Tech Tips: ನಿಮ್ಮ ಇನ್​ಸ್ಟಾಗ್ರಾಮ್ ರೀಲ್ಸ್, ಫೋಟೋಗಳು ಸಖತ್ ವೈರಲ್ ಆಗಬೇಕೇ?: ಇಲ್ಲಿದೆ ಹೊಸ ಟ್ರಿಕ್

Instagram Tips and Tricks: ಕೆಕೆಲವರು ತಮ್ಮ ಇನ್​ಸ್ಟಾದಲ್ಲಿ ಫೋಟೋ, ವಿಡಿಯೋ ಎಷ್ಟೇ ಹಾಕಿದರೂ ಅದಕ್ಕೆ ಲೈಕ್ಸ್, ಕಮೆಂಟ್ ಬರುವುದೇ ಇಲ್ಲ. ಹಾಗಾದರೆ ನಿಮ್ಮ ಪೋಸ್ಟ್​ಗೆ ಹೆಚ್ಚು ಲೈಕ್ಸ್, ವೀವ್ಸ್, ಕಮೆಂಟ್ ಬರಬೇಕು ಅಂದುಕೊಂಡಿದ್ದರೆ ಇಲ್ಲಿದೆ ನೋಡಿ ಟಿಪ್ಸ್.

Tech Tips: ನಿಮ್ಮ ಇನ್​ಸ್ಟಾಗ್ರಾಮ್ ರೀಲ್ಸ್, ಫೋಟೋಗಳು ಸಖತ್ ವೈರಲ್ ಆಗಬೇಕೇ?: ಇಲ್ಲಿದೆ ಹೊಸ ಟ್ರಿಕ್
Instagram Tricks
Follow us
|

Updated on: Mar 20, 2023 | 8:30 PM

ಇಂದು ಸಾಮಾಜಿಕ ಜಾಲತಾಣವನ್ನು ಬಳಸುತ್ತಿರುವವರ ಸಂಖ್ಯೆ ಕೋಟಿಗಟ್ಟಲೆ ಇದೆ. ಮೆಟಾ ಒಡೆತನದ ಫೇಸ್​ಬುಕ್, ವಾಟ್ಸ್​ಆ್ಯಪ್ (WhatsApp) ಮತ್ತು ಇನ್​ಸ್ಟಾಗ್ರಾಮ್ ಟಾಪ್ 3 ಸೋಷಿಯಲ್ ಮೀಡಿಯಾ ಆ್ಯಪ್ ಆಗಿಬಿಟ್ಟಿದೆ. ವಿಶ್ವದಲ್ಲಿ ಈಗ ವಾಟ್ಸ್​ಆ್ಯಪ್ ಬಿಟ್ಟರೆ ಹೆಚ್ಚಿನ ಜನರು ಉಪಯೋಗಿಸುತ್ತಿರುವುದು ಇನ್​ಸ್ಟಾಗ್ರಾಮ್. ಟಿಕ್​ಟಾಕ್ (TikTok) ನಿಷೇಧವಾದ ಬಳಿಕ ಭಾರತದಲ್ಲಿ ಇನ್​ಸ್ಟಾ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. ಇದರಲ್ಲಿರುವ ರೀಲ್ಸ್‌ ಆಯ್ಕೆಗೆ ಜನರು ಮನಸೋತರು. ಟಿಕ್‌ಟಾಕ್‌ ಬಳಿಕ ಈಗ ಹೆಚ್ಚಿನ ಜನರು ಇನ್‌ಸ್ಟಾಗ್ರಾಮ್‌ ರೀಲ್ಸ್​ಗೆ ಅಂಟಿಕೊಂಡು ಬಿಟ್ಟಿದ್ದಾರೆ. ಇದಕ್ಕೆ ತಕ್ಕಂತೆ ಇನ್‌ಸ್ಟಾಗ್ರಾಮ್‌ (Instagram) ಕೂಡ ತನ್ನ ರೀಲ್ಸ್‌ನಲ್ಲಿ ಹಲವು ಆಕರ್ಷಕ ಫೀಚರ್​ಗಳನ್ನು ಕೂಡ ಪರಿಚಯಿಸುತ್ತಾ ಬರುತ್ತಿದೆ. ಆದರೆ, ಕೆಲವರು ತಮ್ಮ ಇನ್​ಸ್ಟಾದಲ್ಲಿ ಫೋಟೋ, ವಿಡಿಯೋ ಎಷ್ಟೇ ಹಾಕಿದರೂ ಅದಕ್ಕೆ ಲೈಕ್ಸ್, ಕಮೆಂಟ್ ಬರುವುದೇ ಇಲ್ಲ. ಹಾಗಾದರೆ ನಿಮ್ಮ ಪೋಸ್ಟ್​ಗೆ ಹೆಚ್ಚು ಲೈಕ್ಸ್, ವೀವ್ಸ್, ಕಮೆಂಟ್ ಬರಬೇಕು ಅಂದುಕೊಂಡಿದ್ದರೆ ಇಲ್ಲಿದೆ ನೋಡಿ ಟಿಪ್ಸ್.

ನೀವು ಫೇಸ್​ಬುಕ್ ಖಾತೆ ಹೊಂದಿದ್ದರೆ ಮೊದಲು ಇನ್‌ಸ್ಟಾಗ್ರಾಂಗೆ ಲಿಂಕ್ ಮಾಡಿ. ಯಾಕೆಂದರೆ ನೀವು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಚಿತ್ರಗಳು, ವಿಡಿಯೋಗಳಲ್ಲದೆ, ನಿಮ್ಮ ಸ್ಟೋರಿಗಳನ್ನು ಫೇಸ್​ಬುಕ್​ನಲ್ಲಿ ಕೂಡ ಶೇರ್ ಮಾಡಿಕೊಳ್ಳಬಹುದು. ಫೇಸ್​ಬುಕ್ ತಾಣದಲ್ಲಿರುವ ಯಾವುದೇ ಸ್ನೇಹಿತರು ಇನ್​ಸ್ಟಾಗ್ರಾಮ್ ಸೇರಿದಾಗ ನಿಮಗೂ ನೋಟಿಫಿಕೇಶನ್ ಬರುತ್ತಾ ಇರುತ್ತದೆ. ಹೀಗಾಗಿ ಅವರ ಬಳಿ ನಿಮ್ಮನ್ನ ಫಾಲೋ ಮಾಡುವಂತೆ ಕೂಡ ಹೇಳಬಹುದು. ಈಗ ಇನ್​ಸ್ಟಾಗ್ರಾಮ್ ಸಾಕಷ್ಟು ಅಪ್ಡೇಟ್ ಆಗಿದ್ದು, ನೀವು ಯಾವುದೇ ಫೋಟೋ, ವಿಡಿಯೋ ಹಂಚಿಕೊಂಡರೆ ಫೇಸ್​ಬುಕ್​ನಲ್ಲಿ ಅಟೋಮೆಟಿಕ್ ಶೇರ್ ಆಗುವಂತಹ ಆಯ್ಕೆ ಕೂಡ ಇದೆ.

Mobile Blast: ಬಾಂಬ್​ನಂತೆ ಸ್ಪೋಟಗೊಂಡ ಶವೋಮಿ ಕಂಪನಿಯ ಸ್ಮಾರ್ಟ್​ಫೋನ್: ನಿಮ್ಮ ಬಳಿ ಇದೆಯೇ ಈ ಫೋನ್?

ಇದನ್ನೂ ಓದಿ
Image
Cyber Crime: ಎಸ್​ಬಿಐ, ಹೆಚ್​ಡಿಎಫ್​ಸಿ ಬ್ಯಾಂಕ್ ಬಳಕೆದಾರರಿಗೆ ಬರುತ್ತಿದೆ ಫೇಕ್ ಮೆಸೇಜ್: ತಪ್ಪಿಯೂ ಹೀಗೆ ಮಾಡಬೇಡಿ
Image
Tech Tips: ಪಿಡಿಫ್ ಫೈಲ್​ಗಳ ಪಾಸ್‌ವರ್ಡ್ ರಿಮೂವ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
Image
Tecno Spark 8 Pro: ಅತ್ಯುತ್ತಮ ಕ್ಯಾಮೆರಾ, ಭರ್ಜರಿ ಬ್ಯಾಟರಿಯ ಸ್ಮಾರ್ಟ್​ಫೋನ್ ಬೇಕೇ?: ಕೇವಲ 8,399 ರೂ. ಗೆ ಈ ಫೋನನ್ನು ಖರೀದಿಸಿ
Image
Tech Tips: ನಿಮ್ಮ ಜಿಮೇಲ್​ನಲ್ಲಿ ಸ್ಟೋರೇಜ್​ ಫುಲ್ ಆಗಿದ್ದರೆ ಟೆನ್ಶನ್ ಬೇಡ: ಈ ಟ್ರಿಕ್ ಫಾಲೋ ಮಾಡಿ

ಇನ್ನು ಇನ್​ಸ್ಟಾಗ್ರಾಮ್​ನಲ್ಲಿ ನೀವು ಯಾವುದೇ ಫೈಲ್ ಅನ್ನು ಶೇರ್ ಮಾಡುವಾಗ ಸರಿಯಾದ ಸಮಯಕ್ಕೆ ಮಾಡಿ. ಒಂದೇ ಬಾರಿಗೆ 2, 3 ವಿಡಿಯೋ ಹಂಚಿಕೊಂಡರೆ ಲೈಕ್ಸ್, ಕಮೆಂಟ್ ಹಾಗೂ ಹೆಚ್ಚು ರೀಚ್ ಕೂಡ ಆಗುವುದಿಲ್ಲ. ಈ ಬಗ್ಗೆ ವೆಬ್ ತಾಣ ಗಿಜ್​ಬಾಟ್ ವರದಿ ಮಾಡಿದ್ದು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ, ವಿಡಿಯೋ ಹಂಚಿಕೊಳ್ಳಲು ದಿನದಲ್ಲಿ ಯಾವುದು ಸರಿಯಾದ ಸಮಯ ಎಂದು ಹೇಳಿದೆ.

