Kannada News Technology Motorola has finally launched the much-awaited Motorola Edge 30 in India check price and specs
Moto Edge 30: ಭಾರತದಲ್ಲಿ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಮೋಟೋ ಎಡ್ಜ್ 30 ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ?
ಮೋಟೋ ಕಂಪನಿ ಇದೀಗ ಭಾರತದಲ್ಲಿ ಹೊಸ ಮೋಟೋರೊಲಾ ಎಡ್ಜ್ 30 (Motorola Edge 30) ಸ್ಮಾರ್ಟ್‌ಫೋನ್ ಅನಾವರಣ ಮಾಡಿದೆ. ಈ ಫೋನ್ ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್ ಬಲವನ್ನು ಪಡೆದಿದೆ.
ವಿಶ್ವದಲ್ಲಿ ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ ಹಾಗೂ ಒನ್ಪ್ಲಸ್ ನಂತಹ ಘಟಾನುಘಟಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ಗಳು ತಲೆಯೆತ್ತಿ ಮೆರೆಯುತ್ತಿರುವಾಗ ಮೋಟೋರೊಲಾ (Motorola) ಸಂಸ್ಥೆ ತನ್ನದೆಯಾದ ವಿಶೇಷ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸು ಸಾಧಿಸುತ್ತಿದೆ. ಭಾರತದಲ್ಲಿ ಕೂಡ ಮೋಟೋಕಂಪನಿಯ ಫೋನ್ಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ತಿಂಗಳಿಗೆ ಒಂದಂರಂತೆ ತನ್ನ ಸ್ಮಾರ್ಟ್‌ಫೋನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡುತ್ತದೆ. ಏಪ್ರಿಲ್ನಲ್ಲಿ ಬಜೆಟ್ ಬೆಲೆಗೆ ಮೋಟೋ G52 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದ ಕಂಪನಿ ಇದೀಗ ಭಾರತದಲ್ಲಿ ಹೊಸ ಮೋಟೋರೊಲಾ ಎಡ್ಜ್ 30 (Motorola Edge 30) ಸ್ಮಾರ್ಟ್‌ಫೋನ್ ಅನಾವರಣ ಮಾಡಿದೆ. ಈ ಫೋನ್ ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್ ಬಲವನ್ನು ಪಡೆದಿದೆ. ಅಲ್ಲದೆ ಸಿಸ್ಟಮ್-ಆನ್-ಚಿಪ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾದ ಚೊಚ್ಚಲ ಸ್ಮಾರ್ಟ್‌ಫೋನ್ ಇದಾಗಿದೆ. ಇದರ ಜೊತೆಗೆ ಇನ್ನೂ ಅನೇಕ ವಿಶೇಷತೆಗಳಿಂದ ಈ ಫೋನ್ ಕೂಡಿದೆ. ಹಾಗಾದ್ರೆ ಇದರ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.
ಮೋಟೋರೊಲಾ ಎಡ್ಜ್ 30 ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೆಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 6GB + 128GB ಸ್ಟೋರೇಜ್ ಮಾದರಿಗೆ 27,999 ರೂ. ನಿಗದಿ ಮಾಡಲಾಗಿದೆ. ಹಾಗೆಯೆ 8GB + 128GB ರೂಪಾಂತರದ ಬೆಲೆ 29,999 ರೂ.ಆಗಿದೆ. ಈ ಸ್ಮಾರ್ಟ್‌ಫೋನ್ ಅರೋರಾ ಗ್ರೀನ್ ಮತ್ತು ಮೆಟಿಯರ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಮಾರಾಟವಾಗಲಿದೆ.
ಈ ಫೋನ್ ಅನ್ನು ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಇತರ ಪ್ರಮುಖ ಚಿಲ್ಲರೆ ಅಂಗಡಿಗಳ ಮೂಲಕ ಮೇ 19 ರಿಂದ ಖರೀದಿಸಬಹುದು. ಲಾಂಚ್ ಆಫರ್‌ನಲ್ಲಿ ಫ್ಲಿಪ್‌ಕಾರ್ಟ್ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 2,000 ರೂಪಾಯಿಗಳ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದು.
