Moto G Power 5G: ಗ್ಯಾಜೆಟ್ ಮಾರುಕಟ್ಟೆಗೆ ಮೋಟೊರೊಲಾ ಪ್ರೀಮಿಯಂ ಸ್ಮಾರ್ಟ್ಫೋನ್
ಮೊಬೈಲ್ ಮಾರುಕಟ್ಟೆಗೆ ದಿಗ್ಗಜ ಎನ್ನಬಹುದಾದ ಮೋಟೊರೊಲಾ ಕಂಪನಿ, ಲೆನೊವೊ ಒಡೆತನಕ್ಕೆ ಬಂದ ಬಳಿಕ ವಿವಿಧ ಸರಣಿಗಳ ಆಕರ್ಷಕ ಮಾದರಿಗಳನ್ನು ಬಿಡುಗಡೆ ಮಾಡಿದೆ. ಮೋಟೊ ಜಿ ಸರಣಿಯಲ್ಲಿ ಹೊಸದಾಗಿ ಮಾರುಕಟ್ಟೆಗೆ ಮೋಟೊ ಜಿ ಪವರ್ 5G ಫೋನ್ ಲಗ್ಗೆ ಇರಿಸಿದೆ.
ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಗಳಿಗೆ ಬರವಿಲ್ಲ. ದಿನವೂ ಒಂದಕ್ಕಿಂತ ಒಂದು ವಿಭಿನ್ನ ಫೀಚರ್ಸ್, ತಾಂತ್ರಿಕ ವೈಶಿಷ್ಟ್ಯ ಹೊಂದಿರುವ ಸ್ಮಾರ್ಟ್ಫೋನ್ಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಅದರಲ್ಲೂ ಕ್ಯಾಮೆರಾ ವೈವಿಧ್ಯತೆ, ಬ್ಯಾಟರಿ ಮತ್ತು ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮೊಬೈಲ್ ಮಾರುಕಟ್ಟೆಗೆ ದಿಗ್ಗಜ ಎನ್ನಬಹುದಾದ ಮೋಟೊರೊಲಾ ಕಂಪನಿ, ಲೆನೊವೊ ಒಡೆತನಕ್ಕೆ ಬಂದ ಬಳಿಕ ವಿವಿಧ ಸರಣಿಗಳ ಆಕರ್ಷಕ ಮಾದರಿಗಳನ್ನು ಬಿಡುಗಡೆ ಮಾಡಿದೆ. ಮೋಟೊ ಜಿ ಸರಣಿಯಲ್ಲಿ ಹೊಸದಾಗಿ ಮಾರುಕಟ್ಟೆಗೆ ಮೋಟೊ ಜಿ ಪವರ್ 5G ಫೋನ್ ಲಗ್ಗೆ ಇರಿಸಿದೆ. ಹೊಸ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ. ಅಮೆರಿಕದ ಮಾರುಕಟ್ಟೆಗೆ ಲಗ್ಗೆ ಇರಿಸಿದ ಮೋಟೊ ಜಿ ಪವರ್ 5G ಫೋನ್ನಲ್ಲಿ 6.5 ಇಂಚಿನ HD+ LCD ಡಿಸ್ಪ್ಲೇ ಹೊಂದಿದೆ. ಮೋಟೊ ಜಿ ಪವರ್ 5G
ಒಕ್ಟಾ ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 930 ಪ್ರೊಸೆಸರ್ ಬೆಂಬಲ ಹೊಂದಿದ್ದು, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 2+12 MP ಕ್ಯಾಮೆರಾ ಇದೆ. ಜತೆಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಮೋಟೊ ಜಿ ಪವರ್ 5G ಫೋನ್ನಲ್ಲಿAndroid 13 ಮೂಲಕ ಕಾರ್ಯನಿರ್ವಹಿಸಲಿದೆ. ಹೊಸ ಮೋಟೊ ಜಿ ಪವರ್ 5G
6GB RAM + 256GB ಮಾದರಿಯಲ್ಲಿ ಲಭ್ಯವಿದ್ದು, 1TBವರೆಗೆ ವಿಸ್ತರಣೆಗೆ ಅವಕಾಶವಿದೆ. ಹಾಗೆಯೇ 5,000mAh ಬ್ಯಾಟರಿ ಮತ್ತು 10W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದೆ.