ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲೀಗ ಮಡಚುವ ಫೋನ್ಗಳ (Foldable Phone) ಹಾವಳಿ ಶುರುವಾಗಿದೆ. ಸ್ಯಾಮ್ಸಂಗ್ ಬಳಿಕ ಶವೋಮಿ, ಮೋಟೋರೊಲ ಕಂಪನಿ ಕೂಡ ಫೋಲ್ಡಬಲ್ ಫೋನ್ಗಳನ್ನು ಬಿಡುಗಡೆ ಮಾಡಿದೆ. ಎರಡು ದಿನಗಳ ಹಿಂದೆಯಷ್ಟೆ ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಸ್ಮಾರ್ಟ್ಫೋನನ್ನು ಅನಾವರಣ ಮಾಡಿತ್ತು. ಇದೀಗ ಒಂದೇ ದಿನ ಶವೋಮಿ ಹಾಗೂ ಮೋಟೋ ತನ್ನ ಮಡಚುವ ಫೋನನ್ನು ಮಾರುಕಟ್ಟೆಯಲ್ಲಿ ರಿಲೀಸ್ ಮಾಡಿದೆ. ಇದು ಮೋಟೋ ರೇಜರ್ 2022 ಫೋಲ್ಡಬಲ್ (Moto Razr 2022) ಹಾಗೂ ಶವೋಮಿ ಮಿಕ್ಸ್ ಫೋಲ್ಡ್ 2 (Xiaomi Mix Fold 2) ಆಗಿದೆ. ಎರಡೂ ಫೋನ್ ಕೂಡ ಬಲಿಷ್ಠವಾಗಿದ್ದು, ಆಕರ್ಷಕ ಕ್ಯಾಮೆರಾ, ಅತ್ಯುತ್ತಮ ಡಿಸ್ ಪ್ಲೇ, ಬ್ಯಾಟರಿ, ಪ್ರೊಸೆಸರ್ನಿಂದ ಆವೃತ್ತವಾಗಿದೆ. ಹಾಗಿದ್ದರೆ ಈ ಫೋನುಗಳ ಬೆಲೆ, ವಿಶೇಷತೆ ಕುರಿತ ಎಲ್ಲ ಮಾಹಿತಿ ತಿಳಿದುಕೊಳ್ಳೋಣ.
ಮೋಟೋ ರೇಜರ್ 2022 ಫೋಲ್ಡಬಲ್:
ಮೊಟೊ ರೇಜರ್ 2022 ಫೋಲ್ಡಬಲ್ ಸ್ಮಾರ್ಟ್‌ಫೋನ್ 6.7 ಇಂಚಿನ ಮಡಿಸಬಹುದಾದ OLED ಹೋಲ್–ಪಂಚ್ ಮುಖ್ಯ ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಮೇಲ್ಭಾಗದ ಮಧ್ಯದಲ್ಲಿ ಕಟೌಟ್ ಅನ್ನು ಹೊಂದಿದೆ. ಇದು 144Hz ರಿಫ್ರೆಶ್ ದರದೊಂದಿಗೆ ಬರುತ್ತದೆ. 2.7 ಇಂಚಿನ OLED ಔಟರ್ ಕವರ್ ಡಿಸ್‌ಪ್ಲೇ ಕೂಡ ನೀಡಲಾಗಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8+ ಜೆನ್ 1 SoC ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಈ ಫೋನ್ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಸಹ ಪಡೆದಿದೆ.
ಈ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ರಚನೆಯೊಂದಿಗೆ ಬಿಡುಗಡೆ ಆಗಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್, ಸೆಕೆಂಡರಿ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಹಾಗೆಯೇ 32 ಮೆಗಾ ಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ. 3,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್‌ಗೆ ಬೆಂಬಲಿಸಲಿದೆ. 5ಜಿ ಬೆಂಬಲ ಪಡೆದುಕೊಂಡಿರುವ ಈ ಫೋನಿನ ಆರಂಭಿಕ ಬೆಲೆ CNY 5,999, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 70,750ರೂ. ಇರಬಹುದು.
ಶವೋಮಿ ಮಿಕ್ಸ್ ಫೋಲ್ಡ್ 2:
ಶವೋಮಿ ಮಿಕ್ಸ್ ಫೋಲ್ಡ್ 2 ಸ್ಮಾರ್ಟ್‌ಫೋನ್ 8.02-ಇಂಚಿನ LTPO 2.0 ಫೋಲ್ಡಿಂಗ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಒಳಗೊಂಡಿದ್ದರೆ 6.56-ಇಂಚಿನ E5 ಅಮೋಲೆಡ್ ಔಟರ್ ಡಿಸ್‌ಪ್ಲೇಯನ್ನು ಕೂಡ ಹೊಂದಿದೆ. ಆಕ್ಟಾ–ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12-ಆಧಾರಿತ MIUI ಫೋಲ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ಚಾರ್ಜಿಂಗ್ ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್ ಬೇಸ್ ಮಾಡೆಲ್ 12GB + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ CNY 8,999, ಭಾರತದಲ್ಲಿ ಅಂದಾಜು 1,06,200ರೂ. ಇರಬಹುದು. ಈ ಎರಡೂ ಫೋನ್ ಸದ್ಯಕ್ಕೆ ಚೀನಾದಲ್ಲಿ ಅನಾವರಣಗೊಂಡಿದೆ. ಇದು ಕೆಲವು ತಿಂಗಳ ಬಳಿಕ ಭಾರತದ ಮಾರುಕಟ್ಟೆಗೂ ಕಾಲಿಡಲಿದೆ.