ಇವರು ಹೇಳಿರುವ ಪ್ರಕಾರ ಸೋಮವಾರ ಮಧ್ಯಾಹ್ನ 3:30, ಸಂಜೆ 7:30 ಹಾಗೂ ಬೆಳಗ್ಗೆ 7:30 ಉತ್ತಮ ಸಮಯವಂತೆ. ಅಂತೆಯೆ ಮಂಗಳವಾರ ಫೋಟೋ ಅಥವಾ ರೀಲ್ಸ್ ಹಂಚಿಕೊಳ್ಳುವ ಪ್ಲಾನ್​ನಲ್ಲಿದ್ದರೆ ನೀವು 11:30 am, 1:30 am, 6:30 am. ಬುಧವಾರ- 4:30 pm, 5:30 pm, 8:30 am, ಗುರುವಾರ- 6:30 pm, 9:30 am, 4:30 am (ಮುಂದಿನ ದಿನ), ಶುಕ್ರವಾರ- 2:30 pm, 10:30 pm, 12:30 am (ಮುಂದಿನ ದಿನ), ಶನಿವಾರ- 8:30 pm, 4:30 am (ಮುಂದಿನ ದಿನ), 5:30 am (ಮುಂದಿನ ದಿನ), ಭಾನುವಾರ- 4:30 pm, 5:30 pm, 1:30 am (ಮುಂದಿನ ದಿನ).

ಒಂದೇ ರೀತಿಯ ಫೋಟೋವನ್ನು ಪುನಃ ಪೋಸ್ಟ್ ಮಾಡಬೇಡಿ. ಯಾವುದಾದರೂ ಒಂದು ಪೋಟೋ ಚೆನ್ನಾಗಿದ್ದರೆ, ಆ ಫೋಟೋವನ್ನೇ ಹತ್ತು ಬಾರಿ ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಬೇಡಿ. ಗಮನ ಸೆಳೆಯುವಂತಹ ಗುಣಮಟ್ಟದ ಚಿತ್ರಗಳನ್ನು ಮಾತ್ರ ಶೇರ್ ಮಾಡಿ. ದಿನಕ್ಕೆ ಹೆಚ್ಚೆಂದರೆ 2 ರಿಂದ 3 ಫೋಟೋಗಳನ್ನು ಶೇರ್ ಮಾಡುವುದು ಉತ್ತಮ.

ಅಂತೆಯೆ ನೀವು ಇನ್ನೊಬ್ಬರಿಗೆ ಲೈಕ್ ಮಾಡಿದರೆ ಮಾತ್ರ ಅವರೂ ನಿಮ್ಮ ಪೋಸ್ಟ್‌ಗಳಿಗೆ ಲೈಕ್ ಒತ್ತುತ್ತಾರೆ. ನಿಮಗೆ ಲೈಕ್ ಬರುವುದು ನಿಮ್ಮನ್ನು ಫಾಲೋ ಮಾಡುವವರಿಂದ ಎಂಬುದು ನೆನಪಿರಲಿ. ನಮಗೆ ಮಾತ್ರ ಲೈಕ್, ಕಮೆಂಟ್ ಬರಲ್ಲ ಎಂದು ಹೇಳುವ ನಾವು ಇತರರನ್ನು ಲೈಕ್ ಮಾಡದಿದ್ದರೆ ಹೇಗೆ?. ಹಾಗೆಯೆ ಹ್ಯಾಶ್‌ಟ್ಯಾಗ್ ಬಳಸುವುದು ಮುಖ್ಯ. ಇನ್‌ಸ್ಟಾಗ್ರಾಮ್​ನಲ್ಲಿ ಹ್ಯಾಶ್‌ಟ್ಯಾಗ್ ತುಂಬಾ ಮಹತ್ತರ ಪಾತ್ರ ವಹಿಸುತ್ತದೆ. ಪ್ರತಿಯೊಂದು ಫೋಟೋ ಜತೆ ಅದಕ್ಕೆ ತಕ್ಕ ಜನಪ್ರಿಯ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದರೆ ನಿಮ್ಮ ಪೋಸ್ಟ್ ಹೆಚ್ಚು ಜನರಿಗೆ ರೀಚ್ ಆಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