AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಸೇಲ್ ಆಗುತ್ತಿದೆ ಫೇಕ್ ಸ್ಮಾರ್ಟ್​ಫೋನ್​ಗಳು: ಕಂಡುಹಿಡಿಯುವುದು ಹೇಗೆ?

Fake Smartphones: ಇತ್ತೀಚೆಗಷ್ಟೆ ನೊಯಿಡಾದಲ್ಲಿ ಪೊಲೀಸರು ಐಫೋನ್ 13 (iPhone 13) ನಕಲಿ ಫೋನ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂರು ಜನರ ತಂಡವನ್ನು ಬಂಧಿಸಿದ್ದರು. ಹೀಗಿರುವಾಗ ನಿಮ್ಮಲ್ಲಿರುವ ಸ್ಮಾರ್ಟ್​ಫೋನ್ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯುವುದು ಹೇಗೆ?.

Tech Tips: ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಸೇಲ್ ಆಗುತ್ತಿದೆ ಫೇಕ್ ಸ್ಮಾರ್ಟ್​ಫೋನ್​ಗಳು: ಕಂಡುಹಿಡಿಯುವುದು ಹೇಗೆ?
Smartphones
Vinay Bhat
|

Updated on: Mar 21, 2023 | 8:15 PM

Share

ಮಾರುಕಟ್ಟೆಯಲ್ಲಿಂದು ನಕಲಿ ಫೋನ್​ಗಳ (Fake Smartphones) ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದು ಭಾರತದಲ್ಲಿ ಹೆಚ್ಚು ಎಂಬುದು ಆತಂಕಕಾರಿ ವಿಚಾರ. ಆನ್​ಲೈನ್ ಮತ್ತು ಆಫ್​ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಗ್ರಾಹಕರಿಗೆ ತಿಳಿಯದಂತೆ ಈರೀತಿಯ ವಂಚನೆಗಳು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ನೊಯಿಡಾದಲ್ಲಿ ಪೊಲೀಸರು ಐಫೋನ್ 13 (iPhone 13) ನಕಲಿ ಫೋನ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂರು ಜನರ ತಂಡವನ್ನು ಬಂಧಿಸಿದ್ದರು. ಇವರಿಂದ 60ಕ್ಕೂ ಅಧಿಕ ಫೇಕ್ ಐಫೋನ್​​ಗಳನ್ನು ವಶಪಡಿಸಿಕೊಳ್ಳಲಾಯಿತು. ಪೊಲೀಸರು ಹೇಳುವ ಪ್ರಕಾರ, ಇವರು ದೆಹಲಿಯಲ್ಲಿ ಕೇವಲ 12,000 ರೂಪಾಯಿಗೆ ಫೋನನ್ನು ಖರೀದಿಸಿ ಚೀನಾದ ಶಾಪಿಂಗ್ ವೆಬ್​ಸೈಟ್​ನಿಂದ ಥೇಟ್ ಐಫೋನ್ ರೀತಿಯ ಬಾಕ್ಸ್ ಅನ್ನು ಆರ್ಡರ್ ಮಾಡಿ ಅದಕ್ಕೆ ಆ್ಯಪಲ್ (Apple) ಸ್ಟಿಕ್ಕರ್ ಅಂಟಿಸಿ ಸೇಲ್ ಮಾಡುತ್ತಿದ್ದರಂತೆ. ಹೀಗಿರುವಾಗ ನಿಮ್ಮಲ್ಲಿರುವ ಸ್ಮಾರ್ಟ್​ಫೋನ್ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯುವುದು ಹೇಗೆ?.

IMEI ನಂಬರ್: ಎಲ್ಲ ಒರಿಜಿನಲ್ ಸ್ಮಾರ್ಟ್​ಫೋನ್​ಗಳಲ್ಲಿ IMEI ಇರುತ್ತದೆ. ನಿಮ್ಮ ಫೋನ್ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಲು ಇರುವ ಸುಲಭ ವಿಧಾನ ಇದಾಗಿದೆ. ಅನೇಕ ಕಡೆಗಳಲ್ಲಿ ಈ IMEI ಸಂಖ್ಯೆಯನ್ನು ನೀವು ಪರಿಶೀಲಿಸಬಹುದು. ನಿಮ್ಮ ಮೊಬೈಲ್ ಬಾಕ್ಸ್​ನಲ್ಲಿ ಕೂಡ ಇದು ಇರುತ್ತದೆ. ಸ್ಮಾರ್ಟ್​ಫೋನ್​ನ ಸೆಟ್ಟಿಂಗ್ ವಿಭಾಗಕ್ಕೆ ಹೋದರೆ ಅಲ್ಲೂ ನೋಡಬಹುದು.

