ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ ಹಾಗೂ ಒನ್ಪ್ಲಸ್ ನಂತಹ ಘಟಾನುಘಟಿ ಬ್ರ್ಯಾಂಡ್ಗಳ ನಡುವೆ ಮೋಟೋರೊಲಾ (Motorola) ಸಂಸ್ಥೆ ತನ್ನದೆಯಾದ ವಿಶೇಷ ಸ್ಥಾನವನ್ನು ಸಂಪಾದಿಸಿದೆ. ಭಾರತದಲ್ಲಿ ಕೂಡ ಮೋಟೋ ಕಂಪನಿಯ ಫೋನ್ಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ಬಜೆಟ್ ಬೆಲೆಯಿಂದ ಹಿಡಿದು ಹೈ-ರೇಂಜ್ ಮಾದರಿಯ ವರೆಗೆ ಆಕರ್ಷಕ ಮೊಬೈಲ್ಗಳನ್ನು ಅನಾವರಣ ಮಾಡುವ ಮೋಟೋ ಇದೀಗ ದೇಶದಲ್ಲಿ ಮೋಟೋರೊಲಾ ಎಡ್ಜ್ 40 (Motorola Edge 40) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ತಯಾರಿಸಿ ನಡೆಸಿದೆ. ಇತ್ತೀಚೆಗಷ್ಟೆ ಈ ಫೋನ್ ವಿದೇಶದಲ್ಲಿ ಅನಾವರಣಗೊಂಡಿತ್ತು. ಭರ್ಜರಿ ಫೀಚರ್ಗಳ ಜೊತೆಗೆ ಸಾಕಷ್ಟು ಬಲಿಷ್ಠವಾಗಿರುವ ಈ ಫೋನ್ನಲ್ಲಿ ಡೈಮೆನ್ಸಿಟಿ 8020 SoC ಪ್ರೊಸೆಸರ್ ಅಳವಡಿಸಲಾಗಿದೆ. ಈ ಫೋನಿನ ವಿಶೇಷತೆ, ಬೆಲೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.
ಮೋಟೋರೊಲಾ ಎಡ್ಜ್ 40 ಸ್ಮಾರ್ಟ್‌ಫೋನ್ ಇದೇ ತಿಂಗಳಲ್ಲಿ ಭಾರತಕ್ಕೆ ಕಾಲಿಡಲಿದೆಯಂತೆ. ಮೊನ್ನೆ ಯುರೋಪ್‌ನಲ್ಲಿ ಮಾತ್ರ ರಿಲೀಸ್ ಆದ ಈ ಫೋನ್ ಬೆಲೆ EUR 599.99, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 54,000 ರೂ. ಇರಬಹುದು. ಇದು 8GB RAM + 256GB ಸ್ಟೋರೇಜ್ ಆಯ್ಕೆಯಿಂದ ಕೂಡಿದೆ. ಎಕ್ಲಿಪ್ಸ್ ಬ್ಲ್ಯಾಕ್, ಲೂನಾರ್ ಬ್ಲೂ ಮತ್ತು ನೆಬ್ಯುಲಾ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ.
AGI: ‘ಹತ್ತಿಪ್ಪತ್ತು ವರ್ಷಗಳಲ್ಲಿ ಸಾರ್ವತ್ರಿಕ ಕೃತಕ ಬುದ್ಧಿಮತ್ತೆಯ ಕನಸು ಸಾಕಾರವಾದೀತು’
ಫೀಚರ್ಸ್ ಏನಿದೆ?:
ಮೋಟೋರೊಲಾ ಎಡ್ಜ್ 40 ಸ್ಮಾರ್ಟ್‌ಫೋನ್ 2,400 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.55 ಇಂಚಿನ ಫುಲ್ ಹೆಚ್‌ಡಿ+ ಫೋಲ್ಡ್ ಸ್ಕ್ರೀನ್ ಅನ್ನು ಹೊಂದಿದೆ. 144Hz ರಿಫ್ರೆಶ್ ರೇಟ್, 360 Hz ಟಚ್ ಸ್ಯಾಂಪ್ಲಿಂಗ್ ರೇಟ್ ನೀಡಲಾಗಿದೆ. ಬಲಿಷ್ಠವಾದ ಮಿಡಿಯಾ ಟೆಕ್ ಡೈಮೆನ್ಸಿಟಿ 8020 SoC ಪ್ರೊಸೆಸರ್ ವೇಗವನ್ನು ಹೊಂದಿದ್ದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಿಂದ ಕೂಡಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಟೆಕ್ನಾಲಜಿಯನ್ನು ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾವೈಡ್ ಮ್ಯಾಕ್ರೋ ವಿಷನ್ ಅನ್ನು ಹೊಂದಿದೆ. ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಮೋಟೋರೊಲಾ ಎಡ್ಜ್ 40 ಸ್ಮಾರ್ಟ್‌ಫೋನ್ 4,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ತಕ್ಕಂತೆ 68W ಟರ್ಬೋಪವರ್ ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದುಕೊಂಡಿದೆ. ಉಳಿದಂತೆ 4G LTE ಹಾಟ್‌ಸ್ಪಾಟ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಬ್ಲೂಟೂತ್ 5.2, ಜಿಪಿಎಸ್, ಎನ್‌ಎಫ್‌ಸಿ ಸೇರಿದಂತೆ ಇತ್ತೀಚಿನ ಎಲ್ಲ ಆಯ್ಕೆಗಳನ್ನು ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