iQOO Z7 5G: ಭಾರತದಲ್ಲಿ ಬಹುನಿರೀಕ್ಷಿತ ಐಕ್ಯೂ Z7 5G ಫೋನ್ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ

ಹೆಚ್ಚಾಗಿ ಬಜೆಟ್ ಬೆಲೆಗೆ ಆಕರ್ಷಕ ಬ್ಯಾಟರಿ, ಫಾಸ್ಟ್ ಚಾರ್ಜರ್​ಗಳ ಫೋನನ್ನು ಅನಾವರಣ ಮಾಡುವ ಐಕ್ಯೂ ಇದೀಗ ಭರ್ಜರಿ ಫೀಚರ್​ಗಳ ಐಕ್ಯೂ ಝಡ್ 7 5ಜಿ (iQoo Z7 5G) ಸ್ಮಾರ್ಟ್​ಫೋನ್​ನೊಂದಿಗೆ ಬಂದಿದೆ.

iQOO Z7 5G: ಭಾರತದಲ್ಲಿ ಬಹುನಿರೀಕ್ಷಿತ ಐಕ್ಯೂ Z7 5G ಫೋನ್ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ
iQOO Z7 5G
Follow us
Vinay Bhat
|

Updated on:Mar 21, 2023 | 2:22 PM

ಸ್ಮಾರ್ಟ್​​ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ (Vivo) ಒಡೆತನದ ಐಕ್ಯೂ ಕಂಪನಿ ವಿಭಿನ್ನ ಮಾದರಿಯ ಫೋನ್​ಗಳನ್ನು ಪರಿಚಯಿಸುವುದರಲ್ಲಿ ಎತ್ತದ ಕೈ. ಹೆಚ್ಚಾಗಿ ಬಜೆಟ್ ಬೆಲೆಗೆ ಆಕರ್ಷಕ ಬ್ಯಾಟರಿ, ಫಾಸ್ಟ್ ಚಾರ್ಜರ್​ಗಳ ಫೋನನ್ನು ಅನಾವರಣ ಮಾಡುವ ಐಕ್ಯೂ ಇದೀಗ ಭರ್ಜರಿ ಫೀಚರ್​ಗಳ ಐಕ್ಯೂ ಝಡ್ 7 5ಜಿ (iQoo Z7 5G) ಸ್ಮಾರ್ಟ್​ಫೋನ್​ನೊಂದಿಗೆ ಬಂದಿದೆ. ಕಳೆದ ಕೆಲವು ವಾರಗಳಿಂದ ಭಾರೀ ಸದ್ದು ಮಾಡಿದ್ದ ಈ ಫೋನ್ ಕೊನೆಗೂ ಇಂದು ಭಾರತೀಯ ಮಾರುಕಟ್ಟೆಯಲ್ಲಿ ರಿಲೀಸ್ ಆಗಿದೆ. ಅಂದುಕೊಂಡಂತೆ ಇದರಲ್ಲಿ ಬಲಿಷ್ಠವಾದ ಪ್ರೊಸೆಸರ್, ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ ಎಲ್ಲವನ್ನೂ ನೀಡಲಾಗಿದೆ. ಹಾಗಾದರೆ ಈ ಫೋನಿನ ಸಂಪೂರ್ಣ ಫೀಚರ್ಸ್ ಹಾಗೂ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಇದನ್ನೂ ಓದಿ
Image
iPhone 15: ಐಫೋನ್ 15 ನಲ್ಲಿ ಇರಲಿದೆ ಯುಎಸ್​ಬಿ ಟೈಪ್-ಸಿಯ ಅತ್ಯಂತ ವೇಗದ ಚಾರ್ಜರ್: ಆದರೆ…
Image
Poco X5 5G: 22 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವ ಪೋಕೋ X5 5G ಫೋನ್ ಇಂದಿನಿಂದ ಖರೀದಿಗೆ ಲಭ್ಯ
Image
Tech Tips: ನಿಮ್ಮ ಇನ್​ಸ್ಟಾಗ್ರಾಮ್ ರೀಲ್ಸ್, ಫೋಟೋಗಳು ಸಖತ್ ವೈರಲ್ ಆಗಬೇಕೇ?: ಇಲ್ಲಿದೆ ಹೊಸ ಟ್ರಿಕ್
Image
Tech Tips: ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನ ಹೈಡ್ ಮಾಡಿ ಯಾರು ಸ್ಟೇಟಸ್ ಹಾಕಿದ್ದಾರೆ ತಿಳಿಯಬೇಕೇ?: ಇಲ್ಲಿದೆ ಟ್ರಿಕ್

