Vivo T2 5G: ಭಾರತದಲ್ಲಿ ರಿಲೀಸ್ಗೆ ರೆಡಿಯಾದ ವಿವೋ ಕಂಪನಿಯ ಎರಡು 5G ಸ್ಮಾರ್ಟ್ಫೋನ್ಸ್: ಯಾವುದು?, ಬೆಲೆ ಎಷ್ಟು?
ದೇಶಿಯ ಮಾರುಕಟ್ಟೆಯಲ್ಲಿ ವಿವೋ ಟಿ2 5ಜಿ (Vivo T2 5G) ಮತ್ತು ವಿವೋ T2x 5G ಎಂಬ ಎರಡು 5G ಫೋನ್ ಬಿಡುಗಡೆ ಮಾಡಲು ವಿವೋ ಸಂಸ್ಥೆ ತಯಾರಿ ನಡೆಸಿದೆ. ಇದೇ ಏಪ್ರಿಲ್ 11 ರಂದು ಅಧಿಕೃತವಾಗಿ ರಿಲೀಸ್ ಮಾಡಲಿದೆ.
ಭಾರತದಲ್ಲಿ 5ಜಿ ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಿಯೋ, ಏರ್ಟೆಲ್ 5ಜಿ (Airtel 5G) ಸೇವೆ ದೇಶದೆಲ್ಲೆಡೆ ವಿಸ್ತರಣೆ ಆಗುತ್ತಿದ್ದು ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರ್ಯಾಂಡ್ಗಳು ಒಂದರ ಹಿಂದೆ ಒಂದರಂತೆ 5ಜಿ ಬೆಂಬಲ ನೀಡುವ ಮೊಬೈಲ್ (Mobile) ಅನ್ನು ರಿಲೀಸ್ ಮಾಡುತ್ತಿದೆ. ಅದುಕೂಡ ಬಜೆಟ್ ಬೆಲೆಗೆ ಎಂಬುದು ವಿಶೇಷ. ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಎರಡು 5G ಫೋನ್ ಬಿಡುಗಡೆ ಮಾಡಲು ವಿವೋ ಸಂಸ್ಥೆ ತಯಾರಿ ನಡೆಸಿದೆ. ವಿವೋ ಕಂಪನಿ ವಿವೋ ಟಿ2 5ಜಿ (Vivo T2 5G) ಮತ್ತು ವಿವೋ T2x 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಇದೇ ಏಪ್ರಿಲ್ 11 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಫೋನಿನ ಬೆಲೆ ಎಷ್ಟು ಎಂಬುದು ಅಧಿಕೃತವಾಗಿ ಬಹಿರಂಗವಾಗಿಲ್ಲ, ಕೆಲ ಫೀಚರ್ಗಳು ಆನ್ಲೈನ್ನಲ್ಲಿ ಸೋರಿಕೆ ಆಗಿದೆ.
ವಿವೋ T2 5G:
ವಿವೋ T2 5G ಸ್ಮಾರ್ಟ್‌ಫೋನ್ ಅಧಿಕ ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 6.62 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನಿನ ಬೆಲೆ 20,000 ರೂ. ಆಸುಪಾಸಿನಲ್ಲಿ ಇರಬಹುದು ಎಂಬ ಮಾತಿದೆ.
WhatsApp New Feature: ಫೇಸ್ಬುಕ್ ಪ್ರಿಯರು ಫುಲ್ ಖುಷ್: ವಾಟ್ಸ್ಆ್ಯಪ್ನಲ್ಲಿ ಬರುತ್ತಿದೆ ಅಚ್ಚರಿಯ ಫೀಚರ್
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ರಚನೆ ಒಳಗೊಂಡಿದೆ. ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್ ಆಗಿರಲಿದೆ. ಇನ್ನುಳಿದ ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್ ಮತ್ತು 2 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿರಲಿವೆ. ಹಾಗೆಯೇ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾ ಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ. 4700mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಇದು ಎಷ್ಟು ವೋಲ್ಟ್ ಚಾರ್ಜಿಂಗ್ ಬೆಂಬಲಿಸುತ್ತೆ ಎಂಬುದು ತಿಳಿದುಬಂದಿಲ್ಲ.
ವಿವೋ T2x 5G:
ವಿವೋ T2x 5G ಸ್ಮಾರ್ಟ್‌ಫೋನ್ 6.58 ಇಂಚಿನ ಫುಲ್ ಹೆಚ್‌ಡಿ+ ಎಲ್ಸಿಡಿ ಡಿಸ್‌ಪ್ಲೇ ಹೊಂದಿರಲಿದೆ. ಇದುಕೂಡ ಬಲಿಷ್ಠವಾದ ಮೀಡಿಯಾಟೆಕ್ ಡೈಮನ್ಸಿಟಿ 1300 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸಲಿದೆ. 4GB/ 6GB/ 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. 6000mAh ಬ್ಯಾಟರಿಯ ಜೊತೆಗೆ 44W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿರಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