Moto G42
ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ ಹಾಗೂ ಒನ್ಪ್ಲಸ್ ನಂತಹ ಘಟಾನುಘಟಿ ಮೊಬೈಲ್ ಬ್ರ್ಯಾಂಡ್ಗಳು ತಲೆಯೆತ್ತಿ ಮೆರೆಯುತ್ತಿರುವಾಗ ಮೋಟೋರೊಲ (Motorola) ಸಂಸ್ಥೆ ತನ್ನದೆಯಾದ ವಿಶೇಷ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸು ಸಾಧಿಸುತ್ತಿದೆ. ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಿರುವ ಮೋಟೋ ಈಗೀಗ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಎರಡು ದಿನಗಳ ಹಿಂದೆಯಷ್ಟೆ ತನ್ನ G ಸರಣಿಯಲ್ಲಿ ಮೋಟೋ G82 ಫೋನನ್ನು ಅನಾವರಣ ಮಾಡಿದ್ದ ಕಂಪನಿ ಈಗ ಇದೇ ಸರಣಿ ಅಡಿಯಲ್ಲಿ ಮತ್ತೊಂದು ಫೋನನ್ನು ಪರಿಚಯಿಸಿದೆ. ಅದುವೇ ಮೋಟೋ ಜಿ42 (Moto G42). ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ವಿಶೇಷವಾಗಿ ಇದು ಕ್ವಾಡ್ ಪಿಕ್ಸೆಲ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಹಾಗಾದ್ರೆ ಈ ಫೋನಿನ ವಿಶೇಷತೆ ಏನು ಎಂಬುದನ್ನು ನೋಡೋಣ.
- ಮೋಟೋ G42 ಸ್ಮಾರ್ಟ್‌ಫೋನ್ 6.4 ಇಂಚಿನ ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 2,400 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಿಂದ ಕೂಡಿದೆ.
- ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ 12 ನ ಇತ್ತೀಚಿನ ಆವೃತ್ತಿಯ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
- ಇದು 4GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ಲಭ್ಯವಾಗಲಿದೆ.
- ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಒಟ್ಟಾರೆ ಬ್ಯಾಟರಿ ಕಾರ್ಯಕ್ಷಮತೆಯಲ್ಲಿ 20 ಪ್ರತಿಶತದಷ್ಟು ವರ್ಧಕವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.
- ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ.
- ಇದು ಕ್ವಾಡ್ ಪಿಕ್ಸೆಲ್ ಟೆಕ್ನಾಲಜಿಯೊಂದಿಗೆ ಬರುತ್ತಿರುವುದು ವಿಶೇಷ. ಜೊತೆಗೆ ಲೋ ಲೈಟ್ ಸ್ಟೇಟಸ್‌ನಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಲು ನೈಟ್ ವಿಷನ್ ಮೋಡ್ ಅನ್ನು ಒಳಗೊಂಡಿದೆ.
- ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ ಯನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.
- ಮೋಟೋ G42 ಫೋನ್ ಸದ್ಯಕ್ಕೆ ವಿದೇಶದಲ್ಲಿ ಬಿಡುಗಡೆ ಆಗಿದ್ದು, ಕೆಲವೇ ತಿಂಗಳಲ್ಲಿ ಭಾರತಕ್ಕೂ ಕಾಲಿಡಲಿದೆಯಂತೆ. ಹಾಗೆಯೆ ಇದರ ಬೆಲೆ ಎಷ್ಟಿರಬಹುದೆಂಬ ವಿಚಾರವನ್ನು ಕಂಪನಿ ಇನ್ನೂ ರಿವೀಲ್ ಮಾಡಿಲ್ಲ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