Flipkart Big Billion Days sales – Amazon Great Indian Festival: ಫ್ಲಿಪ್​ಕಾರ್ಟ್​-ಅಮೆಜಾನ್ ಬಿಗ್ ಸೇಲ್​ಗೆ ಡೇಟ್​ ಫಿಕ್ಸ್

Flipkart Big Billion Days sales - Amazon Great Indian Festival: "ಬಿಗ್ ಬಿಲಿಯನ್ ಡೇ ಸ್ಪೆಷಲ್" ಸೇಲ್​ಗಳ ಮೂಲಕ ಫ್ಲಿಪ್​ಕಾರ್ಟ್​ ಕೆಲ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ನೀಡುವುದಾಗಿ ತಿಳಿಸಿದೆ.

Flipkart Big Billion Days sales - Amazon Great Indian Festival: ಫ್ಲಿಪ್​ಕಾರ್ಟ್​-ಅಮೆಜಾನ್ ಬಿಗ್ ಸೇಲ್​ಗೆ ಡೇಟ್​ ಫಿಕ್ಸ್
Flipkart - Amazon
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 14, 2022 | 4:28 PM

ವಿಶ್ವದ ಜನಪ್ರಿಯ ಇ-ಕಾಮರ್ಸ್​ ಕಂಪೆನಿಗಳಾದ ಅಮೆಜಾನ್ (Amazon) ಹಾಗೂ ಫ್ಲಿಪ್​ಕಾರ್ಟ್ (Flipkart)​ ಭಾರತದಲ್ಲಿ ದೀಪಾವಳಿ ಸೇಲ್​ಗೆ ಸಿದ್ಧತೆಗಳನ್ನು ಆರಂಭಿಸಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಎರಡೂ ಕಂಪೆನಿಗಳು ಬಿಗ್ ಆಫರ್​ನ ಬಿಗ್ ಸೇಲ್​ ಶುರುವಾಗುವ ದಿನಾಂಕವನ್ನು ಘೋಷಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ವರ್ಷದ ಬಿಗ್ ಬಿಲಿಯನ್ ಡೇಸ್ ಸೇಲ್​ ಅನ್ನು ಸೆಪ್ಟೆಂಬರ್​ 23 ಕ್ಕೆ ಶುರು ಮಾಡುವುದಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಅಮೆಜಾನ್‌ ಕೂಡ ಸೆಪ್ಟೆಂಬರ್ 23 ರಿಂದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಪ್ರಾರಂಭವಾಗಲಿದೆ ಎಂದು ತಿಳಿಸಿದೆ. ಅದರಂತೆ ಸೆಪ್ಟೆಂಬರ್ 23 ರಿಂದ ಅಮೆಜಾನ್ ಹಾಗೂ ಫ್ಲಿಪ್​ಕಾರ್ಟ್​ನಲ್ಲಿ ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ಇರಲಿದ್ದು, ಗ್ರಾಹಕರು ವಿವಿಧ ಆಫರ್​ಗಳೊಂದಿಗೆ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.

ಅಮೆಜಾನ್ ವಿಶೇಷ ಆಫರ್: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಪ್ರಯೋಜಕರಾಗಿರುವ Samsung ಮತ್ತು iQoo ಕಂಪೆನಿಗಳು ತಮ್ಮ ಉತ್ಪನ್ನಗಳ ಮೇಲೆ ವಿಶೇಷ ಆಫರ್​ ಅನ್ನು ನೀಡಲಿದೆ. ಅಲ್ಲದೆ ಸ್ಮಾರ್ಟ್​ಫೋನ್​ಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ಕ್ಯಾಶ್​ ಬ್ಯಾಕ್ ಕೊಡುಗೆಗಳು ಕೂಡ ಲಭಿಸಲಿದೆ. ಈಗಾಗಲೇ OnePlus, Samsung, iQOO ಮತ್ತು Xiaomi ನಂತಹ ಸ್ಮಾರ್ಟ್‌ಫೋನ್ ಕಂಪೆನಿಗಳು ಬಿಗ್ ಆಫರ್​ ನೀಡುವುದಾಗಿ ಘೋಷಿಸಿದೆ.

ಅಮೆಜಾನ್ ಮಾಹಿತಿ ಪ್ರಕಾರ ಇತ್ತೀಚೆಗೆ ಬಿಡುಗಡೆಯಾದ iPhone 14 ಸರಣಿ ಮತ್ತು Redmi 11 Prime ಮತ್ತು iQoo Z6 Lite ನಂತಹ 5G ಫೋನ್‌ಗಳ ಖರೀದಿಗೂ ಆಫರ್​ಗಳು ಸಿಗಲಿದೆ. ಇನ್ನು ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, ಹೆಡ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳಂತಹ ಇತರ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿದಾರರಿಗೆ 75% ವರೆಗಿನ ರಿಯಾಯಿತಿಗಳು ಲಭ್ಯವಿರಬಹುದು. ಅಷ್ಟೇ ಅಲ್ಲದೆ ಮಾರಾಟ ಪ್ರಾರಂಭವಾದ ನಂತರ, ಪ್ರತಿ ಆರು ಗಂಟೆಗಳಿಗೊಮ್ಮೆ ಹೊಸ ಕೊಡುಗೆಗಳನ್ನು ಪೋಸ್ಟ್ ಮಾಡುವುದಾಗಿ ಅಮೆಜಾನ್ ಭರವಸೆ ನೀಡಿದೆ.

