AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Great Indian Festival Sale: ಪ್ರೈಮ್ ಸದಸ್ಯರಿಗೆ ಅಮೆಜಾನ್​ನಲ್ಲಿ ಬಹುನಿರೀಕ್ಷಿತ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ ಆರಂಭ: ಏನಿದೆ ಆಫರ್?

ಅಮೆಜಾನ್‌ ಪ್ರೈಮ್‌ ಸದಸ್ಯರು ಇಂದಿನಿಂದಲೇ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಪ್ರವೇಶಾವಕಾಶ ಲಭ್ಯವಾಗಿದೆ. ಈ ಸಮಯದಲ್ಲಿ ಗ್ರಾಹಕರು ರೂ. 7,500 ವರೆಗೆ ರಿವಾರ್ಡ್‌ಗಳಲ್ಲಿ ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ. ನಿಮ್ಮ ಫೋನ್ ರಿಚಾರ್ಜ್‌, ಅಮೆಜಾನ್‌ ಪೇ ಬಳಸಿ ಹಣವನ್ನು ಕಳುಹಿಸಬಹುದು, ವಿವಿಧ ಹಬ್ಬದ ಡೀಲ್‌ಗಳನ್ನು ಅನ್‌ಲಾಕ್ ಮಾಡಬಹುದು.

Amazon Great Indian Festival Sale: ಪ್ರೈಮ್ ಸದಸ್ಯರಿಗೆ ಅಮೆಜಾನ್​ನಲ್ಲಿ ಬಹುನಿರೀಕ್ಷಿತ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ ಆರಂಭ: ಏನಿದೆ ಆಫರ್?
Amazon Great Indian Festival Sale 2022
TV9 Web
| Edited By: |

Updated on:Oct 09, 2026 | 2:38 PM

Share

ಅಮೆಜಾನ್‌ ಹಬ್ಬದ ಕಾರ್ಯಕ್ರಮ ದಿ ಅಮೆಜಾನ್ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ 2022 (Amazon Great Indian Festival Sale) ಸೆಪ್ಟೆಂಬರ್ 23, 2022 ರಿಂದ ಆರಂಭವಾಗಲಿದ್ದು, ಪ್ರೈಮ್‌ ಸದಸ್ಯರಿಗೆ ಮೊದಲೇ ಇಂದಿನಿಂದ ಪ್ರವೇಶಾವಕಾಶ ಲಭ್ಯವಾಗಿದೆ. ಲಕ್ಷಾಂತರ ಸಣ್ಣ ಮಧ್ಯಮ ಬ್ಯುಸಿನೆಸ್ ಇಂದ ವಿಶಾಲ ಶ್ರೇಣಿಯ ಉತ್ಪನ್ನಗಳ ಮೇಲೆ ಹಿಂದೆಂದೂ ಕಾಣದ ಡೀಲ್‌ಗಳನ್ನು ಗ್ರಾಹಕರಿಗೆ ಈ ಬಾರಿ ನೀಡಲಾಗಿದೆ. ಅಮೆಜಾನ್‌ ತಾಣದಲ್ಲಿ ವಿವಿಧ ಸ್ಮಾರ್ಟ್‌ಫೋನ್‌ಗಳು (Smartphones), ಸ್ಮಾರ್ಟ್‌ವಾಚ್‌ಗಳು, ಟಿವಿಗಳು, ಕಂಪ್ಯೂಟರ್ ಪೆರಿಫೆರಲ್ಸ್ ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳನ್ನು ಆಫರ್‌ನಲ್ಲಿ ಖರೀದಿಸಬಹುದಾಗಿದೆ. ಪ್ರೈಮ್‌ (Amazon Prime) ಸದಸ್ಯರಾಗಿರುವ ಗ್ರಾಹಕರು ಪ್ರತಿ 6 ಗಂಟೆಗಳಿಗೊಮ್ಮೆ ಹೊಸ ಆಫರ್‌ಗಳನ್ನು ಪಡೆದುಕೊಳ್ಳುವ ಮೂಲಕ ಆರಂಭಿಕ ದಿನದ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ 2000 ಕ್ಕೂ ಹೆಚ್ಚು ಹೊಸ ಉತ್ಪನ್ನ ಬಿಡುಗಡೆಯಾಗಲಿದೆ ಮತ್ತು ಪ್ರಮುಖ ಬ್ರಾಂಡ್‌ಗಳಾದ ಸ್ಯಾಮ್‌ಸಂಗ್‌, ಐಕ್ಯೂ, ಎಂಐ, ರೆಡ್ಮಿ, ಆಪಲ್‌, ಒನ್‌ಪಲ್ಸ್, ಎಲ್‌ಜಿ, ಸೋನಿ, ಕೋಲ್ಗೇಟ್, ಬೋಟ್, ಎಚ್‌ಪಿ, ಲೆನೊವೊ, ಫೈರ್ ಬೋಲ್ಟ್‌, ನಾಯ್ಸ್‌, ಹೈಸೆನ್ಸ್‌, ವು, ಟಿಸಿಎಲ್‌, ಏಸರ್, ಅಲೆನ್ ಸೊಲಿ, ಬಿಬಾ, ಮ್ಯಾಕ್ಸ್, ಪುಮಾ, ಅಡಿಡಾಸ್, ಅಮೆರಿಕನ್ ಟೂರಿಸ್ಟರ್, ಸಫಾರಿ, ಸ್ಟೋರಿ@ಹೋಮ್, ಅಜಂತಾ, ವಿಪ್ರೋ, ಪ್ರೆಸ್ಟೀಜ್, ಬಟರ್‌ಫ್ಲೈ, ಮಿಲ್ಟನ್, ಸಾಲಿಮೋ, ದಿ ಸ್ಲೀಪ್ ಕಂಪನಿ, ಯೊನೆಕ್ಸ್‌, ನಿವಿಯಾ, ಹೀರೋ ಸೈಕಲ್ಸ್, ಬಾಷ್, ಬ್ಲಾಕ್+ಡೆಕರ್, ಹಿಟ್, ಟ್ರಸ್ಟ್‌ ಬಾಸ್ಕೆಟ್ ಹಾಗೂ ಇತರೆ ಬ್ರ್ಯಾಂಡ್‌ಗಳಿಂದ ಆಯ್ಕೆಗಳಿವೆ.

