WhatsApp Web: ವಾಟ್ಸ್ಆ್ಯಪ್ನಿಂದ ವೆಬ್ ಬಳಕೆದಾರರಿಗೆ ಬಂತು ವಿಶೇಷ ಫೀಚರ್: ಕೂಡಲೇ ಅಪ್ಡೇಟ್ ಮಾಡಿ
WhatsApp Web New Features: ಹೆಚ್ಚಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ನೂತನ ಅಪ್ಡೇಟ್ಗಳನ್ನು ನೀಡುತ್ತಿದ್ದ ಕಂಪನಿ ಈಗ ವೆಬ್ ಬಳಕೆದಾರರಿಗೂ ವಿಶೇಷವಾದ ಪೀಚರ್ಗಳನ್ನು ಪರಿಚಯಿಸುವಲ್ಲಿ ಕೆಲಸ ಮಾಡುತ್ತಿದೆ.
ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಕಳೆದ ವರ್ಷದಂತೆ ಈ ವರ್ಷ ಕೂಡ ಒಂದರ ಹಿಂದೆ ಒಂದರಂತೆ ಆಕರ್ಷಕ ಫೀಚರ್ಗಳನ್ನು ಪರಿಚಯಿಸುತ್ತಲೇ ಇದೆ. ಹೀಗಾಗಿಯೇ ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ವಾಟ್ಸ್ಆ್ಯಪ್ (WhatsApp) ಅನ್ನು ಇಂದು ಕೇವಲ ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಹೆಚ್ಚಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ನೂತನ ಅಪ್ಡೇಟ್ಗಳನ್ನು ನೀಡುತ್ತಿದ್ದ ಕಂಪನಿ ಈಗ ವೆಬ್ ಬಳಕೆದಾರರಿಗೂ ವಿಶೇಷವಾದ ಪೀಚರ್ಗಳನ್ನು ಪರಿಚಯಿಸುವಲ್ಲಿ ಕೆಲಸ ಮಾಡುತ್ತಿದೆ. ಇದರ ನಡುವೆ ವಾಟ್ಸ್ಆ್ಯಪ್ ವೆಬ್ (WhatsApp Web) ಉಪಯೋಗಿಸುತ್ತಿರುವ ವಿಂಡೀಸ್ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ನೀಡಿದೆ.
ಇದೀಗ ವಿಂಡೋಸ್ ಬಳಕೆದಾರರಿಗೆ ಹೊಸ ವಾಟ್ಸ್ಆ್ಯಪ್ ಅನ್ನು ಪರಿಚಯಿಸಿದ್ದು ಇದು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಐಒಎಸ್, ಆಂಡ್ರಾಯ್ಡ್ ಮಾದದರಿಯಲ್ಲಿ ಕೆಲಸ ಮಾಡುತ್ತದಂತೆ. ಇದರ ಜೊತೆಗೆ ಗ್ರೂಪ್ ವಿಡಿಯೋ ಕರೆ ಮತ್ತು ಆಡಿಯೋ ಕರೆ ಆಯ್ಕೆಯನ್ನು ನೀಡಲಾಗಿದೆ. ಎಂಟು ಜನರೊಂದಿಗೆ ಒಮ್ಮೆಲೆ ವಿಡಿಯೋ ಕಾಲ್ನಲ್ಲಿ ಮಾತನಾಡುವ ಅವಕಾಶ ಕಲ್ಪಿಸಲಾಗಿದೆ. ಅಂತೆಯೆ 32 ಜನರು ಆಡಿಯೋ ಕಾಲ್ನಲ್ಲಿ ಕನೆಕ್ಟ್ ಆಗಬಹುದಂತೆ. ಸದ್ಯಕ್ಕೆ ಈ ಆಯ್ಕೆಯನ್ನು ವಿಂಡೀಸ್ ಬಳಕೆದಾರರಿಗೆ ಮಾತ್ರ ನೀಡಲಾಗಿದ್ದು, ಮ್ಯಾಕ್ ಡೆಸ್ಕ್ ಟಾಪ್ನವರಿಗಾಗಿ ಪರೀಕ್ಷಾ ಹಂತದಲ್ಲಿದೆ.
