AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart-Amazon: ಇಂದಿನಿಂದ ಅಮೆಜಾನ್-ಫ್ಲಿಪ್​ಕಾರ್ಟ್​ನಲ್ಲಿ ವರ್ಷದ ಅತಿ ದೊಡ್ಡ ಸೇಲ್: ಗ್ರಾಹಕರಿಗೆ ಆಫರ್​ಗಳ ಸುರಿಮಳೆ

ಅಮೆಜಾನ್ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ 2022 (Amazon Great Indian Festival Sale) ಸೆಪ್ಟೆಂಬರ್ 23, 2022 ರಿಂದ ಆರಂಭವಾಗಿದ್ದು, ಪ್ರೈಮ್‌ ಸದಸ್ಯರಿಗೆ ಮೊದಲೇ ಇಂದಿನಿಂದ ಪ್ರವೇಶಾವಕಾಶ ಲಭ್ಯವಾಗಿದೆ. ಫ್ಲಿಪ್‌ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಶುರುವಾಗಿದೆ.

Flipkart-Amazon: ಇಂದಿನಿಂದ ಅಮೆಜಾನ್-ಫ್ಲಿಪ್​ಕಾರ್ಟ್​ನಲ್ಲಿ ವರ್ಷದ ಅತಿ ದೊಡ್ಡ ಸೇಲ್: ಗ್ರಾಹಕರಿಗೆ ಆಫರ್​ಗಳ ಸುರಿಮಳೆ
Amazon and Flipkart
TV9 Web
| Edited By: |

Updated on: Sep 23, 2022 | 6:47 AM

Share

ಇ ಕಾಮರ್ಸ್​ (E- Commerce) ತಾಣ ಬಳಕೆದಾರರಿಗೆ ಇಂದಿನಿಂದ ಹಬ್ಬವೋ ಹಬ್ಬ. ಫ್ಲಿಪ್​ಕಾರ್ಟ್ ಹಾಗೂ ಅಮೆಜಾನ್​ನಲ್ಲಿ ಇದೀಗ ಎರಡು ದೊಡ್ಡ ಮೇಳಗಳು ಶುರುವಾಗಿದೆ. ಅಮೆಜಾನ್‌ ಹಬ್ಬದ ಕಾರ್ಯಕ್ರಮ ದಿ ಅಮೆಜಾನ್ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ 2022 (Amazon Great Indian Festival Sale) ಸೆಪ್ಟೆಂಬರ್ 23, 2022 ರಿಂದ ಆರಂಭವಾಗಿದ್ದು, ಪ್ರೈಮ್‌ ಸದಸ್ಯರಿಗೆ ಮೊದಲೇ ಇಂದಿನಿಂದ ಪ್ರವೇಶಾವಕಾಶ ಲಭ್ಯವಾಗಿದೆ. ಲಕ್ಷಾಂತರ ಸಣ್ಣ ಮಧ್ಯಮ ಬ್ಯುಸಿನೆಸ್ ಇಂದ ವಿಶಾಲ ಶ್ರೇಣಿಯ ಉತ್ಪನ್ನಗಳ ಮೇಲೆ ಹಿಂದೆಂದೂ ಕಾಣದ ಡೀಲ್‌ಗಳನ್ನು ಗ್ರಾಹಕರಿಗೆ ಈ ಬಾರಿ ನೀಡಲಾಗಿದೆ. ಇತ್ತ ಫ್ಲಿಪ್‌ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ 2022 (Flipkart annual Big Billion Days sale 2022) ಆರಂಭವಾದ್ದು, ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ 2000 ಕ್ಕೂ ಹೆಚ್ಚು ಹೊಸ ಉತ್ಪನ್ನ ಬಿಡುಗಡೆಯಾಗಲಿದೆ ಮತ್ತು ಪ್ರಮುಖ ಬ್ರಾಂಡ್‌ಗಳಾದ ಸ್ಯಾಮ್‌ಸಂಗ್‌, ಐಕ್ಯೂ, ಎಂಐ, ರೆಡ್ಮಿ, ಆಪಲ್‌, ಒನ್‌ಪಲ್ಸ್, ಎಲ್‌ಜಿ, ಸೋನಿ, ಕೋಲ್ಗೇಟ್, ಬೋಟ್, ಎಚ್‌ಪಿ, ಲೆನೊವೊ, ಬ್ಲಾಕ್+ಡೆಕರ್, ಹಿಟ್, ಟ್ರಸ್ಟ್‌ ಬಾಸ್ಕೆಟ್ ಹಾಗೂ ಇತರೆ ಬ್ರ್ಯಾಂಡ್‌ಗಳಿಂದ ಆಯ್ಕೆಗಳಿವೆ. ಈ ಸಮಯದಲ್ಲಿ ಗ್ರಾಹಕರು ರೂ. 7,500 ವರೆಗೆ ರಿವಾರ್ಡ್‌ಗಳಲ್ಲಿ ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ. ನಿಮ್ಮ ಫೋನ್ ರಿಚಾರ್ಜ್‌, ಅಮೆಜಾನ್‌ ಪೇ ಬಳಸಿ ಹಣವನ್ನು ಕಳುಹಿಸಬಹುದು, ವಿವಿಧ ಹಬ್ಬದ ಡೀಲ್‌ಗಳನ್ನು ಅನ್‌ಲಾಕ್ ಮಾಡಬಹುದು.

