Netflix Password Sharing: ಸ್ನೇಹಿತರ ಪಾಸ್​​ವರ್ಡ್ ಬಳಸಿ ನೆಟ್​ಫ್ಲಿಕ್ಸ್ ನೋಡುವುದು ಇನ್ನು ಸುಲಭವಿಲ್ಲ

|

Updated on: Jan 24, 2023 | 12:24 PM

ಹೆಚ್ಚುವರಿಯಾಗಿ ಪಾವತಿ ಮಾಡಿ ಇತರರೊಂದಿಗೆ ಪಾಸ್​ವರ್ಡ್ ಹಂಚಿಕೊಳ್ಳುವ ಪೇಯ್ಡ್ ಶೇರಿಂಗ್ ಆಯ್ಕೆಯನ್ನು ನೀಡಲಾಗುತ್ತದೆ ಎಂದೂ ನೆಟ್​​ಫ್ಲಿಕ್ಸ್ ತಿಳಿಸಿದೆ.

Netflix Password Sharing: ಸ್ನೇಹಿತರ ಪಾಸ್​​ವರ್ಡ್ ಬಳಸಿ ನೆಟ್​ಫ್ಲಿಕ್ಸ್ ನೋಡುವುದು ಇನ್ನು ಸುಲಭವಿಲ್ಲ
ನೆಟ್​ಫ್ಲಿಕ್ಸ್ (ಸಾಂದರ್ಭಿಕ ಚಿತ್ರ)
Follow us on

ಪಾಸ್​ವರ್ಡ್ ಶೇರಿಂಗ್ (Password Sharing) ಅಥವಾ ಒಬ್ಬರ ಪಾಸ್​​ವರ್ಡ್ ಬಳಸಿಕೊಂಡು ಇನ್ನೊಬ್ಬರು ನೆಟ್​​ಫ್ಲಿಕ್ಸ್ (Netflix) ನೋಡುವುದಕ್ಕೆ ಕಡಿವಾಣ ಬೀಳಲಿದೆ. ಪಾಸ್​ವರ್ಡ್ ಹಂಚಿಕೆಯನ್ನು ಈ ವರ್ಷದಿಂದ ಸ್ಥಗಿತಗೊಳಿಸುವುದಾಗಿ ಆನ್​ಲೈನ್ ಸ್ಟ್ರೀಮಿಂಗ್ ತಾಣ ನೆಟ್​​ಫ್ಲಿಕ್ಸ್ ತಿಳಿಸಿದೆ. ಇದರಿಂದಾಗಿ, ಈಗ ಸ್ನೇಹಿತರ ಪಾಸ್​ವರ್ಡ್ ಬಳಸಿಕೊಂಡು ನೆಟ್​ಫ್ಲಿಕ್ಸ್ ನೋಡುವವರು ಮುಂದೆ ಒಟಿಟಿ ವೇದಿಕೆಯ ಮೂಲಕ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಹಣ ಪಾವತಿ ಮಾಡಬೇಕಾಗಲಿದೆ. ಈ ವಿಚಾರವಾಗಿ ‘ಬ್ಲೂಮ್​ಬರ್ಗ್​’ಗೆ ನೀಡಿರುವ ಸಂದರ್ಶನದಲ್ಲಿ ನೆಟ್​ಫ್ಲಿಕ್ಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ (ಸಿಇಒ) ಟೆಡ್ ಸರಂಡೋಸ್ ಮತ್ತು ಗ್ರೆಗ್ ಪೀಟರ್ಸ್ ತಿಳಿಸಿದ್ದಾರೆ. ಪಾಸ್​ವರ್ಡ್ ಶೇರಿಂಗ್ ಅನ್ನು ಹಂತಹಂತವಾಗಿ ಸ್ಥಗಿತಗೊಳಿಸಿದ ಹೊರತಾಗ್ಯೂ ಗ್ರಾಹಕರ ಅನುಭವದ ವಿಚಾರವಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಿಇಒgಳು ಹೇಳಿದ್ದಾರೆ. ಎಲ್ಲ ಗ್ರಾಹಕರ ಮನಸ್ಸು ಗೆಲ್ಲುವುದೇ ನಮ್ಮ ಗುರಿ ಎಂದೂ ಅವರು ಹೇಳಿದ್ದಾರೆ.