Moto G32: ಮೋಟೋ ಫೋನ್ಗಳಿಗೆ ಭರ್ಜರಿ ಬೇಡಿಕೆ: ಹಳೆಯ ಮೊಬೈಲ್ ಹೊಸ ಸ್ಟೋರೇಜ್ನಲ್ಲಿ ಬಿಡುಗಡೆ
ಐಒಎಸ್ನಲ್ಲಿ ಹೊಸ ಫೀಚರ್:
ವಾಟ್ಸ್ಆ್ಯಪ್ ತನ್ನ ಐಫೋನ್ ಬಳಕೆದಾರರಿಗೆ ವಾಯ್ಸ್ ಸ್ಟೇಟಸ್ ಫೀಚರ್ ಅನ್ನು ವಾಟ್ಸ್ಆ್ಯಪ್ ಪರಿಚಯಿಸಿದ್ದು, ಇದರ ಮೂಲಕ ಸ್ಟೇಟಸ್ನಲ್ಲಿ ವಾಯ್ಸ್ ಮೆಸೇಜ್ (Voice Message) ಅನ್ನು ಹಂಚಿಕೊಳ್ಳಬಹುದು. ವಾಯ್ಸ್ ಸ್ಟೇಟಸ್ ಫೀಚರ್ ಆಂಡ್ರಾಯ್ಡ್ ಬಳಕೆದಾರರಿಗೆ ಕಳೆದ ತಿಂಗಳು ಫೆಬ್ರವರಿಯಲ್ಲೇ ನೀಡಲಾಗಿತ್ತು. ಇದು ಅತ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಐಫೋನ್ ಬಳಕೆದಾರರಿಗೆ ಸಹ ಈ ಸೌಲಭ್ಯವನ್ನು ಕಲ್ಪಿಸಿದೆ. ಈವರೆಗೆ ಸ್ಟೇಟಸ್ನಲ್ಲಿ ವಿಡಿಯೋ, ಫೋಟೋ, ಲಿಂಕ್ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು. ಇದೀಗ ವಾಯ್ಸ್ ಸ್ಟೇಟಸ್ ಎಂಬ ಹೊಸ ಫೀಚರ್ ಮೂಲಕ ಬಳಕೆದಾರರು ಸ್ಟೇಟಸ್ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್ಗಳನ್ನು ಶೇರ್ ಮಾಡಬಹುದಾಗಿದೆ.
ವಾಯ್ಸ್ ಸ್ಟೇಟಸ್ ಬಳಕೆದಾರರಿಗೆ 30 ಸೆಕೆಂಡ್ಗಳ ಕಾಲ ಇರಲಿದೆ. ಇದಕ್ಕಾಗಿ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೊ ಫೋನ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಇಲ್ಲಿ ಮೈಕ್ರೊ ಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದು. ಇದು ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಆಗಿದೆ.
ವಾಟ್ಸ್ಆ್ಯಪ್ನಲ್ಲಿ ಇನ್ನಷ್ಟು ಅನೇಕ ಅಪ್ಡೇಟ್ಗಳು ಬರಲಿಕ್ಕಿದೆ. ಇದರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ಎಕ್ಸ್ಪೇರಿಂಗ್ ಗ್ರೂಪ್ ಫೀಚರ್ ಕೂಡ ಒಂದು. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್ಗೆ ಮುಕ್ತಾಯದ ದಿನಾಂಕ ಎಂಬುದನ್ನು ನಿಗದಿ ಮಾಡಿರಲಾಗುತ್ತದೆ. ಆ ಸಮಯ ಬಂದ ನಂತರ ವಾಟ್ಸ್ಆ್ಯಪ್ ನಿಮಗೆ ಆ ಗ್ರೂಪ್ನಿಂದ ಹಿಂದೆ ಸರಿಯಲು ಮತ್ತು ಅಡ್ಮಿನ್ಗೆ ಗ್ರೂಪ್ ಡಿಲೀಟ್ ಮಾಡಲು ಅಲರ್ಟ್ ಮಾಡುತ್ತಾ ಇರುತ್ತದೆ. ಈ ಆಯ್ಕೆ ವಾಟ್ಸ್ಆ್ಯಪ್ ಗ್ರೂಪ್ ಇನ್ಫೋ ದಲ್ಲಿ ಇರುತ್ತದೆ. ಅಂತೆಯೆ ಈ ಮುಕ್ತಾಯದ ದಿನಾಂಕವನ್ನು ಬದಲಾವಣೆ ಮಾಡುವ ಅವಕಾಶ ಕೂಡ ಇರುತ್ತದಂತೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್ನಿಂದ ನೀವು ಹಿಂದೆ ಸರಿದು ಮೆಮೋರಿಯನ್ನು ಉಳಿತಾಯ ಮಾಡಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