Internet Shutdown: ಜಗತ್ತಿನಲ್ಲೇ ಅತ್ಯಧಿಕ ಇಂಟರ್​ನೆಟ್ ಸಂಪರ್ಕ ಸ್ಥಗಿತವಾಗಿರುವುದು ಭಾರತದಲ್ಲಿ- ಇಲ್ಲಿದೆ ವಿವರ

ವಿವಿಧ ಕಾರಣಗಳಿಗಾಗಿ ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳು ನಿಗದಿತ ಅವಧಿಗೆ ಇಂಟರ್​ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸುತ್ತವೆ. ಜಾಗತಿಕವಾಗಿ ಕಳೆದ ವರ್ಷ 187 ಬಾರಿ ಇಂಟರ್​ನೆಟ್ ಸಂಪರ್ಕ ಸ್ಥಗಿತಗೊಂಡಿದೆ. ಈ ಪೈಕಿ ಭಾರತದಲ್ಲಿ ಅತ್ಯಧಿಕ ಇಂಟರ್​ನೆಟ್ ಶಟ್​ಡೌನ್ ವರದಿಯಾಗಿದೆ ಎಂದು ಅಕ್ಸೆಸ್ ನೌ ಹೇಳಿದೆ.

Internet Shutdown: ಜಗತ್ತಿನಲ್ಲೇ ಅತ್ಯಧಿಕ ಇಂಟರ್​ನೆಟ್ ಸಂಪರ್ಕ ಸ್ಥಗಿತವಾಗಿರುವುದು ಭಾರತದಲ್ಲಿ- ಇಲ್ಲಿದೆ ವಿವರ
ಇಂಟರ್​ನೆಟ್ ಸಂಪರ್ಕ ಸ್ಥಗಿತ
Follow us
ಕಿರಣ್​ ಐಜಿ
|

Updated on: Mar 01, 2023 | 3:56 PM

ಕಳೆದ ವರ್ಷ ಜಾಗತಿಕವಾಗಿ 187 ಬಾರಿ ಇಂಟರ್​ನೆಟ್ ಸಂಪರ್ಕ (Internet Connection) ಸ್ಥಗಿತಗೊಳಿಸಲಾಗಿದೆ. ಅದರಲ್ಲೂ 84 ಬಾರಿ ಇಂಟರ್​ನೆಟ್ ಶಟ್​ಡೌನ್ ಆಗಿರುವುದು ಭಾರತದಲ್ಲಿ ಎನ್ನುವುದು ಗಮನಾರ್ಹ. ಜತೆಗೆ, ಈ ಪೈಕಿ, ಜಮ್ಮು ಕಾಶ್ಮೀರದಲ್ಲೇ ಅತ್ಯಧಿಕ ಬಾರಿ ಅಂದರೆ, 49 ಸಂದರ್ಭದಲ್ಲಿ ಇಂಟರ್​ನೆಟ್ ಸಂಪರ್ಕ ನಿಲ್ಲಿಸಲಾಗಿದೆ ಎಂದು ಅಕ್ಸೆಸ್ ನೌ ವರದಿ ಹೇಳಿದೆ. ಜತೆಗೆ, ಸತತ ಐದನೇ ವರ್ಷ ಭಾರತ ಟಾಪ್ ಸ್ಥಾನದಲ್ಲಿದೆ ಎಂದು ಜಾಗತಿಕವಾಗಿ ಇಂಟರ್​ನೆಟ್ ಸೇವೆಗಳ ಸ್ಥಗಿತ, ನಿರ್ಬಂಧ ಕುರಿತು ಪರಿಶೀಲಿಸುವ ಅಕ್ಸೆಸ್ ನೌ ತಿಳಿಸಿದೆ.

ಭಾರತದಲ್ಲಿ ಇಂಟರ್​ನೆಟ್ ಶಟ್​ಡೌನ್ ಅಧಿಕ ಯಾಕೆ?

ನ್ಯೂಯಾರ್ಕ್ ಮೂಲದ ಅಕ್ಸೆಸ್ ನೌ (Access Now), ಜಾಗತಿಕವಾಗಿ ಇಂಟರ್​ನೆಟ್ ಸಂಪರ್ಕ ಕಡಿತವಾದರೆ, ಸರ್ಕಾರ ಮತ್ತು ಇಲಾಖೆಗಳು ಅಧಿಕೃತವಾಗಿ ನಿರ್ಬಂಧ ವಿಧಿಸಿದರೆ ಅದನ್ನು ವರದಿ ಮಾಡುತ್ತದೆ. ಈ ಪೈಕಿ, ಭಾರತದಲ್ಲೇ ಅತ್ಯಧಿಕ ಇಂಟರ್​ನೆಟ್ ಶಟ್​ಡೌನ್ ವರದಿಯಾಗಿದೆ. ಅಂದರೆ, ಜಮ್ಮು ಕಾಶ್ಮೀರದಲ್ಲಿ ಉಂಟಾಗುವ ಗಲಭೆ ತಡೆಗಟ್ಟಲು ಸರ್ಕಾರ, ಹಲವು ಸಂದರ್ಭದಲ್ಲಿ ಇಂಟರ್​ನೆಟ್ ನಿರ್ಬಂಧ ವಿಧಿಸುತ್ತದೆ. ಹೀಗಾಗಿ ಭಾರತ, ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.

ಎರಡನೇ ಸ್ಥಾನದಲ್ಲಿದೆ ಉಕ್ರೇನ್

ಭದ್ರತಾ ಕಾರಣಗಳಿಗೋಸ್ಕರ ಇಂಟರ್​ನೆಟ್ ನಿರ್ಬಂಧ ವಿಧಿಸಲಾಗಿದೆ ಎಂದು ಹಕ್ಕುಗಳ ಹೋರಾಟಗಾರರು ಆರೋಪಿಸಿದ್ದಾರೆ. ಭಾರತ ಹೊರತುಪಡಿಸಿದರೆ, ಉಕ್ರೇನ್ ಎರಡನೇ ಸ್ಥಾನದಲ್ಲಿದೆ. ರಷ್ಯಾದ ಮಿಲಿಟರಿ ದಾಳಿಯಿಂದಾಗಿ ಅಲ್ಲಿ ಕಳೆದ ವರ್ಷ ಕನಿಷ್ಠ 22 ಬಾರಿ ಇಂಟರ್​ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಮೂರನೇ ಸ್ಥಾನದಲ್ಲಿ ಇರಾನ್ ಇದ್ದು, ಅಲ್ಲಿ 18 ಬಾರಿ ಇಂಟರ್​ನೆಟ್ ಶಟ್​ಡೌನ್ ಮಾಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್