ಮೋಟೋ ಎಡ್ಜ್ 30 ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7-ಇಂಚಿನ FHD+ ಪೋಲ್ಡ್ 10-ಬಿಟ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. 360Hz ಟಚ್ ಸ್ಯಾಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ.
ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಹಾಗೂ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದಲ್ಲದೆ ಈ ಫೋನ್ ಗೇಮಿಂಗ್‌ಗಾಗಿ, ಫೋನ್ ಮೋಟೋ ಗೇಮ್ ಟೈಮ್, ಕ್ವಾಲ್ಕಾಮ್ ಎಲೈಟ್ ಗೇಮಿಂಗ್ ಮತ್ತು ಕ್ವಾಲ್ಕಾಮ್ ಗೇಮ್ ಕ್ವಿಕ್ ಟಚ್ ಅನ್ನು ಹೊಂದಿರುವುದು ವಿಶೇಷ.
ಇದನ್ನೂ ಓದಿ
Google: ಥರ್ಡ್ ಪಾರ್ಟಿ ಆ್ಯಪ್ ಬ್ಯಾನ್ ಆದರೂ ಆಂಡ್ರಾಯ್ಡ್ ಫೋನ್ನಲ್ಲಿ ಕಾಲ್ ರೆಕಾರ್ಡ್ ಮಾಡಲು ಇಲ್ಲಿದೆ ಟ್ರಿಕ್
Google Pixel 6a: ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ ಬಿಡುಗಡೆ: ಫೀಚರ್ಸ್, ಬೆಲೆ ಕುರಿತ ಮಾಹಿತಿ ಇಲ್ಲಿದೆ
National Technology Day 2022: ಇದನ್ನು ಏಕೆ ಆಚರಿಸಲಾಗುತ್ತದೆ? ಅದರ ಮಹತ್ವ ಮತ್ತು ಈ ವರ್ಷದ ಥೀಮ್: ಇಲ್ಲಿದೆ ಮಾಹಿತಿ
Google: ಇಂದಿನಿಂದ ಗೂಗಲ್ ಹೊಸ ನಿಯಮ ಜಾರಿ: ಇನ್ಮುಂದೆ ಕಾರ್ಯನಿರ್ವಹಿಸಲ್ಲ ಈ ಆ್ಯಪ್ಗಳು
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ.
ಇನ್ನು ರಿಯರ್ ಕ್ಯಾಮೆರಾ ಸೆಟಪ್ ಆಪ್ಟಿಕಲ್ ಇಮೇಜ್ ಸ್ಟೆಬಲೈಸೇಶನ್ ಟೆಕ್ನಾಲಜಿಯನ್ನು ಹೊಂದಿದೆ. ಇದಲ್ಲದೆ ಕ್ವಾಡ್-ಪಿಕ್ಸೆಲ್ ತಂತ್ರಜ್ಞಾನದೊಂದಿಗೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಮೋಟೋ ಎಡ್ಜ್ 30 ಸ್ಮಾರ್ಟ್‌ಫೋನ್ 4,020mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಟರ್ಬೋಪವರ್ ಚಾರ್ಜಿಂಗ್ ತಂತ್ರಜ್ಞಾನ ಬೆಂಬಲಿಸಲಿದೆ.
ಈ ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡಾಲ್ಬಿ ಅಟ್ಮಾಸ್‌ನೊಂದಿಗೆ ಸ್ಟಿರಿಯೊ ಸ್ಪೀಕರ್‌ಗಳು, 13 5G ಬ್ಯಾಂಡ್‌ಗಳಿಗೆ ಬೆಂಬಲ ಮತ್ತು ವೈಫೈ 6E ಸೇರಿದೆ. ಕಂಪನಿ ಈ ಫೋನಿನ ಬಗ್ಗೆ ಮತ್ತೊಂದು ಮಾಹಿತಿ ಹೇಳಿದ್ದು ಅದೇನೆಂದರೆ ಇದು ಭಾರತದ ಹಗುರವಾದ 5G ಸ್ಮಾರ್ಟ್‌ಫೋನ್ ಆಗಿದೆಯಂತೆ.