Flipkart: ಬಿಗ್ ಬಿಲಿಯನ್​ಡೇಸ್​ನಲ್ಲಿ ಕೇವಲ 20,000 ರೂ. ಒಳಗೆ ಸಿಗುತ್ತಿರುವ ಬೆಸ್ಟ್​​ ಸ್ಮಾರ್ಟ್​​ಫೋನ್​ಗಳು ಇಲ್ಲಿವೆ

ಫ್ಲಿಪ್‌ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ 2022 (Flipkart Big Billion Days sale) ಸೆಪ್ಟೆಂಬರ್ 30 ರವರೆಗೆ ಆಯೋಜಿಸಲಾಗಿದೆ. ಈ ಸೇಲ್​ನಲ್ಲಿ 20,000 ರೂ. ಒಳಗೆ ಖರೀದಿಸಬಹುದಾದಂತ ಆಕರ್ಷಕ ಫೋನ್​ಗಳನ್ನು ನೋಡುವುದಾದರೆ...

Flipkart: ಬಿಗ್ ಬಿಲಿಯನ್​ಡೇಸ್​ನಲ್ಲಿ ಕೇವಲ 20,000 ರೂ. ಒಳಗೆ ಸಿಗುತ್ತಿರುವ ಬೆಸ್ಟ್​​ ಸ್ಮಾರ್ಟ್​​ಫೋನ್​ಗಳು ಇಲ್ಲಿವೆ
Smartphones
Follow us
TV9 Web
| Updated By: Vinay Bhat

Updated on:Sep 23, 2022 | 3:12 PM

ಎರಡು ಪ್ರಸಿದ್ಧ ಇ ಕಾಮರ್ಸ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​ನಲ್ಲಿ ವರ್ಷದ ಅತಿ ಡೊಡ್ಡ ಮೇಳ ಪ್ರಾರಂಭವಾಗಿದೆ. ಅಮೆಜಾನ್‌ ಹಬ್ಬದ ಕಾರ್ಯಕ್ರಮ ದಿ ಅಮೆಜಾನ್ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ 2022 (Amazon Great Indian Festival Sale) ಆರಂಭಿಸಿದ್ದು ಈ ತಿಂಗಳ ಅಂತ್ಯದ ವರೆಗೆ ನಡೆಯಲಿದೆ. ಇತ್ತ ಫ್ಲಿಪ್‌ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ 2022 (Flipkart Big Billion Days sale) ಸೆಪ್ಟೆಂಬರ್ 30 ರವರೆಗೆ ಆಯೋಜಿಸಲಾಗಿದೆ. ಎರಡೂ ಮೇಳಗಳಲ್ಲಿ ಆಕರ್ಷಕ ರಿಯಾಯಿತಿ ದರಕ್ಕೆ ಪ್ರಾಡಕ್ಟ್​ಗಳು ಸೇಲ್ ಆಗುತ್ತಿದೆ. ಮುಖ್ಯವಾಗಿ ಸ್ಮಾರ್ಟ್​ಫೋನ್​ಗಳಿಗೆ (Smartphone) ಬೇಡಿಕೆ ಹೆಚ್ಚಿದೆ. ಸದ್ಯ ಫ್ಲಿಪ್​ಕಾರ್ಟ್​ ಸೇಲ್​ನಲ್ಲಿ 20,000 ರೂ. ಒಳಗೆ ಖರೀದಿಸಬಹುದಾದಂತ ಆಕರ್ಷಕ ಫೋನ್​ಗಳನ್ನು ನೋಡುವುದಾದರೆ

Xiaomi 11i ಹೈಪರ್‌ಚಾರ್ಜ್ ಸ್ಮಾರ್ಟ್​​ಫೋನ್​ನ 6GB RAM + 128GB ಸ್ಟೋರೇಜ್ ಮಾದರಿಗೆ 24,999 ರೂ. ಗಳ ನಿಗದಿ ಮಾಡಲಾಗಿತ್ತು. ಆದರೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ನೀವು ಇದನ್ನು 19,999 ರೂಪಾಯಿಗಳಿಗೆ ಖರೀದಿಸಬಹುದು. ICICI ಬ್ಯಾಂಕ್ ಮತ್ತು Axis ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇ. 10 ರಷ್ಟು ರಿಯಾಯಿತಿಯೂ ಇದೆ.

Realme 9 Pro+ ಫೋನನ್ನು ನೀವು ಕೇವಲ 22,999 ರೂ. ಗಳ ರಿಯಾಯಿತಿ ಬೆಲೆಯಲ್ಲಿ ಪಡೆದುಕೊಳ್ಳಬಹುದು. ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ರೂ 3,000 ಮತ್ತು ಶೇ. 10 ರಷ್ಟು ರಿಯಾಯಿತಿ ನೀಡಲಾಗಿದೆ. ಇದು 6GB + 128GB ಮಾದರಿಯನ್ನು ಹೊಂದಿದೆ.