ಸೆಟ್ಟಿಂಗ್ಸ್​ನಲ್ಲಿ IMEI ನಂಬರ್ ನೋಡಲು ಹೀಗೆ ಮಾಡಿ. ಸೆಟ್ಟಿಂಗ್ಸ್-ಜನರಲ್ ಇಲ್ಲಿ ಅಬೌಟ್ ಮೇಲೆ ಕ್ಲಿಕ್ ಮಾಡಿದರೆ ಸಿಗುತ್ತದೆ. ಇಲ್ಲಿ ನಿಮಗೆ IMEI ನಂಬರ್ ಕಾಣಿಸಿಲ್ಲ ಎಂದಾದರೆ ನಿಮ್ಮ ಫೋನ್ ನಕಲಿ ಆಗಿರುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ
Image
iQOO Z7 5G: ಭಾರತದಲ್ಲಿ ಬಹುನಿರೀಕ್ಷಿತ ಐಕ್ಯೂ Z7 5G ಫೋನ್ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ
Image
iPhone 15: ಐಫೋನ್ 15 ನಲ್ಲಿ ಇರಲಿದೆ ಯುಎಸ್​ಬಿ ಟೈಪ್-ಸಿಯ ಅತ್ಯಂತ ವೇಗದ ಚಾರ್ಜರ್: ಆದರೆ…
Image
Poco X5 5G: 22 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವ ಪೋಕೋ X5 5G ಫೋನ್ ಇಂದಿನಿಂದ ಖರೀದಿಗೆ ಲಭ್ಯ
Image
Tech Tips: ನಿಮ್ಮ ಇನ್​ಸ್ಟಾಗ್ರಾಮ್ ರೀಲ್ಸ್, ಫೋಟೋಗಳು ಸಖತ್ ವೈರಲ್ ಆಗಬೇಕೇ?: ಇಲ್ಲಿದೆ ಹೊಸ ಟ್ರಿಕ್

Tech Tips: ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನ ಹೈಡ್ ಮಾಡಿ ಯಾರು ಸ್ಟೇಟಸ್ ಹಾಕಿದ್ದಾರೆ ತಿಳಿಯಬೇಕೇ?: ಇಲ್ಲಿದೆ ಟ್ರಿಕ್

ನಿಮಗೆ ಹೇಗೆ ಪರಿಶೀಲಿಸುವುದು ಎಂದು ತಿಳಿಯಲು ಸಾಧ್ಯವಾಗದಿದ್ದರೆ ನಿಮ್ಮ ಪಕ್ಕದ ಮೊಬೈಲ್ ಸ್ಟೋರ್​ಗೆ ಭೇಟಿ ನೀಡಿ. ಅವರು ನಿಮ್ಮ ಫೋನನ್ನು ರನ್ ಮಾಡಿ ಇದು ಫೇಕ್ ಅಥವಾ ರಿಯಲ್ ಎಂಬುದನ್ನು ತಿಳಯಲು ಸಹಾಯ ಮಾಡುತ್ತಾರೆ. ಅಂತೆಯೆ ನೀವು ದುಬಾರಿ ಬೆಲೆಯ ಸ್ಮಾರ್ಟ್​ಫೋನ್ ಖರೀದಿಸಬೇಕು ಎಂದುಕೊಂಡಿದ್ದರೆ ಅದು ಅತಿ ಕಡಿಮೆ ಬೆಲೆ ಇದೆ ಎಂದು ಸಿಕ್ಕಸಿಕ್ಕಲ್ಲಿ ಪಡೆದುಕೊಳ್ಳಬೇಡಿ. ನಂಬಿಕೆಗೆ ಅರ್ಹವಾದ ತಾಣ ಅಥವಾ ರಿಟೆಲ್ ಸ್ಟೋರ್​ಗಳನ್ನು ಆಯ್ಕೆ ಮಾಡುವುದು ಉತ್ತಮ.

