋಷಗ ಬಗ್ಗೆ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ, ಇದರ ಬಗ್ಗೆ ಗೂಗಲ್ ಇನ್ನೂ ಪ್ರತಿಕ್ರಿಯಿಸಿಲ್ಲ.

ತಂತ್ರಜ್ಞಾನದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:54 am, Thu, 23 March 23