TECNO POVA Neo 5G smartphone: ಮಾರುಕಟ್ಟೆಗೆ ಇಂದು ಅಗ್ಗದ ಬೆಲೆಯಲ್ಲಿ ಲಗ್ಗೆ ಇಡಲಿದೆ ಹೊಸ ಮೊಬೈಲ್; ಬೆಲೆ, ವೈಶಿಷ್ಟ್ಯಗಳು ಹೀಗಿವೆ
ಇಂದು ಭಾರತದ ಮಾರುಕಟ್ಟೆಗೆ Tecno Pova Neo 5G ಸ್ಮಾರ್ಟ್‌ಫೋನ್ ಲಗ್ಗೆ ಇಡಲಿದ್ದು, ಅಗ್ಗದ ಬೆಲೆಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ಬೆಲೆ ಹಾಗೂ ಇತರೆ ವೈಶಿಷ್ಟ್ಯಗಳು ಇಲ್ಲಿವೆ.
ನೀವು ಅಗ್ಗದ 5G ಫೋನ್ ಖರೀದಿಸಲು ಬಯಸಿದರೆ ಇಂದು (ಸೆ.23) ಬಿಡುಗಡೆಯಾಗುತ್ತಿರುವ TECNO POVA Neo 5G ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆಯಾಗಿದೆ. ಅಧಿಕೃತ ಬಿಡುಗಡೆಗೆ ಮುಂಚಿತವಾಗಿ ಮೊಬೈಲ್ನ ಪ್ರೊಸೆಸರ್, ಬ್ಯಾಟರಿ ಮತ್ತು ಚಾರ್ಜಿಂಗ್ ವೇಗ ಸೇರಿದಂತೆ ಮುಂಬರುವ ಸ್ಮಾರ್ಟ್‌ಫೋನ್‌ನ ಕೆಲವು ಪ್ರಮುಖ ವಿಶೇಷಣಗಳನ್ನು ಕಂಪನಿಯು ದೃಢಪಡಿಸಿದೆ. Tecno Pova Neo 5G ಮೊಬೈಲ್ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6000mAh ಬ್ಯಾಟರಿಯೊಂದಿಗೆ ಬರಲಿದ್ದು, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 810 ಚಿಪ್ ಅನ್ನು ಹೊಂದಿದೆ ಎಂದು ದೃಢಪಡಿಸಲಾಗಿದೆ. ವರದಿಯ ಪ್ರಕಾರ, ಈ ಸ್ಮಾರ್ಟ್‌ಫೋನ್ 6.9 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ಆದರೆ ಪರದೆಯ ಕುರಿತು ಹೆಚ್ಚಿನ ವಿವರಗಳು ಲಭ್ಯವಿಲ್ಲ. ಮೀಡಿಯಾ ಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್‌ನಿಂದ ಫೋನ್ ಬರಲಿದೆ ಎಂದು ಕಂಪನಿಯು ಈ ಹಿಂದೆ ಬಹಿರಂಗಪಡಿಸಿತ್ತು. ಇದು Android 12 ಆಧಾರಿತ HiOS UI ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ.
ಮೆಮೊರಿಯ ವಿಷಯದಲ್ಲಿ, ಸಾಧನವು 4GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಬರುವ ಸಾಧ್ಯತೆಯಿದೆ. ಕ್ಯಾಮೆರಾ ವಿಭಾಗವನ್ನು ನೋಡುವುದಾದರೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇರುತ್ತದೆ, ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಒಳಗೊಂಡಿರುತ್ತದೆ. ಮುಂಭಾಗದಲ್ಲಿ ಸೆಲ್ಫಿಗಳನ್ನು ತೆಗೆದುಕೊಳ್ಳಲು ಮತ್ತು ವೀಡಿಯೊ ಕರೆ ಮಾಡಲು 8 ಮೆಗಾಪಿಕ್ಸೆಲ್ ಸ್ನ್ಯಾಪರ್ ಇರುತ್ತದೆ.
Tecno Pova Neo 5G ಬೆಲೆ
ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ Tecno Pova Neo 5G ಬೆಲೆಯು 17,000 ರೂ. ಮತ್ತು 19,000 ರೂ. ನಡುವೆ ಇದೆ ಎಂದು ಹೇಳಲಾಗಿದೆ. ಫೋನ್ ಸಪ್ಲೈಯರ್ ಬ್ಲ್ಯಾಕ್ ಮತ್ತು ಸ್ಪ್ರಿಂಟ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಬರಲಿದೆ ಎಂದು ವರದಿಯಾಗಿದೆ.
ಮುಂಬರುವ ಟೆಕ್ನೋ ಸ್ಮಾರ್ಟ್‌ಫೋನ್ 4GB RAM ಮತ್ತು 128GB ಆನ್‌ಬೋರ್ಡ್ ಸ್ಟೋರೇಜ್ ಅನ್ನು ಒಳಗೊಂಡಿದ್ದು, ಇದು 6.9 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತದೆ. ಫೋನ್ ಎಲ್ಇಡಿ ಫ್ಲ್ಯಾಷ್ನೊಂದಿಗೆ 50 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ. ಇದು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.
Get ready to say goodbye to battery anxiety with the TECNO POVA NEO 5G, a smartphone with 6000mAh mega battery & 18W flash charger. .
Choose the best of its kind & unleash the powerful battery!
Launching on 23rd of September. #TECNO #TecnoMobile #TECNOPOVANEO5G #POVANEO5G pic.twitter.com/2pLAtl5iUd
— TECNO Mobile India (@TecnoMobileInd) September 21, 2022
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