ಅಮೆಜಾನ್ ಸೇಲ್​ನಲ್ಲಿ ಬಿಲ್ ಪಾವತಿಗಳು, ರಿಚಾರ್ಜ್‌ ಮತ್ತು ಇತರೆ ಮೇಲೆ ಮೊದಲ ಅಮೆಜಾನ್ ಪೇ ವಹಿವಾಟು ಮಾಡುವ ಗ್ರಾಹಕರು ರೂ. 50 ಹಿಂದೆ ಅನ್ನೂ ಪಡೆಯುತ್ತಾರೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಗ್ರಾಹಕರು ರೂ. 2500 ಸ್ವಾಗತ ಕೊಡುಗೆಯನ್ನು ಪಡೆಯಬಹುದು ಮತ್ತು ಅಮೆಜಾನ್ ಪೇ ಲೇಟರ್‌ ಸಕ್ರಿಯಗೊಳಿಸುವ ಗ್ರಾಹಕರು ರೂ. 150 ಅನ್ನು ಪಡೆಯಬಹುದು ಹಾಗೂ ರೂ. 60,000 ವರೆಗೆ ಇನ್‌ಸ್ಟಂಟ್ ಕ್ರೆಡಿಟ್‌ ಪಡೆಯಬಹುದು. ಸ್ಯಾಮ್‌ಸಂಗ್‌, ಐಕ್ಯೂ, ರಿಯಲ್‌ಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್‌ ಆಫರ್‌ ಲಭ್ಯವಾಗಲಿದೆ. ಇನ್ಸಟಂಟ್‌ ಡಿಸ್ಕೌಂಟ್‌ ಜೊತೆಗೆ ನೋ ಕಾಸ್ಟ್‌ EMI ಮತ್ತು ಎಕ್ಸ್‌ಚೇಂಜ್‌ ಆಫರ್‌ ಅನ್ನು ಕೂಡ ದೊರೆಯಲಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಹೆಡ್‌ಫೋನ್‌ಗಳ ಮೇಲೆ 75% ಡಿಸ್ಕೌಂಟ್‌ ನೀಡುವುದಾಗ ಅಮೆಜಾನ್‌ ಹೇಳಿಕೊಂಡಿದೆ.

ಫ್ಲಿಪ್​ಕಾರ್ಟ್​ ಸೇಲ್​ನಲ್ಲಿ ಅಚ್ಚರಿ ಎಂಬಂತೆ ಇತ್ತೀಚೆಗಷ್ಟೆ ಬಿಡುಗಡೆ ಆದ ಗೂಗಲ್ ಪಿಕ್ಸೆಲ್ 6a ಹಾಗೂ ನಥಿಂಗ್ ಫೋನ್ 1 ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್​ ಘೋಷಿಸಲಾಗಿದೆ. ಕೇವಲ 30,000 ರೂ. ಒಳಗೆ ಈ ಸ್ಮಾರ್ಟ್​ಫೋನ್ ಬಿಗ್ ಬಿಲಿಯನ್ ಡೇಸ್ ಸೇಲ್​ನಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ಈ ಬಾರಿಯ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಖರೀದಿದಾರರು ಐಫೋನ್‌ 13 ಮತ್ತು ಐಫೋನ್‌ 12 ಮೇಲೆ ಆಕರ್ಷಕ ಡಿಸ್ಕೌಂಟ್‌ ನಿರೀಕ್ಷಿಸಬಹುದು. ಇದಲ್ಲದೆ ಬ್ಯಾಂಕ್‌ ಆಫರ್‌ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಐಸಿಐಸಿಐ ಬ್ಯಾಂಕ್‌ ಕಾರ್ಡ್‌ ಅಥವಾ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ಗಳ ಮೇಲೆ 10% ಡಿಸ್ಕೌಂಟ್‌ ಪಡೆಯುವ ಸಾಧ್ಯತೆಯಿದೆ. ಇನ್ನು ಬ್ಯಾಂಕ್‌ ಆಫರ್‌ಗಳ ಜೊತೆಗೆ ನೋ ಕಾಸ್ಟ್‌ ಇಎಂಐ ಮತ್ತು ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ ಆಫರ್‌ ಕೂಡ ಪಡೆದುಕೊಳ್ಳಬಹುದಾಗಿದೆ.

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