ಈ ಸಮಯದಲ್ಲಿ ಗ್ರಾಹಕರು ರೂ. 7,500 ವರೆಗೆ ರಿವಾರ್ಡ್‌ಗಳಲ್ಲಿ ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ. ನಿಮ್ಮ ಫೋನ್ ರಿಚಾರ್ಜ್‌, ಅಮೆಜಾನ್‌ ಪೇ ಬಳಸಿ ಹಣವನ್ನು ಕಳುಹಿಸಬಹುದು, ವಿವಿಧ ಹಬ್ಬದ ಡೀಲ್‌ಗಳನ್ನು ಅನ್‌ಲಾಕ್ ಮಾಡಬಹುದು. ಬಿಲ್ ಪಾವತಿಗಳು, ರಿಚಾರ್ಜ್‌ ಮತ್ತು ಇತರೆ ಮೇಲೆ ಮೊದಲ ಅಮೆಜಾನ್ ಪೇ ವಹಿವಾಟು ಮಾಡುವ ಗ್ರಾಹಕರು ರೂ. 50 ಹಿಂದೆ ಅನ್ನೂ ಪಡೆಯುತ್ತಾರೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಗ್ರಾಹಕರು ರೂ. 2500 ಸ್ವಾಗತ ಕೊಡುಗೆಯನ್ನು ಪಡೆಯಬಹುದು ಮತ್ತು ಅಮೆಜಾನ್ ಪೇ ಲೇಟರ್‌ ಸಕ್ರಿಯಗೊಳಿಸುವ ಗ್ರಾಹಕರು ರೂ. 150 ಅನ್ನು ಪಡೆಯಬಹುದು ಹಾಗೂ ರೂ. 60,000 ವರೆಗೆ ಇನ್‌ಸ್ಟಂಟ್ ಕ್ರೆಡಿಟ್‌ ಪಡೆಯಬಹುದು.

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಯಾಮ್‌ಸಂಗ್‌, ಐಕ್ಯೂ, ಆಪಲ್‌, ರಿಯಲ್‌ಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್‌ ಆಫರ್‌ ಲಭ್ಯವಾಗಲಿದೆ. ಇನ್ಸಟಂಟ್‌ ಡಿಸ್ಕೌಂಟ್‌ ಜೊತೆಗೆ ನೋ ಕಾಸ್ಟ್‌ EMI ಮತ್ತು ಎಕ್ಸ್‌ಚೇಂಜ್‌ ಆಫರ್‌ ಅನ್ನು ಕೂಡ ದೊರೆಯಲಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಹೆಡ್‌ಫೋನ್‌ಗಳ ಮೇಲೆ 75% ಡಿಸ್ಕೌಂಟ್‌ ನೀಡುವುದಾಗ ಅಮೆಜಾನ್‌ ಹೇಳಿಕೊಂಡಿದೆ.

ಇತ್ತ ವಾಲ್ಮಾರ್ಟ್ ಒಡೆತನದ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್​​ನಲ್ಲಿ ಕೂಡ ವಾರ್ಷಿಕ ಬಿಗ್ ಬಿಲಿಯನ್ ಡೇಸ್ ಸೇಲ್ 2022 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಕೂಡ ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡುವುದಾಗಿ ತಿಳಿಸಿರುವ ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇಸ್​ನಲ್ಲಿ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ವಸ್ತುಗಳು, ಫ್ಯಾಶನ್ ಮತ್ತು ಗೃಹ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ದೊರೆಯಲಿದೆ. ಈ ಸೇಲ್‌ ಸೆಪ್ಟೆಂಬರ್‌ 23 ರಂದು ಲೈವ್ ಆಗಲಿದ್ದು, ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಬಳಕೆದಾರರಿಗೆ ಒಂದು ದಿನ ಮುಂಚಿತವಾಗಿ ಇಂದೇ ಸೇಲ್‌ ಪ್ರಾರಂಭವಾಗಿದೆ. ಸೇಲ್‌ ಸಂದರ್ಭದಲ್ಲಿ ಖರೀದಿದಾರರು ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಭರ್ಜರಿ ರಿಯಾಯಿತಿಯನ್ನು ಪಡೆಯಬಹುದು.

Published On - 1:01 pm, Thu, 22 September 22

Follow Us
TV9 Web
TV9 Web

TV9 Kannada

Read More
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು