Vivo V27 Series: ಬೆರಗುಗೊಳಿಸುವ ಫೀಚರ್ಸ್: ಮಾರುಕಟ್ಟೆಗೆ ಎಂಟ್ರಿಕೊಟ್ಟ ವಿವೋ V27, V27 ಪ್ರೊ ಸ್ಮಾರ್ಟ್‌ಫೋನ್
Vivo V27 Pro: ವಿವೋ ಕಂಪನಿ ಇದೀಗ ಬಹುನಿರೀಕ್ಷಿತ ವಿವೋ ವಿ27 ಸ್ಮಾರ್ಟ್‌ಫೋನ್ ಸರಣಿಯನ್ನು ದೇಶದಲ್ಲಿ ಅನಾವರಣ ಮಾಡಿದೆ. ಇದರಲ್ಲಿ ವಿವೋ V27 ಮತ್ತು ವಿವೋ V27 ಪ್ರೊ ಎಂಬ ಎರಡು ಮಾಡೆಲ್‌ಗಳಿವೆ.
ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್ಫೋನುಗಳು (Smartphone) ಬಿಡುಗಡೆ ಆಗುತ್ತಿದೆ. ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಇರುವ ಕಡಿಮೆ ಬೆಲೆಯ ಮೊಬೈಲ್ಗಳು ಭರ್ಜರಿ ಸೇಲ್ ಆಗುತ್ತಿದೆ. ಇದೇ ಸಾಲಿನಲ್ಲಿ ಪ್ರಸಿದ್ಧ ವಿವೋ ಸಂಸ್ಥೆ ಹೊಸ ಮೊಬೈಲ್ ಒಂದನ್ನು ಅನಾವರಣ ಮಾಡಿದೆ. ವಾರದ ಹಿಂದೆಯಷ್ಟೆ ಭಾರತದಲ್ಲಿ ತನ್ನ ವೈ ಸರಣಿಯಲ್ಲಿ ವಿವೋ Y100 ಎಂಬ ಬಣ್ಣ ಬದಲಾಯಿಸುವ ಫೋನ್ ಪರಿಚಯಿಸಿದ್ದ ಕಂಪನಿ ಇದೀಗ ಬಹುನಿರೀಕ್ಷಿತ ವಿವೋ V27 ಸ್ಮಾರ್ಟ್‌ಫೋನ್ ಸರಣಿಯನ್ನು ದೇಶದಲ್ಲಿ ಅನಾವರಣ ಮಾಡಿದೆ. ಇದರಲ್ಲಿ ವಿವೋ V27 (Vivo V27) ಮತ್ತು ವಿವೋ V27 ಪ್ರೊ (Vivo V27 Pro) ಎಂಬ ಎರಡು ಮಾಡೆಲ್‌ಗಳಿವೆ. ಈ ಫೋನುಗಳ ಫೀಚರ್ಸ್, ಬೆಲೆ ಕುರಿತ ಮಾಹಿತಿ ಇಲ್ಲಿದೆ.
ವಿವೋ V27:
ವಿವೋ V27 ಸ್ಮಾರ್ಟ್ಫೋನ್ನಲ್ಲಿ ಕ್ಯಾಮೆರಾ, ಪ್ರೊಸೆಸರ್ ಅದ್ಭುವಾಗಿದೆ. ಇದರಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಪ್ರೊಸೆಸರ್ ಇದ್ದು ಇದು Funtouch OS ಬೆಂಬಲಿತ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ರನ್ ಆಗಲಿದೆ. ಹಾಗೆಯೆ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದ್ದು, ಜೊತೆಗೆ 3D ಕರ್ವ್ ಎಡ್ಜ್ ರಚನೆಯನ್ನು ಪಡೆದಿದೆ. ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ನಿಂದ ಕೂಡದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766V ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹಾಗೂ ಮುಂಭಾಗ ಸೆಲ್ಫೀಗಾಗಿ 50 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡುವುದು ವಿಶೇಷ.
Oppo F21 Pro: ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿದ ಒಪ್ಪೋ F21 ಪ್ರೊ ಮೇಲೆ ಬಂಪರ್ ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ
4,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ತಕ್ಕಂತೆ 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಬೆಂಬಲ, 5ಜಿ ಬೆಂಬಲ, ಬ್ಲೂಟೂತ್ 5.3, ಡ್ಯುಯಲ್-ಬ್ಯಾಂಡ್ ವೈ-ಫೈ, ಯುಎಸ್‌ಬಿ ಟೈಪ್-ಸಿ ಜೊತೆಗೆ ಇತ್ತೀಚಿನ ಎಲ್ಲ ಆಯ್ಕೆಗಳನ್ನು ನೀಡಲಾಗಿದೆ. ಭಾರತದಲ್ಲಿ ವಿವೋ V27 ಸ್ಮಾರ್ಟ್ಫೋನ್ನ 8 GB RAM + 128 GB ವೇರಿಯಂಟ್ ಬೆಲೆಯು 32,999 ರೂ. ಆಗಿದೆ. ಹಾಗೆಯೇ 12 GB RAM + 256 GB ವೇರಿಯಂಟ್ ಮಾಡೆಲ್ಗೆ 36,999 ರೂ. ನಿಗದಿ ಮಾಡಲಾಗಿದೆ. ಅಧಿಕೃತ ವಿವೋ ವೆಬ್‌ಸೈಟ್ ಹಾಗೂ ಫ್ಲಿಪ್‌ಕಾರ್ಟ್ ತಾಣದ ಮೂಲಕ ಮಾರ್ಚ್ 23 ರಿಂದ ಖರೀದಿಗೆ ಲಭ್ಯವಾಗುತ್ತದೆ.
ವಿವೋ V27 ಪ್ರೊ:
ವಿವೋ V27 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoC ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 13 ಆಧಾರಿತ ಫನ್‌ಟಚ್ OS 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766V ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೈಕ್ರೋ ಲೆನ್ಸ್ ಜೊತೆಗೆ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
4,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಕೂಡ 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲಿಸಲಿದೆ. ವಿವೋ V27 ಪ್ರೊ ಸ್ಮಾರ್ಟ್‌ಫೋನ್ ಭಾರತದಲ್ಲಿ 8GB RAM + 128GB ಸ್ಟೋರೇಜ್ ಆಯ್ಕೆಗೆ 37,999ರೂ. ಬೆಲೆ ಹೊಂದಿದೆ. ಇದರ 8GB RAM + 256GB ಸ್ಟೋರೇಜ್ ಆಯ್ಕೆಗೆ 39,999ರೂ. ನಿಗದಿ ಮಾಡಲಾಗಿದೆ. ಈ ಫೋನನ್ನು ಇದೇ ಮಾರ್ಚ್ 6 ರಂದು ಮಧ್ಯಾಹ್ನ 12 ಗಂಟೆಯಿಂದ ವಿವೋ ವೆಬ್‌ಸೈಟ್ ಹಾಗೂ ಫ್ಲಿಪ್‌ಕಾರ್ಟ್ ತಾಣದ ಮೂಲಕ ಖರೀದಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