Poco F4 5G: 28,000 ರೂ. ಫೋನನ್ನು 23,999ಕ್ಕೆ ಖರೀದಿಸಿ: ಹೊಸ ಪೋಕೋ F4 5G ಮೇಲೆ ಭರ್ಜರಿ ಡಿಸ್ಕೌಂಟ್
ಪೋಕೋ ಎಫ್4 5ಜಿ (POCO F4 5G) ಸ್ಮಾರ್ಟ್‌ಫೋನ್ ಈಗಾಗಲೇ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ (Flipkart) ಮೂಲಕ ಮಾರಾಟವಾಗುತ್ತಿದ್ದು ಭರ್ಜರಿ ಡಿಸ್ಕೌಂಟ್ನಲ್ಲಿ ಕಾಣಿಸಿಕೊಂಡಿದೆ.
ಪೋಕೋ ಸಂಸ್ಥೆ ಭಾರತದಲ್ಲಿ ಕಳೆದ ವಾರವಷ್ಟೆ ಮಧ್ಯಮ ಬೆಲೆಗೆ ಪೋಕೋ ಎಫ್4 5ಜಿ (POCO F4 5G) ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು. ಈ ಫೋನ್ ಈಗಾಗಲೇ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ (Flipkart) ಮೂಲಕ ಮಾರಾಟವಾಗುತ್ತಿದ್ದು ಭರ್ಜರಿ ಡಿಸ್ಕೌಂಟ್ನಲ್ಲಿ ಕಾಣಿಸಿಕೊಂಡಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ ಅಮೆಜಾನ್ ಪ್ರೈಮ್ (Amazon Prime) ವೀಡಿಯೊದಲ್ಲಿ HDR10 ಪ್ಲಸ್ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ಡಾಲ್ಬಿ ವಿಷನ್ ಅನ್ನು ಬೆಂಬಲಿಸಲಿದೆ. ಹೆಚ್ಚಾಗಿ ಬಜೆಟ್ ಬೆಲೆಗೆ ಫೋನನ್ನು ರಿಲೀಸ್ ಮಾಡುತ್ತಿದ್ದ ಪೋಕೋ ಈ ಬಾರಿ ಮಧ್ಯಮ ಬೆಲೆಗೆ ಆಕರ್ಷಕ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಹಾಗಾದ್ರೆ ಈ ಫೋನಿಗೆ ಏನು ಆಫರ್ ನೀಡಲಾಗಿದೆ?, ವಿಶೇಷತೆ ಏನು ಎಂಬುದನ್ನ ನೋಡೋಣ.
- ಭಾರತದಲ್ಲಿ ಪೋಕೋ F4 5G ಸ್ಮಾರ್ಟ್‌ಫೋನ್ ಮೂರು ಮಾದರಿಯಲ್ಲಿ ಅನಾವರಣಗೊಂಡಿದೆ. ಇದರ 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 27,999 ರೂ. ಆಗಿದೆ. 8GB + 128GB ಮಾದರಿಗೆ 29,999 ರೂ. ನಿಗದಿ ಮಾಡಲಾಗಿದೆ ಹಾಗೆಯೆ 12GB + 256GB ಆಯ್ಕೆಯ ಬೆಲೆ 33,999 ರೂ. ಇದೆ.
- ಈ ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರದ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಈ ಫೋನನ್ನು HDFC ಅಥವಾ SBI ಬ್ಯಾಂಕ್ ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 3,000 ರೂ. ಗಳ ರಿಯಾಯಿತಿ ಸಿಗಲಿದೆ. ಅಂತೆಯೆ 1,000 ರೂ. ಗಳ ಪ್ರಿಪೈಡ್ ಆಫರ್ ನೀಡಲಾಗಿದೆ. ಪೋಕೋ F4 5G ಫೋನನ್ನು ನೀವು 23,999 ರೂ. ಗೆ ಖರೀದಿಸಬಹುದು.
- ಈ ಸ್ಮಾರ್ಟ್‌ಫೋನ್ ನೆಬ್ಯುಲಾ ಗ್ರೀನ್ ಮತ್ತು ನೈಟ್ ಬ್ಲಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪೋಕೋ F4 5G ಸ್ಮಾರ್ಟ್‌ಫೋನ್ ಇದೇ ಜೂನ್ 27 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ.
- ಪೋಕೋ F4 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ HD+ E4 ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಿಂದ ಕೂಡಿದೆ.
- ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಅನ್ನು ಹೊಂದಿದೆ. ಆಂಡ್ರಾಯ್ಡ್ 12 ಬೆಂಬಲದೊಂದಿಗೆ MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಮಾಲಿ-G610 MC6 GPU ಸಪೋರ್ಟ್ ಅನ್ನು ಪಡೆದಿದೆ.
- ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ f/1.8 ಲೆನ್ಸ್‌ನೊಂದಿಗೆ ಬರುತ್ತದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ.
- ಇದಲ್ಲದೆ 20 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿರುವ ಕ್ಯಾಮೆರಾಗಳು ನೈಟ್ ಮೋಡ್, AI ಸ್ಕೈಸ್ಕೇಪಿಂಗ್ 4.0 ಮತ್ತು AI ಎರೇಸ್ 2.0 ನಂತಹ ಫೀಚರ್ಸ್‌ಗಳನ್ನು ಒಳಗೊಂಡಿವೆ. ಜೊತೆಗೆ ಎಲ್ಇಡಿ ಫ್ಲ್ಯಾಷ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್ ಕೂಡ ಸೇರಿದೆ.
- ಪೊಕೊ F4 5G ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಈ ಬ್ಯಾಟರಿ ಕೇವಲ 38 ನಿಮಿಷಗಳಲ್ಲಿ 0% to 100% ಚಾರ್ಜ್ ಮಾಡಲಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ
OnePlus Nord 2T: ಒನ್ಪ್ಲಸ್ ನಾರ್ಡ್ 2T ಬಿಡುಗಡೆಗೆ ಕ್ಷಣಗಣನೆ: ಏನು ವಿಶೇಷತೆ?, ಬೆಲೆ ಎಷ್ಟು?