ನೋಕಿಯಾ (Nokia) ಕಂಪನಿಯ ಸ್ಮಾರ್ಟ್ಫೋನ್ಗಳು ದೊಡ್ಟ ಮಟ್ಟದಲ್ಲಿ ಯಶಸ್ಸು ಸಾಧಿಸುತ್ತಿಲ್ಲ. ಶವೋಮಿ (Xiaomi), ಸ್ಯಾಮ್ಸಂಗ್ (Samsung), ರಿಯಲ್ ಮಿ (Realme) ಬ್ರ್ಯಾಂಡ್ಗಳು ಬಂದ ಮೇಲೆ ನೋಕಿಯಾ ಮೊಬೈಲ್ಗಳ ಬೇಡಿಕೆ ಕುಸಿಯುತ್ತಾ ಬಂತು. ಹೀಗಾಗಿ ಕಂಪನಿ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಸ್ಮಾರ್ಟ್ ಟ್ಯಾಬ್, ಸ್ಮಾರ್ಟ್‌ಟಿವಿ ಮೂಲಕವೂ ಗ್ರಾಹಕರ ಗಮನ ಸೆಳೆಯುತ್ತಿದೆ. ಸದ್ಯ ಇದೀಗ ಹೊಸ ಟ್ಯಾಬ್ ನೋಕಿಯಾ T20 (Nokia T20 Tablet) ಅನ್ನು ಲಾಂಚ್ ಮಾಡಿದೆ. ಈ ಹೊಸ ನೋಕಿಯಾ ಟ್ಯಾಬ್ಲೆಟ್ 2K ಡಿಸ್‌ಪ್ಲೇ ಹೊಂದಿದೆ. 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಸೆನ್ಸಾರ್ ಜೊತೆಗೆ ಈ ಟ್ಯಾಬ್ಲೆಟ್ ಡ್ಯುಯಲ್ ಮೈಕ್ರೊಫೋನ್ ಮತ್ತು ಸ್ಟೀರಿಯೋ ಸ್ಪೀಕರ್‌ಗಳನ್ನು ಒಳಗೊಂಡಿದೆ.
ಗೂಗಲ್ ಕಿಡ್ಸ್ ಸ್ಪೇಸ್ ಮತ್ತು ಒಂದು ದಿನದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿರುವ ನೋಕಿಯಾ T20 ಟ್ಯಾಬ್ಲೆಟ್ Wi-Fi ಒನ್ಲಿ ರೂಪಾಂತರ ಬೆಲೆ EUR 199. ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 17,200 ರೂ. ಎನ್ನಬಹುದು. ಇನ್ನು Wi-Fi + 4G ಮಾದರಿಗೆ EUR 239 (ಸರಿಸುಮಾರು ರೂ. 20,600) ಬೆಲೆ ಹೊಂದಿದೆ. ಇನ್ನು ಈ ಟ್ಯಾಬ್ಲೆಟ್ ಪ್ರಪಂಚದಾದ್ಯಂತ ಆಯ್ದ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ. ಸದ್ಯದಲ್ಲೇ ಭಾರತದಲ್ಲಿ ಇದು ಲಭ್ಯವಾಗಲಿದೆ.
ನೋಕಿಯಾ T20 ಟ್ಯಾಬ್ಲೆಟ್ 2,000×1,200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 10.4-ಇಂಚಿನ 2K ಇನ್-ಸೆಲ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇಯನ್ನು ಗಟ್ಟಿಯಾದ ಗ್ಲಾಸ್ ಪ್ರೊಟೆಕ್ಷನ್ ಅನ್ನು ಹೊಂದಿದೆ.
ಇದು ಆಕ್ಟಾ-ಕೋರ್ ಯುನಿಸೋಕ್ ಟಿ 610SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡು ವರ್ಷಗಳ ಓಎಸ್ ಅಪ್‌ಗ್ರೇಡ್‌ಗಳು ಮತ್ತು ಮೂರು ವರ್ಷಗಳ “ಸಕಾಲಿಕ” ಭದ್ರತಾ ಅಪ್‌ಡೇಟ್‌ಗಳನ್ನು ಪಡೆಯುವ ಭರವಸೆ ಇದೆ. ಜೊತೆಗೆ 3GBRAM ಮತ್ತು 64GB ಸ್ಟೋರೇಜ್ ವೇರಿಯೆಂಟ್ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 512 GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಇನ್ನು ಈ ಟ್ಯಾಬ್ಲೆಟ್ ಫೋಟೋಗಳು ಮತ್ತು ವಿಡಿಯೋಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ರಿಯರ್ ಕ್ಯಾಮೆರಾ ಸೆಟಪ್ ಎಲ್ಇಡಿ ಫ್ಲ್ಯಾಷ್ ಅನ್ನು ಸಹ ಪಡೆದುಕೊಂಡಿದೆ. 8,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ಚಾರ್ಜರ್ ಮೂಲಕ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಸಿಂಗಲ್ ಚಾರ್ಜ್‌ನಲ್ಲಿ ಇಡೀ ದಿನ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ಎಲ್ ಟಿಇ (ಐಚ್ಛಿಕ), ವೈ-ಫೈ 802.11 ಎಸಿ, ಬ್ಲೂಟೂತ್ ವಿ 5.0, ಯುಎಸ್ ಬಿ ಟೈಪ್-ಸಿ ಮತ್ತು 3.5 ಎಂಎಂ ಹೆಡ್ ಫೋನ್ ಜ್ಯಾಕ್ ಸೇರಿದಂತೆ ಪ್ರಮುಖ ಫೀಚರ್ಸ್ ನೀಡಲಾಗಿದೆ.
ಟ್ವಿಟರ್ನಲ್ಲಿ ಟ್ರೆಂಡ್ ಆಯ್ತು ಜಿಯೋ ನೆಟ್ವರ್ಕ್ ಡೌನ್; ನಿಮಗೂ ಎದುರಾಯ್ತಾ ಈ ಸಮಸ್ಯೆ?
(Nokia T20 tablet has been finally launched after teasers and reports)