ಇದನ್ನೂ ಓದಿ
Image
Vivo Y16: ಬಜೆಟ್ ಪ್ರಿಯರು ಫುಲ್ ಫಿದಾ: ಭಾರತದಲ್ಲಿ ಹೊಸ ವಿವೋ Y16 ಸ್ಮಾರ್ಟ್‌ಫೋನ್‌ ಬಿಡುಗಡೆ
Image
TECNO POVA Neo 5G smartphone: ಮಾರುಕಟ್ಟೆಗೆ ಇಂದು ಅಗ್ಗದ ಬೆಲೆಯಲ್ಲಿ ಲಗ್ಗೆ ಇಡಲಿದೆ ಹೊಸ ಮೊಬೈಲ್; ಬೆಲೆ, ವೈಶಿಷ್ಟ್ಯಗಳು ಹೀಗಿವೆ
Image
Flipkart-Amazon: ಇಂದಿನಿಂದ ಅಮೆಜಾನ್-ಫ್ಲಿಪ್​ಕಾರ್ಟ್​ನಲ್ಲಿ ವರ್ಷದ ಅತಿ ದೊಡ್ಡ ಸೇಲ್: ಗ್ರಾಹಕರಿಗೆ ಆಫರ್​ಗಳ ಸುರಿಮಳೆ
Image
Flipkart’s Big Billion Days sale: ಕೇವಲ 30,000 ರೂ. ಒಳಗೆ ಸಿಗುತ್ತಿದೆ ನಥಿಂಗ್ ಫೋನ್, ಗೂಗಲ್ ಪಿಕ್ಸೆಲ್ ಫೋನ್: ಈ ಆಫರ್ ಮತ್ತೆ ಬರಲ್ಲ

ಇನ್ನು 4GB + 128GB ಮಾದರಿಯೊಂದಿಗೆ ಸ್ಯಾಮ್​ಸಂಗ್ ಗ್ಯಾಲಕ್ಸಿ F23 ಫೋನ್ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ 10,999 ರೂ. ಗೆ ಲಭ್ಯವಿದೆ. Moto G52 ಸಹ ರಿಯಾಯಿತಿಯನ್ನು ಪಡೆದುಕೊಂಡಿದ್ದು 12,999 ರೂ. ಆರಂಭಿಕ ಬೆಲೆಯೊಂದಿಗೆ ಮಾರಾಟವಾಗುತ್ತಿದೆ. ICICI ಬ್ಯಾಂಕ್ ಅಥವಾ Axis ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವವರು 11,699 ರೂ. ಗೆ ಖರೀದಿಸಬಹುದು.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್​ನಲ್ಲಿ ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಅನ್ನು 17,999 ರೂ. ಗಳ ಆರಂಭಿಕ ಬೆಲೆಯೊಂದಿಗೆ ಕಾಣಿಸಿಕೊಂಡಿದೆ. ಆದರೆ, ICICI/Axis ಬ್ಯಾಂಕ್ ಕಾರ್ಡ್‌ಗಳ ಮೂಲಕ ಇದನ್ನು 14,999 ರೂ. ಗೆ ನಿಮ್ಮದಾಗಿಸಬಹುದು.

ಇನ್ನು ಫ್ಲಿಪ್​ಕಾರ್ಟ್​ ಸೇಲ್​ನಲ್ಲಿ ಅಚ್ಚರಿ ಎಂಬಂತೆ ಇತ್ತೀಚೆಗಷ್ಟೆ ಬಿಡುಗಡೆ ಆದ ಗೂಗಲ್ ಪಿಕ್ಸೆಲ್ 6a ಹಾಗೂ ನಥಿಂಗ್ ಫೋನ್ 1 ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್​ ಘೋಷಿಸಲಾಗಿದೆ. ಕೇವಲ 30,000 ರೂ. ಒಳಗೆ ಈ ಸ್ಮಾರ್ಟ್​ಫೋನ್ ಬಿಗ್ ಬಿಲಿಯನ್ ಡೇಸ್ ಸೇಲ್​ನಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ಈ ಬಾರಿಯ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಖರೀದಿದಾರರು ಐಫೋನ್‌ 13 ಮತ್ತು ಐಫೋನ್‌ 12 ಮೇಲೆ ಆಕರ್ಷಕ ಡಿಸ್ಕೌಂಟ್‌ ನಿರೀಕ್ಷಿಸಬಹುದು. ಇದಲ್ಲದೆ ಬ್ಯಾಂಕ್‌ ಆಫರ್‌ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಐಸಿಐಸಿಐ ಬ್ಯಾಂಕ್‌ ಕಾರ್ಡ್‌ ಅಥವಾ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ಗಳ ಮೇಲೆ 10% ಡಿಸ್ಕೌಂಟ್‌ ಪಡೆಯುವ ಸಾಧ್ಯತೆಯಿದೆ. ಇನ್ನು ಬ್ಯಾಂಕ್‌ ಆಫರ್‌ಗಳ ಜೊತೆಗೆ ನೋ ಕಾಸ್ಟ್‌ ಇಎಂಐ ಮತ್ತು ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ ಆಫರ್‌ ಕೂಡ ಪಡೆದುಕೊಳ್ಳಬಹುದಾಗಿದೆ.

Published On - 3:11 pm, Fri, 23 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