Amazon: ವಾವ್… ದುಬಾರಿ ಬೆಲೆಯ ಸ್ಮಾರ್ಟ್​ಫೋನ್​ಗಳು ಬಜೆಟ್ ಬೆಲೆಗೆ: ಅಮೆಜಾನ್​ನಲ್ಲಿ ಭರ್ಜರಿ ಆಫರ್

| Updated By: Vinay Bhat

Updated on: Oct 02, 2021 | 2:46 PM

Amazon Great Indian Festival Sale 2021: ಅಚ್ಚರಿ ಎಂಬಂತೆ ಸ್ಯಾಮ್​ಸಂಗ್ ಗ್ಯಾಲಕ್ಸಿ s20FE ಸ್ಮಾರ್ಟ್​ಫೋನ್ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಪೆಸ್ಟಿವಲ್‌ ಸೇಲ್‌ ನಲ್ಲಿ ಕೇವಲ 33,990 ರೂ. ಗೆ ಖರೀದಿಸಬಹುದು. ಇದರ ಮೂಲಬೆಲೆ 70,499 ರೂ. ಆಗಿದೆ.

Amazon: ವಾವ್… ದುಬಾರಿ ಬೆಲೆಯ ಸ್ಮಾರ್ಟ್​ಫೋನ್​ಗಳು ಬಜೆಟ್ ಬೆಲೆಗೆ: ಅಮೆಜಾನ್​ನಲ್ಲಿ ಭರ್ಜರಿ ಆಫರ್
Amazon Great Indian Festival Sale 2021
Follow us on

ಪ್ರಸಿದ್ಧ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ (Amazon) ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗಾಗಿ ವರ್ಷದ ಅತಿ ದೊಡ್ಡ ಮೇಳವನ್ನು ಆಯೋಜಿಸುತ್ತಿದೆ. ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಪೆಸ್ಟಿವಲ್‌ ಸೇಲ್‌ 2021ಕ್ಕೆ (Amazon Great Indian sale 2021) ಕ್ಷಣಗಣನೆ ಶುರುವಾಗಿದ್ದು, ಇದೇ ಅಕ್ಟೋಬರ್ 4 ರಂದು ಆರಂಭವಾಗಲಿದೆ. ಅಮೆಜಾನ್‌ (Amazon) ತನ್ನ ವಿಶೇಷ ಸೇಲ್‌ಗಳಲ್ಲಿ ಗ್ರಾಹಕರಿಗೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ. ವಿಶೇಷವಾಗಿ ಸ್ಮಾರ್ಟ್​ಫೋನ್ (Smartphone) ವಿಭಾಗದಲ್ಲಿ ದುಬಾರಿ ಬೆಲೆಯ ಮೊಬೈಲ್​ಗಳ ಮೇಲೆ ಹೆಚ್ಚಿನ ರಿಯಾಯತಿ ಸಿಗಲಿದೆ. ಹೀಗಾಗಿ ಹೊಸ ಸ್ಮಾರ್ಟ್‌ಫೋನ್‌ಖರೀದಿ ಮಾಡುವವರಿಗೆ ಇದು ಸೂಕ್ತ ಸಮಯವಾಗಿದೆ. ಹಾಗಾದ್ರೆ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ನೀವು ಖರೀದಿಸಬಹುದಾದ ಟಾಪ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸ್ಮಾರ್ಟ್‌ಫೋನ್‌ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಕೇವಲ 69,999 ರೂ. ಗೆ ಲಭ್ಯವಾಗಲಿದೆ. ಇದು 2400 x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.2 ಇಂಚಿನ ಡೈನಾಮಿಕ್ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. 2.9GHz ಎಕ್ಸಿನೋಸ್ 2100 ಆಕ್ಟಾ-ಕೋರ್ ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಅಚ್ಚರಿ ಎಂಬಂತೆ ಸ್ಯಾಮ್​ಸಂಗ್ ಗ್ಯಾಲಕ್ಸಿ s20FE ಸ್ಮಾರ್ಟ್​ಫೋನ್ ಅಮೆಜಾನ್​ನಲ್ಲಿ ಕೇವಲ 33,990 ರೂ. ಗೆ ಖರೀದಿಸಬಹುದು. ಇದರ ಮೂಲಬೆಲೆ 70,499 ರೂ. ಆಗಿದೆ. ಇದು 2400 x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌, 8 ಮೆಗಾಫಿಕ್ಸೆಲ್ ಟೆಲಿಫೋಟೋ ಲೆನ್ಸ್, 12 ಮೆಗಾಫಿಕ್ಸೆಲ್ ಆಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಜೊತೆಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. 25W ಫಾಸ್ಟ್ ಚಾರ್ಜಿಂಗ್ ಬೆಂಬಲ ಕೂಡ ಇದೆ.

