Tech Tips: ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನ ಹೈಡ್ ಮಾಡಿ ಯಾರು ಸ್ಟೇಟಸ್ ಹಾಕಿದ್ದಾರೆ ತಿಳಿಯಬೇಕೇ?: ಇಲ್ಲಿದೆ ಟ್ರಿಕ್

WhatsApp Tricks: ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ಹಂಚಿಕೊಳ್ಳುವ ಮುನ್ನ ಸೆಟ್ಟಿಂಗ್​ಗೆ ಹೋಗಿ ಅಲ್ಲಿ ನಾವು ಅಪ್ಲೋಡ್ ಮಾಡುವ ಸ್ಟೇಟಸ್ ಎಲ್ಲರಿಗೆ ಕಾಣಬೇಕಾ? ಅಥವಾ ಕೆಲವರಿಗೆ ಮಾತ್ರ ಕಾಣುವಂತೆ ಮಾಡಬೇಕಾ ಎಂಬ ಆಯ್ಕೆಯಿದೆ.

Tech Tips: ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನ ಹೈಡ್ ಮಾಡಿ ಯಾರು ಸ್ಟೇಟಸ್ ಹಾಕಿದ್ದಾರೆ ತಿಳಿಯಬೇಕೇ?: ಇಲ್ಲಿದೆ ಟ್ರಿಕ್
WhatsApp Status Tricks
Follow us
Vinay Bhat
|

Updated on: Mar 20, 2023 | 6:30 PM

ಮೆಟಾ (Meta) ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಕಳೆದ ವರ್ಷದಂತೆ ಈ ವರ್ಷ ಕೂಡ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಅನೇಕ ಅಪ್ಡೇಟ್ ನೀಡುವಲ್ಲಿ ಕೆಲಸ ಮಾಡುತ್ತಿದೆ. ಆಂಡ್ರಾಯ್ಡ್ (Android), ಐಒಎಸ್​ಗೆ ಮಾತ್ರವಲ್ಲದೆ ಈಗೀಗ ವೆಬ್ ಬಳಕೆದಾರರಿಗೆ, ಟ್ಯಾಬ್ಲೆಟ್​ನವರಿಗೆ ಕೂಡ ವಿನೂತನ ಫೀಚರ್​ಗಳನ್ನು ನೀಡುತ್ತಿದೆ. ವಾಟ್ಸ್​ಆ್ಯಪ್​ಗೆ ಸೆಡ್ಡುಹೊಡೆಯುವಂತಹ ಅನೇಕ ಆ್ಯಪ್​ಗಳು ಬಂದರೂ ಇದು ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ತನ್ನ ಬಳಕೆದಾರರಿಗೆ ಸದಾ ಒಂದಲ್ಲ ಒಂದು ಅನುಕೂಲಕರ ಫೀಚರ್​​ಗಳನ್ನು ಪರಿಚಯಿಸುತ್ತಿರುವ ವಾಟ್ಸ್ಆ್ಯಪ್​ನಲ್ಲಿ ಸ್ಟೇಟಸ್ (WhatsApp Status) ಅಪ್ಲೋಡ್ ಮಾಡುವಾಗ ಯಾರಿಗೆ ಬೇಕು ಅವರಿಗೆ ಮಾತ್ರ ಕಾಣಿಸುವಂತೆ ಹಂಚಿಕೊಳ್ಳುವ ಆಯ್ಕೆ ಕೂಡ ಇದೆ.

ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ಹಂಚಿಕೊಳ್ಳುವ ಮುನ್ನ ಸೆಟ್ಟಿಂಗ್​ಗೆ ಹೋಗಿ ಅಲ್ಲಿ ನಾವು ಅಪ್ಲೋಡ್ ಮಾಡುವ ಸ್ಟೇಟಸ್ ಎಲ್ಲರಿಗೆ ಕಾಣಬೇಕಾ? ಅಥವಾ ಕೆಲವರಿಗೆ ಮಾತ್ರ ಕಾಣುವಂತೆ ಮಾಡಬೇಕಾ? ಎಂಬ ಆಯ್ಕೆಯಿದೆ. ಇದರಿಂದ ನಿಮ್ಮ ಸ್ನೇಹಿತರು ನಿಮಗೆ ಮಾತ್ರ ಕಾಣದಂತೆ ಹಾಗೂ ಉಳಿದವರೆಲ್ಲರಿಗೂ ಕಾಣುವಂತೆ ಸ್ಟೇಟಸ್ ಹಾಕಬಹುದು. ಹೀಗಿದ್ದಾಗ ಇದನ್ನು ನೋಡಲು ನಿಮಗೆ ವಾಟ್ಸ್​ಆ್ಯಪ್​ನಲ್ಲಿ ಸಾಧ್ಯವಿಲ್ಲ. ಆದರೆ, ಇದಕ್ಕೊಂದು ಟ್ರಿಕ್ ಇದೆ. ಹೀಗೆ ಮಾಡಿದರೆ ನಿಮ್ಮನ್ನ ಹೈಡ್ ಮಾಡಿ ನಿಮ್ಮ ಸ್ನೇಹಿತರು ಸ್ಟೇಟಸ್ ಹಾಕಿದರೆ ಅದನ್ನು ನೋಡಬಹುದು.

Instagram Blue Tick: ಇನ್​ಸ್ಟಾಗ್ರಾಮ್, ಫೇಸ್​ಬುಕ್​ನಲ್ಲಿ ಬಂದೇ ಬಿಡ್ತು ಹಣ ಕೊಟ್ಟು ಬ್ಲೂ ಟಿಕ್ ಪಡೆಯುವ ಆಯ್ಕೆ: ಬೆಲೆ ಎಷ್ಟು?

ಇದನ್ನೂ ಓದಿ
Image
Cyber Crime: ಎಸ್​ಬಿಐ, ಹೆಚ್​ಡಿಎಫ್​ಸಿ ಬ್ಯಾಂಕ್ ಬಳಕೆದಾರರಿಗೆ ಬರುತ್ತಿದೆ ಫೇಕ್ ಮೆಸೇಜ್: ತಪ್ಪಿಯೂ ಹೀಗೆ ಮಾಡಬೇಡಿ
Image
Tech Tips: ಪಿಡಿಫ್ ಫೈಲ್​ಗಳ ಪಾಸ್‌ವರ್ಡ್ ರಿಮೂವ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
Image
Tecno Spark 8 Pro: ಅತ್ಯುತ್ತಮ ಕ್ಯಾಮೆರಾ, ಭರ್ಜರಿ ಬ್ಯಾಟರಿಯ ಸ್ಮಾರ್ಟ್​ಫೋನ್ ಬೇಕೇ?: ಕೇವಲ 8,399 ರೂ. ಗೆ ಈ ಫೋನನ್ನು ಖರೀದಿಸಿ
Image
Tech Tips: ನಿಮ್ಮ ಜಿಮೇಲ್​ನಲ್ಲಿ ಸ್ಟೋರೇಜ್​ ಫುಲ್ ಆಗಿದ್ದರೆ ಟೆನ್ಶನ್ ಬೇಡ: ಈ ಟ್ರಿಕ್ ಫಾಲೋ ಮಾಡಿ

ಆದರೆ, ಈ ಆಯ್ಕೆ ನೇರವಾಗಿ ವಾಟ್ಸ್​ಆ್ಯಪ್ ನೀಡಿಲ್ಲ. ಬದಲಾಗಿ ವಾಟ್ಸ್​ಆ್ಯಪ್ ಅನ್ನು ಹಿಂಬಾಲಿಸಿಕೊಂಡು ಇದರಲ್ಲಿ ಇಲ್ಲದ ಕೆಲವು ಫೀಚರ್​ಗಳನ್ನು ಅನೇಕ ಇತರೆ ಥರ್ಡ್ ಪಾರ್ಟಿ ಆ್ಯಪ್​ಗಳು ನೀಡುತ್ತಿವೆ. ಇದರಲ್ಲಿ ಜಿಬಿ ವಾಟ್ಸ್ಆ್ಯಪ್ (GBWhatsApp) ಕೂಡ ಒಂದು. ಇದರ ಮೂಲಕ ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನ ಹೈಡ್ ಮಾಡಿ ಯಾರು ಸ್ಟೇಟಸ್ ಹಾಕಿದ್ದಾರೆ ತಿಳಿಯಬಹುದು.

ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಇನ್​ಸ್ಟಾಲ್ ಮಾಡಿದ ಬಳಿಕ ಆ್ಯಪ್ ಐಕಾಲ್ ಮೇಲೆ ಕ್ಲಿಕ್ ಮಾಡಿ. ಓಪನ್ ಆದ ಕೂಡಲೆ ಬಲ ಬದಿಯಲ್ಲಿರುವ ಮೂರು ಡಾಟ್ ಮೇಲೆ ಒತ್ತಿ. ಈ ಸಂದರ್ಭ ಕೆಳಗಡೆ ಹೈಡ್ ವೀವ್ ಸ್ಟೇಟಸ್ (Hide View Status) ಎಂಬ ಆಯ್ಕೆ ಕಾಣುತ್ತದೆ. ಇದನ್ನು ಒತ್ತಿದರೆ ನಿಮ್ಮನ್ನ ಹೈಡ್ ಮಾಡಿ ಸ್ಟೇಟಸ್ ಹಾಕಿದವರು ಯಾರು?, ಯಾವ ಸ್ಟೇಟಸ್ ಹಾಕಿದ್ದಾರೆ ಎಂಬುದು ಕಾಣಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮನ್ನ ಬ್ಲಾಕ್ ಮಾಡಿರುವವರ ಸ್ಟೇಟಸ್ ಕೂಡ ಇದರಲ್ಲಿ ನೋಡಬಹುದು.

ಎಚ್ಚರ ವಹಿಸಿ:

ಜಿಬಿ ವಾಟ್ಸ್ಆ್ಯಪ್, ಇದೊಂದು ಥರ್ಡ್ ಪಾರ್ಟಿ ಆ್ಯಪ್ ಆಗಿದ್ದು ಬಳಕೆ ಮಾಡುವ ಮುನ್ನ ಎಚ್ಚರವಹಿಸಿ. ಈ ಆ್ಯಪ್ ನಿಮ್ಮ ಖಾಸಗಿ ಮಾಹಿತಿಯನ್ನು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಈ ಆಯ್ಕೆ ಜಿಬಿ ವಾಟ್ಸ್ಆ್ಯಪ್​ನ ನೂತನ ಆವೃತ್ತಿಯಲ್ಲಿ ಕೊಂಚ ಬದಲಾವಣೆ ಹೊಂದಿದೆ.

ವಾಟ್ಸ್​ಆ್ಯಪ್ ಗ್ರೂಪ್​ನಲ್ಲಿ ಬದಲಾವಣೆ:

ವಾಟ್ಸ್​ಆ್ಯಪ್ ಮತ್ತೊಂದು ಹೊಸ ಫೀಚರ್ ಬಗ್ಗೆ ಘೋಷಣೆ ಮಾಡಿದೆ. ಅದುವೇ ಗ್ರೂಪ್​ನಲ್ಲಿ ಫೋನ್ ನಂಬರ್ ಬದಲಿಗೆ ಹೆಸರು ಕಾಣಿಸುವಂತಹ ಆಯ್ಕೆ. ಅಂದರೆ ಬಳಕೆದಾರರು ವಾಟ್ಸ್​ಆ್ಯಪ್​ ಗ್ರೂಪ್‌ನಲ್ಲಿ ಯಾವುದೇ ಅಪರಿಚಿತ ಸಂಪರ್ಕದಿಂದ ಸಂದೇಶವನ್ನು ಸ್ವೀಕರಿಸಿದರೆ ಚಾಟ್ ಪಟ್ಟಿಯೊಳಗೆ ಬಳಕೆದಾರರ ಫೋನ್‌ ಸಂಖ್ಯೆ ಬದಲಿಗೆ ಹೆಸರುಗಳನ್ನು ತೋರಿಸುತ್ತದೆ. ಈ ಮೂಲಕ ನಂಬರ್ ಸೇವ್ ಮಾಡದೆ ಮೆಸೇಜ್ ಕಳುಹಿಸಿದವರು ಯಾರೆಂದು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್