ಹೆಚ್ಚಿನ ಫೇಕ್ ಮೊಬೈಲ್​ಗಳು ಅಥವಾ ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳು ತಪ್ಪಾದ ಅಕ್ಷರವನ್ನು ಹೊಂದಿರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೆಳಕಿಗೆ ಬರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲಿ ಕೆಲವು ಉದಾಹರಣೆಗಳು ಇಲ್ಲಿದೆ.

Samsung = Sammsung or Samsang or Samsong, iPhone = iPone or iPhoon, Huawei= Hauwei or Huawai, Xiaomi = Xaiomi or Xioami.Samsung = Sammsung or Samsang or Samsong, iPhone = iPone or iPhoon, Huawei= Hauwei or Huawai, Xiaomi = Xaiomi or Xioami.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ
ಕುಮಟಾ: ದೇವಿಮನೆ ಘಟ್ಟ ಭಾಗ ಕುಸಿತ, ಹೆದ್ದಾರಿಯಲ್ಲಿ ಏಕಮುಖ ಸಂಚಾರ
ಕುಮಟಾ: ದೇವಿಮನೆ ಘಟ್ಟ ಭಾಗ ಕುಸಿತ, ಹೆದ್ದಾರಿಯಲ್ಲಿ ಏಕಮುಖ ಸಂಚಾರ
ಜನ ಅಧಿಕಾರ ಕೊಟ್ಟಿರೋದು ಹೋಲಿಕೆ ಮಾಡಲಲ್ಲ, ಕೆಲಸ ಮಾಡಲು: ಯದುವೀರ್
ಜನ ಅಧಿಕಾರ ಕೊಟ್ಟಿರೋದು ಹೋಲಿಕೆ ಮಾಡಲಲ್ಲ, ಕೆಲಸ ಮಾಡಲು: ಯದುವೀರ್
ಬೆಂಗಳೂರಲ್ಲಿ ಸ್ಫೋಟಕ ಸಾಮಗ್ರಿ ಪತ್ತೆಯಾದ ಬಗ್ಗೆ ಸಚಿವರಲ್ಲಿ ಮಾಹಿತಿ ಕೊರತೆ
ಬೆಂಗಳೂರಲ್ಲಿ ಸ್ಫೋಟಕ ಸಾಮಗ್ರಿ ಪತ್ತೆಯಾದ ಬಗ್ಗೆ ಸಚಿವರಲ್ಲಿ ಮಾಹಿತಿ ಕೊರತೆ
ತಡೆಗೋಡೆ ಇಲ್ಲದಿದ್ದರೆ ಕಾಲುವೆಯಲ್ಲಿ ಹರಿದು ಹೋಗಬಹುದಾಗಿದ್ದ ಕಾರು
ತಡೆಗೋಡೆ ಇಲ್ಲದಿದ್ದರೆ ಕಾಲುವೆಯಲ್ಲಿ ಹರಿದು ಹೋಗಬಹುದಾಗಿದ್ದ ಕಾರು
ತಮ್ಮ ವಕೀಲರೊಂದಿಗೆ ಚರ್ಚೆ ಚರ್ಚಸಿ ದೂರು ದಾಖಲಿಸಿರುವ ಚಿತ್ರನಟಿ ರಮ್ಯಾ
ತಮ್ಮ ವಕೀಲರೊಂದಿಗೆ ಚರ್ಚೆ ಚರ್ಚಸಿ ದೂರು ದಾಖಲಿಸಿರುವ ಚಿತ್ರನಟಿ ರಮ್ಯಾ
ಸೇತುವೆ ಮೇಲೆ ವಾಹನಗಳ ಸಂಚಾರ ಬಂದ್, ಸವಾರರಿಗೆ ಪರದಾಟ
ಸೇತುವೆ ಮೇಲೆ ವಾಹನಗಳ ಸಂಚಾರ ಬಂದ್, ಸವಾರರಿಗೆ ಪರದಾಟ
ಅರಬ್ಬಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ
ಅರಬ್ಬಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