ಐಕ್ಯೂ Z7 5G ಸ್ಮಾರ್ಟ್‌ಫೋನ್‌ ಒಟ್ಟು ಎರಡು ಮಾದರಿಯಲ್ಲಿ ಬಿಡುಗಡೆ ಆಗಿದೆ. ಇದರ 6GB RAM + 12GB ಸ್ಟೋರೇಜ್ ಸಾಮರ್ಥ್ಯಕ್ಕೆ 18,999 ರೂ. ಇದದೆ. ಅಂತೆಯೆ 8GB RAM + 12GB ಸ್ಟೋರೇಜ್ ಆಯ್ಕೆಗೆ 19,999 ರೂ. ನಿಗದಿ ಮಾಡಲಾಗಿದೆ. ವಿಶೇಷ ಎಂದರೆ ಈ ಫೋನನ್ನು ನೀವು ಪರಿಚಯಾತ್ಮಕ ಬೆಲೆಯಾಗಿ ಕೇವಲ 17,499ರೂ. ಗಳಿಗೆ ಖರೀದಿ ಮಾಡಬಹುದು.

Cyber Crime: ಎಸ್​ಬಿಐ, ಹೆಚ್​ಡಿಎಫ್​ಸಿ ಬ್ಯಾಂಕ್ ಬಳಕೆದಾರರಿಗೆ ಬರುತ್ತಿದೆ ಫೇಕ್ ಮೆಸೇಜ್: ತಪ್ಪಿಯೂ ಹೀಗೆ ಮಾಡಬೇಡಿ

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಐಕ್ಯೂನ ಅಧಿಕೃತ ವೆಬ್‌ಸೈಟ್‌ ಮೂಲಕ ಈ ಫೋನನ್ನು ಇಂದಿನಿಂದಲೇ ಖರೀದಿ ಮಾಡಬಹುದು. ಜೊತೆಗೆ ಹೆಚ್‌ಡಿಎಫ್‌ಸಿ ಮತ್ತು ಎಸ್​ಬಿಐ ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 1,500 ರೂ. ಗಳ ತ್ವರಿತ ರಿಯಾಯಿತಿ ಸಹ ಸಿಗಲಿದೆ. ಪೆಸಿಫಿಕ್ ನೈಟ್ ಮತ್ತು ನಾರ್ವೆ ಬ್ಲೂ ಬಣ್ಣದಲ್ಲಿ ಮಾರಾಟ ಕಾಣಲಿದೆ.

ಏನಿದೆ ಫೀಚರ್ಸ್:

ಐಕ್ಯೂ Z7 5G ಸ್ಮಾರ್ಟ್‌ಫೋನ್‌ 6.28 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 90hz ಸ್ಕ್ರೀನ್ ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಕೂಡ ನೀಡಲಾಗಿದೆ. ಬಲಿಷ್ಠವಾದ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್​ನಲ್ಲಿ ಕಾರ್ಯನಿರ್ವಿಹಿಸಲಿದ್ದು, ಆಂಡ್ರಾಯ್ಡ್‌ 13 ಆಧಾರಿತ ಫನ್‌ಟಚ್‌ ಓಎಸ್‌13 ನಲ್ಲಿ ರನ್‌ ಆಗಲಿದೆ. ಕಡಿಮೆ ಬೆಲೆಗೆ ಇಷ್ಟೊಂದು ಬಲಿಷ್ಠವಾದ ಪ್ರೊಸೆಸರ್ ಹೊಂದಿರುವ ಕೆಲವೇ ಫೋನುಗಳ ಸಾಲಿಗೆ ಇದುಕೂಡ ಸೇರ್ಪಡೆ ಆಗಿದೆ.

ಈ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, OIS ಬೆಂಬಲದ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಸೆನ್ಸರ್‌ ಹೊಂದಿದೆ. ಮುಂಭಾಗ ಸೆಲ್ಫಿ ಫೋಓ ಹಾಗೂ ವಿಡಿಯೋಕ್ಕಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ದೀರ್ಘ ಸಮಯ ಬಾಳಿಕೆ ಬರುವ 4500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಇದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಆಯ್ಕೆ ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಸಪೋರ್ಟ್ ಮಾಡುತ್ತದೆ. ಇದರೊಂದಿಗೆ ಹೆಡ್‌ಫೋನ್ ಜ್ಯಾಕ್, ವೈ-ಫೈ, ಬ್ಲುಟೂತ್, ಯುಎಸ್​ಬು ಟೈಪ್-ಸಿ ಮತ್ತು ಸ್ಟಿರಿಯೊ ಸ್ಪೀಕರ್ ಸೆಟಪ್ ಸೇರಿದಂತೆ ಇತ್ತೀಚಿನ ಎಲ್ಲ ಆಯ್ಕೆ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Tue, 21 March 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್