Moto Edge 30 Ultra: ಇಂದಿನಿಂದ 200MP ಕ್ಯಾಮೆರಾದ ಮೋಟೋ ಎಡ್ಜ್ 30 ಅಲ್ಟ್ರಾ ಖರೀದಿಗೆ ಲಭ್ಯ: ಆಫರ್ ಏನಿದೆ ನೋಡಿ

| Updated By: Vinay Bhat

Updated on: Sep 23, 2022 | 6:21 AM

Flipkart’s Big Billion Days sale: ಮೋಟೋರೊಲಾ ಎಡ್ಜ್ 30 ಅಲ್ಟ್ರಾ 5ಜಿ (Motorola Edge 30 Ultra 5G) ಫ್ಲಿಪ್‌ಕಾರ್ಟ್‌ನಲ್ಲಿ ಇಂದಿನಿಂದ ಆರಂಭವಾಗಿರುವ ಬಿಗ್ ಬಿಲಿಯನ್‌ ಡೇಸ್‌ ಸೇಲ್​ನಲ್ಲಿ ಮಾರಾಟ ಕಾಣುತ್ತಿದೆ. ಈ ಫೋನ್ ಮೇಲೆ ಅತ್ಯುತ್ತಮ ಎಕ್ಸ್‌ಚೇಂಜ್ ಕೊಡುಗೆ, ಬ್ಯಾಂಕ್‌ ಆಫರ್‌ಗಳನ್ನು ನೀಡಲಾಗಿದೆ.

Moto Edge 30 Ultra: ಇಂದಿನಿಂದ 200MP ಕ್ಯಾಮೆರಾದ ಮೋಟೋ ಎಡ್ಜ್ 30 ಅಲ್ಟ್ರಾ ಖರೀದಿಗೆ ಲಭ್ಯ: ಆಫರ್ ಏನಿದೆ ನೋಡಿ
Motorola Edge 30 Ultra
Follow us on

ಮೋಟೋರೊಲಾ ಕಂಪನಿ ಕಳೆದ ವಾರವಷ್ಟೆ ಭಾರತದಲ್ಲಿ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು ಲಾಂಚ್ ಮಾಡಿತ್ತು. ಇದರ ಹೆಸರು ಮೋಟೋರೊಲಾ ಎಡ್ಜ್ 30 ಅಲ್ಟ್ರಾ 5ಜಿ (Motorola Edge 30 Ultra 5G). ಈ ಫೋನಿನ ಪ್ರಮುಖ ವಿಶೇಷತೆ ಕ್ಯಾಮೆರಾ ಆಗಿದ್ದು, ಇದು ವಿಶ್ವದ ಮೊಟ್ಟ ಮೊದಲ 200 ಮೆಗಾಫಿಕ್ಸೆಲ್ ಕ್ಯಾಮೆರಾ (200MP Camera Phone) ಹೊಂದಿರುವ ಫೋನಾಗಿದೆ. ಜೊತೆಗೆ ಅತ್ಯಂತ ವೇಗದ 125W ಫಾಸ್ಟ್ ಚಾರ್ಜರ್ ಅಳವಡಿಸಲಾಗಿದೆ. ಇದೀಗ ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಇಂದಿನಿಂದ ಆರಂಭವಾಗಿರುವ ಬಿಗ್ ಬಿಲಿಯನ್‌ ಡೇಸ್‌ ಸೇಲ್​ನಲ್ಲಿ (Flipkart’s Big Billion Days sale) ಮಾರಾಟ ಕಾಣುತ್ತಿದೆ. ಈ ಫೋನ್ ಮೇಲೆ ಅತ್ಯುತ್ತಮ ಎಕ್ಸ್‌ಚೇಂಜ್ ಕೊಡುಗೆ, ಬ್ಯಾಂಕ್‌ ಆಫರ್‌ಗಳನ್ನು ನೀಡಲಾಗಿದೆ.

ಮೋಟೋ ಎಡ್ಜ್‌ 30 ಅಲ್ಟ್ರಾ ಸ್ಮಾರ್ಟ್‌ಫೋನ್ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM + 128GB ಸ್ಟೋರೇಜ್ ರೂಪಾಂತರಕ್ಕೆ ಭಾರತದಲ್ಲಿ 59,999 ರೂ. ನಿಗದಿ ಮಾಡಲಾಗಿದೆ. ಆದರೆ, ಫ್ಲಿಪ್​ಕಾರ್ಟ್​ನಲ್ಲಿ ಆಫರ್ ಮೂಲಕ ಈ ಫೋನನ್ನು ನೀವು 54,999ರೂ. ಗಳಿಗೆ ಖರೀದಿಸಬಹುದು. ಗ್ರಾಹಕರು ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿ ಮಾಡಿದರೆ, 3,000ರೂ. ಗಳ ಇನ್‌ಸ್ಟಂಟ್‌ ರಿಯಾಯಿತಿ ದೊರೆಯುತ್ತದೆ.

