Moto G42
ಮುಂದಿನ ಜುಲೈ ತಿಂಗಳಲ್ಲಿ ಭಾರತದಲ್ಲಿ ಸಾಲು ಸಾಲು ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುವುದರಲ್ಲಿದೆ. ಸ್ಯಾಮ್ಸಂಗ್, ಶವೋಮಿ (Xiaomi), ರಿಯಲ್ ಮಿ, ಒನ್ಪ್ಲಸ್ನ ನಾರ್ಡ್ 2T, ಒಪ್ಪೋ ಹೀಗೆ ಅನೇಕ ಕಂಪನಿಗಳ ಮೊಬೈಲ್ ಮುಂದಿನ ತಿಂಗಳು ದೇಶದಲ್ಲಿ ಅನಾವರಣಗೊಳ್ಳಲಿದೆ. ಇದೀಗ ಈ ಸಾಲಿಗೆ ಮೋಟೋರೊಲ ಕಂಪನಿ ಕೂಡ ಸೇರಿಕೊಂಡಿದೆ. ಹೌದು, ಕಳೆದ ತಿಂಗಳು ವಿದೇಶದಲ್ಲಿ ಬಿಡುಗಡೆ ಮಾಡಿ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದ್ದ ಮೋಟೋ ಜಿ42 (Moto G42) ಸ್ಮಾರ್ಟ್ಫೋನನ್ನು ಮೋಟೋರೊಲ ಕಂಪನಿ ಜುಲೈ 4 ರಂದು ಭಾರತದಲ್ಲಿ ರಿಲೀಸ್ ಮಾಡಲು ಮುಂದಾಗಿದೆ. ಈ ಬಗ್ಗೆ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ (Flipkart) ಟೀಸರ್ ಒಂದನ್ನು ಬಿಟ್ಟಿದ್ದು ಕೆಲ ಫೀಚರ್ಗಳು ಕೂಡ ರಿವೀಲ್ ಆಗಿದೆ. ಹಾಗಾದ್ರೆ ಈ ಫೋನಿನ ವಿಶೇಷತೆ ಏನು ಎಂಬುದನ್ನು ನೋಡೋಣ.
- ಮೋಟೋ G42 ಸ್ಮಾರ್ಟ್‌ಫೋನ್ 6.4 ಇಂಚಿನ ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 2,400 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಿಂದ ಕೂಡಿದೆ.
- ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ 12 ನ ಇತ್ತೀಚಿನ ಆವೃತ್ತಿಯ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
- ಇದು 4GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ಲಭ್ಯವಾಗಲಿದೆ.
- ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 20W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಒಟ್ಟಾರೆ ಬ್ಯಾಟರಿ ಕಾರ್ಯಕ್ಷಮತೆಯಲ್ಲಿ 20 ಪ್ರತಿಶತದಷ್ಟು ವರ್ಧಕವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.
- ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ.
- ಇದು ಕ್ವಾಡ್ ಪಿಕ್ಸೆಲ್ ಟೆಕ್ನಾಲಜಿಯೊಂದಿಗೆ ಬರುತ್ತಿರುವುದು ವಿಶೇಷ. ಜೊತೆಗೆ ಲೋ ಲೈಟ್ ಸ್ಟೇಟಸ್‌ನಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಲು ನೈಟ್ ವಿಷನ್ ಮೋಡ್ ಅನ್ನು ಒಳಗೊಂಡಿದೆ.
- ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ ಯನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.
- ಮೋಟೋ G42 ಫೋನ್ ಬೆಲೆ ಭಾರತದಲ್ಲಿ ಎಷ್ಟೆಂದು ಇನ್ನೂ ತಿಳಿದುಬಂದಿಲ್ಲ. ಆದರೆ, ಮೂಲಗಳ ಪ್ರಕಾರ 20,000 ರೂ. ಒಳಗೆ ಮಾರಾಟ ಕಾಣಲಿದೆ ಎಂದು ಹೇಳಲಾಗಿದೆ.
Laptops Under Rs. 25000: ಬಜೆಟ್ ಬೆಲೆಯ ಬೆಸ್ಟ್ ಲ್ಯಾಪ್ಟಾಪ್ ಹುಡುಕುತ್ತಿದ್ದೀರಾ?: ಇಲ್ಲಿದೆ ನೋಡಿ