ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಶವೋಮಿ (Xiaomi), ಸ್ಯಾಮ್ಸಂಗ್ (Samsung), ರಿಯಲ್ ಮಿ (Realme) ನಡುವೆ ತನ್ನದೇ ಆದ ವಿಶೇಷ ಸ್ಥಾನ ಸ್ಥಾಪಿಸಿರುವ ಮೋಟೋರೊಲಾ (Motorola) ಕಂಪನಿ ಇದೀಗ ತನ್ನ ಹೊಸ ಮೋಟೋರೊಲಾ ಎಡ್ಜ್ 30 ಅಲ್ಟ್ರಾ (Motorola Edge 30 Ultra) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದೆ. ಇದು ಜಾಗತಿಕ ರೂಪಾಂತರಕ್ಕಾಗಿ ಎಡ್ಜ್ 30 ಅಲ್ಟ್ರಾ ಮಾನಿಕರ್ ಅನ್ನು ಬಳಸಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ, ಬಿಡುಗಡೆಗೂ ಮುನ್ನವೇ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್ಫೋನಿನ ಮಾಹಿತಿ ಆನ್ಲೈನ್ನಲ್ಲಿ ಸೋರಿಕೆಯಾಗಿದೆ.
ಹೌದು, ಮೋಟೋ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್ಫೊನಿನ ಬೆಲೆ, ಕ್ಯಾಮೆರಾ, ಪ್ರೊಸೆಸರ್ ಸೇರಿದಂತೆ ಹೆಚ್ಚಿನ ಮಾಹಿತಿಗಳು ರಿಲೀಸ್ಗೂ ಮುನ್ನವೇ ಲೀಕ್ ಆಗಿದೆ. ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಎಡ್ಜ್ 30 ಅಲ್ಟ್ರಾ ಸ್ಮಾರ್ಟ್‌ಫೋನ್ 6.6-ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇ ಪಂಚ್ ಹೋಲ್ ಡಿಸ್‌ಪ್ಲೇ ನಾಚ್ ವಿನ್ಯಾಸದಿಂದ ಕೂಡಿರಲಿದೆ ಎನ್ನಲಾಗಿದೆ.
ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 898 ಪ್ರೊಸೆಸರ್ ಬಲವನ್ನು ಪಡದಿರುವ ಸಾಧ್ಯತೆ ಇದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ. ಮೆಮೊರಿ ಕಾರ್ಡ್ ಬೆಂಬಲದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ವಿಶೇಷವಾಗಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 50MP ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2MP ಡೆಪ್ತ್ ಸೆನ್ಸಾರ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ 60 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಬೃಹತ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮರಾ OIS ಬೆಂಬಲವನ್ನು ಪಡೆಯುವ ನಿರೀಕ್ಷೆಯಿದೆ. ಅದರೊಂದಿಗೆ, ಸೆಲ್ಫಿ ಕ್ಯಾಮೆರಾ 4K ವಿಡಿಯೋ ರೆಕಾರ್ಡಿಂಗ್‌ಗೆ ಅವಕಾಶ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಬಲಿಷ್ಠ ಸಾಮರ್ಥ್ಯದ 5000mAh ಬ್ಯಾಟರಿಯನ್ನು ಹೊಂದಿರಲಿದೆ. ಇದು 68W ಚಾರ್ಜಿಂಗ್‌ಗೆ ಬೆಂಬಲಿಸುವ ಸಾದ್ಯತೆ ಇದೆ. ಅಲ್ಲದೆ 68W ಅಡಾಪ್ಟರ್ ಮೂಲಕ ಈ ಸ್ಮಾರ್ಟ್‌ಫೋನ್ ಅನ್ನು ಸುಮಾರು 35 ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಲು ಸಾಧ್ಯವಾಗಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಮೋಟೋ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್‌ಫೋನ್ ಜಾಗತಿಕವಾಗಿ ಜನವರಿ 2022 ರಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ಇದರ ಬೆಲೆ ಭಾರತದಲ್ಲಿ ಸುಮಾರು 60,000 ರೂ. ಇರಬಹುದೆಂದು ಹೇಳಲಾಗಿದೆ.
Best Smartphones: 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಬೊಂಬಾಟ್ ಸ್ಮಾರ್ಟ್ಫೋನ್ಗಳು ಇಲ್ಲಿವೆ ನೋಡಿ
(Motorola is all set to launch a new flagship device Motorola Edge 30 Ultra in the market)