ಇನ್ನು ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 6.67 ಇಂಚಿನ ಫುಲ್ ಹೆಚ್​ಡಿ+ pOLED ಡಿಸ್‌ಪ್ಲೇ ಹೊಂದಿದೆ. ಇದು 144Hz ರಿಫ್ರೆಶ್ ರೇಟ್​ನಿಂದ ಕೂಡಿದ್ದು ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ನೀಡಲಾಗಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8+ Gen ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಸ್ನಾಪ್‌ಡ್ರಾಗನ್ ಎಲೈಟ್ ಗೇಮಿಂಗ್ ಫೀಚರ್ ಕೂಡ ಅಳವಡಿಸಲಾಗಿದೆ.

ಇದನ್ನೂ ಓದಿ
Flipkart’s Big Billion Days sale: ಕೇವಲ 30,000 ರೂ. ಒಳಗೆ ಸಿಗುತ್ತಿದೆ ನಥಿಂಗ್ ಫೋನ್, ಗೂಗಲ್ ಪಿಕ್ಸೆಲ್ ಫೋನ್: ಈ ಆಫರ್ ಮತ್ತೆ ಬರಲ್ಲ
Amazon Great Indian Festival Sale: ಪ್ರೈಮ್ ಸದಸ್ಯರಿಗೆ ಅಮೆಜಾನ್​ನಲ್ಲಿ ಬಹುನಿರೀಕ್ಷಿತ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ ಆರಂಭ: ಏನಿದೆ ಆಫರ್?
WhatsApp: ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನ ಯಾರು ಬ್ಲಾಕ್ ಮಾಡಿದ್ದಾರೆಂದು ಸುಲಭವಾಗಿ ತಿಳಿಯಿರಿ: ಹೇಗೆ ಗೊತ್ತೇ?
Vivo V25 5G: ಕ್ಯಾಮೆರಾದಲ್ಲಿ ಭರ್ಜರಿ ಫೀಚರ್​​ಗಳಿರುವ ವಿವೋ V25 ಈಗ ಖರೀದಿಗೆ ಲಭ್ಯ: ಆಫರ್ ಏನಿದೆ?

ವಿಶೇಷವಾಗಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 200 ಮೆಗಾಪಿಕ್ಸೆಲ್ ಸ್ಯಾಮ್​ಸಂಗ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇದು f/1.9 ಅಪಾರ್ಚರ್ ಲೆನ್ಸ್​ನಿಂದ ಕೂಡಿದೆ. ಎರಡನೇ ಕ್ಯಾಮೆರಾ 50 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 12 ಮೆಗಾಫಿಕ್ಸೆಲ್ ಡೆಪ್ತ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 60 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಬೃಹತ್‌ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.ಇದರಲ್ಲಿ ಪ್ರಾಥಮಿಕ ಕ್ಯಾಮರಾ OIS ಬೆಂಬಲವನ್ನು ಪಡೆದುಕೊಂಡಿದೆ. ಸೆಲ್ಪೀ ಕ್ಯಾಮೆರಾವು 4K ವಿಡಿಯೋ ರೆಕಾರ್ಡ್ ಮಾಡುತ್ತದೆ.

ದೀರ್ಘ ಸಮಯ ಬಾಳಿಕೆ ಬರುವ ಬಲಿಷ್ಠ 4610mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 125W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ಪಡೆದುಕೊಂಡಿದೆ. ಈ ಮೂಲಕ ಕೆಲವೇ ನಿಮಿಷಗಳಲ್ಲಿ ಫುಲ್‌ ಚಾರ್ಜ್‌ ಮಾಡಲು ಸಾಧ್ಯವಾಗಲಿದೆ. ಕಂಪನಿ ಹೇಳಿರುವ ಪ್ರಕಾರ 7 ನಿಮಿಷ ಚಾರ್ಜ್ ಮಾಡಿದರೆ 12 ಗಂಟೆಗಳ ಕಾಲ ಉಪಯೋಗಿಸಬಹುದಂತೆ. ಇದರ ಜೊತೆಗೆ 50W ವೈಯರ್​ಲೆಸ್ ಚಾರ್ಜಿಂಗ್ ಸಪೋರ್ಟ್ ಕೂಡ ಪಡೆದುಕೊಂಡಿದೆ.