ಗೂಗಲ್ ಪಿಕ್ಸೆಲ್ 4A ಸ್ಮಾರ್ಟ್‌ಫೋನ್‌ ಅಮೆಜಾನ್‌ ನಲ್ಲಿ ಕೇವಲ 35,100 ರೂ. ಗಳಿಗೆ ಲಭ್ಯವಿದೆ. ಇದು 6.2-ಇಂಚಿನ ಕ್ಯೂಎಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಸ್ನ್ಯಾಪ್‌ಡ್ರಾಗನ್ 730G SoC ಪ್ರೊಸೆಸರ್‌ ಸಾಮರ್ಥ್ಯ ಪಡೆದುಕೊಂಡಿದ್ದು ಹಾಗೆಯೇ 6GB RAM ಮತ್ತು 128GB ಇಂಟರ್‌ನಲ್ ಸ್ಟೋರೇಜ್ ಅನ್ನು ಹೊಂದಿದೆ. ಇದು 12.2-ಮೆಗಾಪಿಕ್ಸೆಲ್ ರಿಯರ್‌ ಕ್ಯಾಮರಾವನ್ನು ಹೊಂದಿದ್ದು, 77 ಡಿಗ್ರಿಗಳಷ್ಟು ವಿಶಾಲವಾದ ವೀಕ್ಷಣೆಯನ್ನು ಹೊಂದಿದೆ.

ಒನ್‌ಪ್ಲಸ್ ನಾರ್ಡ್ CE 5G ಸ್ಮಾರ್ಟ್‌ಫೋನ್‌ ಅಮೆಜಾನ್‌ ನಲ್ಲಿ 24,999 ರೂ.ಬೆಲೆಗೆ ಲಭ್ಯವಿದೆ. ಇದು 2400×1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G 5G ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಜೊತೆಗೆ 4500 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಒಪ್ಪೊ A74 ಸ್ಮಾರ್ಟ್‌ಫೋನ್‌ ಕೇವಲ 17,990 ರೂ. ಬೆಲೆಗೆ ಲಭ್ಯವಿದೆ. ಇದು 2400×1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.49 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 5G SoC ನಿಂದ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದು ಡ್ಯುಯಲ್ ಅಪರ್ಚರ್ ಅನ್ನು ಹೊಂದಿದ್ದು, ವೀಡಿಯೊಗಳು ಮತ್ತು ಫೋಟೋಗಳು ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಜೊತೆಗೆ ಈ ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Motorola Edge 20 Pro: ಭಾರತದಲ್ಲಿ 30W ವೇಗದ ಚಾರ್ಜಿಂಗ್ ಇರುವ ಮೊಟೊರೊಲಾ ಎಡ್ಜ್ 20 ಪ್ರೊ 5G ಸ್ಮಾರ್ಟ್‌ಫೋನ್‌ ಬಿಡುಗಡೆ

Redmi Note 10 Lite: ಭಾರತದಲ್ಲಿ ಬಂಪರ್ ಫೀಚರ್ಸ್, ಕಡಿಮೆ ಬೆಲೆಯ ರೆಡ್ಮಿ ನೋಟ್ 10 ಲೈಟ್ ಸ್ಮಾರ್ಟ್​ಫೋನ್ ರಿಲೀಸ್

(ensive smartphones are available in budget price on Amazon Great Indian Festival Sale 2021)

Published On - 2:09 pm, Sat, 2 October 21