ಭಾರತದಂಥ ದೇಶಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಸಬ್​​ಸ್ಕ್ರೈಬರ್ ಸಂಖ್ಯೆಯನ್ನು 15ರಿಂದ 20 ದಶಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ನೆಟ್​ಫ್ಲಿಕ್ಸ್ ಹೊಂದಿದೆ ಎಂದೂ ‘ಬ್ಲೂಮ್​ಬರ್ಗ್’ ವರದಿ ತಿಳಿಸಿದೆ. 2023ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಪಾವತಿಸಿದ ಹಂಚಿಕೆ ಅಥವಾ ಪೇಯ್ಡ್ ಶೇರಿಂಗ್ ವಿಧಾನವನ್ನು ಜಾರಿಗೆ ತರುವ ಬಗ್ಗೆ ನಿರೀಕ್ಷೆ ಇದೆ. ಇದರಿಂದ 2023ರ ಎರಡನೇ ತ್ರೈಮಾಸಿಕದಲ್ಲಿ ಜಾಹೀರಾತುಗಳು ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ನೆಟ್​ಫ್ಲಿಕ್ಸ್ ಹೇಳಿದೆ.

ಇದನ್ನೂ ಓದಿ: OnePlus Nord CE 3 5G: ಬಹುನಿರೀಕ್ಷಿತ ಒನ್‌ಪ್ಲಸ್‌ ನಾರ್ಡ್‌ CE 3 5G ಫೋನ್ ಫೀಚರ್ಸ್ ಲೀಕ್: ಇದನ್ನು ಖರೀದಿಸಲು ಕ್ಯೂ ಗ್ಯಾರಂಟಿ

ಈ ನಡೆಯಿಂದ ಕೆಲವೊಂದು ಖಾತೆಗಳು ರದ್ದಾಗುವ ಸಾಧ್ಯತೆಯ ಬಗ್ಗೆ ಲ್ಯಾಟಿನ್ ಅಮೆರಿಕದಲ್ಲಿ ನೆಟ್​ಫ್ಲಿಕ್ಸ್​​ ಅನುಭವಕ್ಕೆ ಬಂದಿದೆ. ಅಲ್ಪಾವಧಿಯ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು ಎಂಬುದೂ ತಿಳಿದಿದೆ. ಆದರೆ, ಒಂದು ಬಾರಿ ಚಂದಾದಾರಿಕೆ ಪಡೆದ ಕುಟುಂಬಗಳಿಗೆ ಹೆಚ್ಚುವರಿ ಖಾತೆಗಳ ಸೇರ್ಪಡೆಗೆ ಅವಕಾಶ ದೊರೆತ ಬಳಿಕ ಕಂಪನಿಯ ಒಟ್ಟಾರೆ ಆದಾಯದಲ್ಲಿ ಉತ್ತಮ ಚೇತರಿಕೆ ಕಾಣಬಹುದು ಎಂದು ಕಂಪನಿ ಹೇಳಿದೆ.

ಪೇಯ್ಡ್ ಶೇರಿಂಗ್​ಗೆ ಇದೆ ಅವಕಾಶ

ಹೆಚ್ಚುವರಿಯಾಗಿ ಪಾವತಿ ಮಾಡಿ ಇತರರೊಂದಿಗೆ ಪಾಸ್​ವರ್ಡ್ ಹಂಚಿಕೊಳ್ಳುವ ಪೇಯ್ಡ್ ಶೇರಿಂಗ್ ಆಯ್ಕೆಯನ್ನು ನೀಡಲಾಗುತ್ತದೆ ಎಂದೂ ಕಂಪನಿ ತಿಳಿಸಿದೆ. ಖಾತೆಗಳನ್ನು ಒಂದು ಮನೆಗೆ ಸೀಮಿತಗೊಳಿಸಿ ಮತ್ತು ಬಳಕೆಯ ಅನುಭವವನ್ನು ಇನ್ನಷ್ಟು ಸುಧಾರಿಸುವ ಹೊಸ ಫೀಚರ್​ಗಳನ್ನು ನೀಡಲಾಗಿದೆ. ಯಾವ ಸಾಧನಗಳಲ್ಲಿ ಖಾತೆಗಳನ್ನು ಬಳಸಿಕೊಳ್ಳಬಹುದು ಎಂಬುದನ್ನು ಪರಿಶೀಲಿಸುವ ಆಯ್ಕೆಯ ಜತೆಗೆ, ಹೆಚ್ಚುವರಿಯಾಗಿ ಪಾವತಿ ಮಾಡಿ ಇತರರೊಂದಿಗೆ ಹಂಚಿಕೊಳ್ಳುವ ಆಯ್ಕೆಯನ್ನೂ ನೀಡಲಾಗುತ್ತಿದೆ ಎಂದು ನೆಟ್​ಫ್ಲಿಕ್ಸ್ ಹೇಳಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:22 pm, Tue, 24 January 23