ಬೇಸಿಕ್ ಫೀಚರ್ ಫೋನ್ಗಳ ಮೂಲಕ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ನೋಕಿಯಾ, ಸ್ಮಾರ್ಟ್ಫೋನ್ ಯುಗದಲ್ಲೂ ಹಿಂದೆ ಬಿದ್ದಿಲ್ಲ. ಹಲವು ಮಾದರಿಗಳ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಮೂಲಕ, ಪ್ರತಿಸ್ಪರ್ಧಿ ಬ್ರ್ಯಾಂಡ್ಗಳಿಗೆ ಸ್ಪರ್ಧೆ ಒಡ್ಡುತ್ತಿದೆ. ಹೆಚ್ಚಿನ ಜನರ ಆಯ್ಕೆಯಾಗಿರುವ ಬಜೆಟ್ ದರದ ಸ್ಮಾರ್ಟ್ಫೋನ್ ವಿಭಾಗದಲ್ಲಿ ನೋಕಿಯಾ ಹೊಸ ಮಾದರಿಯನ್ನು ಪರಿಚಯಿಸಿದೆ. ಕಡಿಮೆ ಬಜೆಟ್ಗೆ ಹೆಚ್ಚಿನ ಫೀಚರ್ ನೀಡುವ ಮೂಲಕ ಬಳಕೆದಾರರನ್ನು ಸೆಳೆಯುವುದು ನೋಕಿಯಾ ಉದ್ದೇಶವಾಗಿದೆ. ನೋಕಿಯಾ ಹೊಸ ಸಿ 12 ಸ್ಮಾರ್ಟ್ಫೋನ್ (NOKIA C12) ಬಿಡುಗಡೆಯಾಗಿದ್ದು, ಹೆಚ್ಚಿನ ವಿವರಗಳು ಇಲ್ಲಿವೆ.
ನೂತನ ನೋಕಿಯಾ C12 ಸ್ಮಾರ್ಟ್ಫೋನ್, 6.3 ಇಂಚಿನ HD+ ಡಿಸ್ಪ್ಲೇ ಹೊಂದಿದೆ. ಎಚ್ಎಂಡಿ ಗ್ಲೋಬಲ್ (HMD Global) ಸಂಸ್ಥೆ ಒಡೆತನಕ್ಕೆ ಬಂದ ಮೇಲೆ, ನೋಕಿಯಾ ವಿವಿಧ ವಿಭಾಗಗಳಲ್ಲಿ ಹಲವು ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದರಲ್ಲೂ ಬಜೆಟ್ ದರಕ್ಕೆ ಆಕರ್ಷಕ ಫೀಚರ್ನ ಫೋನ್ ಒದಗಿಸುವುದರಲ್ಲಿ ನೋಕಿಯಾ ಮುಂದಿದೆ. ಹೊಸ ನೋಕಿಯಾ C12 ಸ್ಮಾರ್ಟ್ಫೋನ್ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಇದ್ದರೆ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
3000mAh ಬ್ಯಾಟರಿ ಮತ್ತು 5W ಚಾರ್ಜಿಂಗ್ ಸಾಮರ್ಥ್ಯದ ನೋಕಿಯಾ C12 ಸ್ಮಾರ್ಟ್ಫೋನ್, 2 GB RAM ಮತ್ತು 64 GB ಸ್ಟೋರೇಜ್ ಹೊಂದಿದೆ. ಜತೆಗೆ, Unisoc 9863A1 ಪ್ರೊಸೆಸರ್ ಬೆಂಬಲದೊಂದಿಗೆ ನೋಕಿಯಾ C12 ಮಾರುಕಟ್ಟೆ ಪ್ರವೇಶಿಸಿದೆ. Android 12 ಗೊ ಆವೃತ್ತಿ ಮೂಲಕ ನೂತನ ನೋಕಿಯಾ ಫೋನ್ ಕಾರ್ಯನಿರ್ವಹಿಸುತ್ತದೆ.
ಹೊಸದಾಗಿ ಬಿಡುಗಡೆಯಾದ ನೋಕಿಯಾ ಸಿ12 ಸ್ಮಾರ್ಟ್ಫೋನ್, ಡಾರ್ಕ್ ಕ್ಯಾನ್, ಮಿಂಟ್ ಲೈಮ್ ಮತ್ತು ಚಾರ್ಕೋಲ್ ಬಣ್ಣಗಳಲ್ಲಿ ಲಭ್ಯವಿದೆ. ಇಯರ್ಫೋನ್, ಚಾರ್ಜರ್ ಸಹಿತ ನೂತನ ನೋಕಿಯಾ C12 ಸ್ಮಾರ್ಟ್ಫೋನ್ ದೊರೆಯಲಿದೆ. ಅಮೆಜಾನ್ನಲ್ಲಿ ಮಾರ್ಚ್ 17ರಿಂದ ಲಭ್ಯವಿದ್ದು, ₹5,999 ದರ ನಿಗದಿಪಡಿಸಲಾಗಿದೆ.