ಇದನ್ನೂ ಓದಿ
Image
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

Amazon ನೀಡುತ್ತಿರುವ ಪ್ರಸ್ತುತ ಕಿಕ್​ಸ್ಟಾಟರ್ ಡೀಲ್‌ಗಳಲ್ಲಿ ಹಲವು ಆಫರ್​ಗಳಿರಲಿವೆ. ಮುಖ್ಯವಾಗಿ ಸ್ಮಾರ್ಟ್​ಫೋನ್​ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿರಲಿದೆ. OnePlus 9 Pro 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಸ್ಮಾರ್ಟ್​ಫೋನ್ ಮೇಲೆ​ ರೂ. 15,000 ರಷ್ಟು ರಿಯಾಯಿತಿ ಸಿಗಲಿದೆ. ಅಂದರೆ ಈ ಫೋನ್​ನ ಮೂಲ ಬೆಲೆಯನ್ನು ರೂ 54,999 ಕ್ಕೆ ಇಳಿಸಲಾಗಿದೆ. ಹೆಚ್ಚುವರಿಯಾಗಿ, ಬೋಟ್ ಏರ್‌ಡೋಪ್ಸ್ 441 ಮತ್ತು ಇತರ ಇಯರ್‌ಬಡ್‌ಗಳಿಗೆ ರಿಯಾಯಿತಿಗಳು ಲಭ್ಯವಿದೆ.

ಫ್ಲಿಪ್​ಕಾರ್ಟ್​ ಬಿಗ್ ಆಫರ್: “ಬಿಗ್ ಬಿಲಿಯನ್ ಡೇ ಸ್ಪೆಷಲ್” ಸೇಲ್​ಗಳ ಮೂಲಕ ಫ್ಲಿಪ್​ಕಾರ್ಟ್​ ಕೆಲ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ನೀಡುವುದಾಗಿ ತಿಳಿಸಿದೆ. ಅಲ್ಲದೆ ಬ್ರಾಂಡ್ ವಸ್ತುಗಳ ಮೇಲೆ ಕಡಿದಾದ ರಿಯಾಯಿತಿಗಳು ಸಿಗಲಿದೆ. ಹಾಗೆಯೇ Poco F4, Pixel 6a, Poco X4 Pro 5G, Oppo Reno 8, Motorola Edge 30, Realme 9 5G, Poco C31, Vivo T1 5G, ಮತ್ತು Samsung F13 ಎಲ್ಲಾ ಸ್ಮಾರ್ಟ್​ಫೋನ್​ಗಳ ಮೇಲೆ ರಿಯಾಯಿತಿಯನ್ನು ನೀಡಲಾಗುತ್ತದೆ.

Flipkart ಬಿಗ್ ಬಿಲಿಯನ್ ಸೇಲ್ಸ್​ನಲ್ಲಿ ಗೇಮಿಂಗ್ ಲ್ಯಾಪ್‌ಟಾಪ್‌ಗಳ ಮೇಲೆ 40% ವರೆಗೆ ಮತ್ತು ಮಾನಿಟರ್‌ಗಳು ಮತ್ತು ಪ್ರಿಂಟರ್‌ಗಳ ಮೇಲೆ 80% ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಟಿವಿ ಅಥವಾ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಲು ಬಯಸುವವರು 80% ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ ICICI ಅಥವಾ Axis ಬ್ಯಾಂಕ್ ಕಾರ್ಡ್‌ಗಳನ್ನು ಹೊಂದಿರುವವರಿಗೆ, ಇ-ಕಾಮರ್ಸ್ ದೈತ್ಯ 10% ತ್ವರಿತ ರಿಯಾಯಿತಿಯನ್ನು ನೀಡುತ್ತಿರುವುದು ವಿಶೇಷ. ಒಟ್ಟಿನಲ್ಲಿ ಇ-ಕಾಮರ್ಸ್​ನ ಎರಡು ದೈತ್ಯ ಕಂಪೆನಿಗಳ ಪೈಪೋಟಿ ನಡುವೆ ಈ ಬಾರಿ ಗ್ರಾಹಕರಿಗೆ ಹಲವು ರೀತಿಯ ಆಫರ್​ಗಳು ಲಭ್ಯವಿರಲಿದೆ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