ಲೆನೊವೊ ಒಡೆತನದ ಮೋಟೊರೊಲಾ ಕಂಪನಿ, ಭಾರತದ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಹೆಚ್ಚಿನ ಬಳಕೆದಾರರು ಬಯಸುವ ಗರಿಷ್ಠ ಬ್ಯಾಟರಿ ಮತ್ತು ಹೆಚ್ಚಿನ ಕ್ಯಾಮೆರಾ ವೈಶಿಷ್ಟ್ಯವನ್ನು ಮೋಟೊ ಹೊಸ Moto G13 ಸ್ಮಾರ್ಟ್ಫೋನ್ ಹೊಂದಿದೆ. ನೂತನ ಫೋನ್, ಬಜೆಟ್ ಸ್ಮಾರ್ಟ್ಫೋನ್ ವಿಭಾಗದಲ್ಲಿ ಬಿಡುಗಡೆಯಾಗಿದ್ದು, ಆಕರ್ಷಕ ಪ್ರೀಮಿಯಂ ವಿನ್ಯಾಸ ಹೊಂದಿದೆ. ನೂತನ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.
ಮೋಟೊರೊಲಾ ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಹೊಸ Moto G13 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್ಫೋನ್ನಲ್ಲಿ 6.5 ಇಂಚಿನ HD+ LCD ಡಿಸ್ಪ್ಲೇ ಇದೆ. MediaTek Helio G85 SoC ಪ್ರೊಸೆಸರ್ Arm Mali-G52 MC2 GPU ಬೆಂಬಲ ಹೊಂದಿದೆ. ಜತೆಗೆ, ಭಾರತದ ಮಾರುಕಟ್ಟೆಗೆ ಅನುಗುಣವಾಗಿ ಬಜೆಟ್ ದರದಲ್ಲಿ ನೂತನ ಸ್ಮಾರ್ಟ್ಫೋನ್ ಅನ್ನು ಮೋಟೊ ಪರಿಚಯಿಸಿದೆ.
ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಸಹಿತ ತ್ರಿವಳಿ ಕ್ಯಾಮೆರಾವನ್ನು ಹೊಸ Moto G13 ಸ್ಮಾರ್ಟ್ಫೋನ್ ಹೊಂದಿದೆ. ಅಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಜತೆಗೆ 5,000mAh ಬ್ಯಾಟರಿ ಹಾಗೂ 10W c ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ. ಮೋಟೊ ಹೊಸ Moto G13 ಸ್ಮಾರ್ಟ್ಫೋನ್ನಲ್ಲಿದೆ Android 13 ಕಾರ್ಯಾಚರಣೆ ವ್ಯವಸ್ಥೆ ಇದೆ.
ನೂತನ Moto G13 ಸ್ಮಾರ್ಟ್ಫೋನ್ 4GB RAM ಮತ್ತು 64GB ಮಾದರಿಗೆ ₹9,999 ದರವಿದೆ. ಏಪ್ರಿಲ್ 5ರಿಂದ ರಿಟೇಲ್ ಸ್ಟೋರ್ ಹಾಗೂ ಫ್ಲಿಪ್ಕಾರ್ಟ್ನಲ್ಲಿ ಲಭ್ಯವಾಗುತ್ತದೆ. ಲ್ಯಾವೆಂಡರ್ ಬ್ಲೂ ಮತ್ತು ಮ್ಯಾಟ್ ಚಾರ್ಕೋಲ್ ಬಣ್ಣದಲ್ಲಿ ಹೊಸ ಮೋಟೊ ಫೋನ್ ದೊರೆಯುತ್ತದೆ.