ಟ್ವಿಟರ್​ನಲ್ಲಿ ಟ್ರೆಂಡ್ ಆಯ್ತು ಜಿಯೋ ನೆಟ್​ವರ್ಕ್​ ಡೌನ್; ನಿಮಗೂ ಎದುರಾಯ್ತಾ ಈ ಸಮಸ್ಯೆ?

Jio Network Down: ಇಂದು ಬೆಳಿಗ್ಗೆ ಸುಮಾರು 9:30ರಿಂದ ಜಿಯೋ ನೆಟ್​ವರ್ಕ್​ ಸಮಸ್ಯೆ ಕಾಡತೊಡಗಿದೆ. ಬಳಿಕ ಸಮಯ ಸಾಗುತ್ತಿದ್ದಂತೆಯೇ ಸಮಸ್ಯೆ ಇನ್ನೂ ಹೆಚ್ಚಾಗಿದೆ.

ಟ್ವಿಟರ್​ನಲ್ಲಿ ಟ್ರೆಂಡ್ ಆಯ್ತು ಜಿಯೋ ನೆಟ್​ವರ್ಕ್​ ಡೌನ್; ನಿಮಗೂ ಎದುರಾಯ್ತಾ ಈ ಸಮಸ್ಯೆ?
Jio Network Down
Follow us
TV9 Web
| Updated By: shruti hegde

Updated on:Oct 06, 2021 | 1:05 PM

ಸೋಮವಾರ ರಾತ್ರಿ ಸುಮಾರು ಏಳು ಗಂಟೆಗಳ ಕಾಲ ವಾಟ್ಸಾಪ್, ಫೇಸ್ಬುಕ್ ಹಾಗೂ ಇನ್​ಸ್ಟಾಗ್ರಾಂ ಸೋಷಿಯಲ್ ಮೀಡಿಯಾಗಳು ಕ್ರಾಶ್ ಆಗಿತ್ತು. ಆ ಬಳಿಕ ಇಂದು ಜಿಯೋ ಡೌನ್ ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ. ಜಿಯೋ ನೆಟ್​ವರ್ಕ್​ ಸಮಸ್ಯೆಯ ಬಗ್ಗೆ ಸುಮಾರು 4,000 ಕ್ಕೂ ಹೆಚ್ಚು ವರದಿಗಳು ಬಂದಿವೆ. ಡೌನ್ ಡಿಟೆಕ್ಟರ್ ಸೈಟ್ ಕೂಡಾ ಜಿಯೋ ನೆಟ್​ವರ್ಕ್​ ಸಮಸ್ಯೆಗೆ ಸಂಬಂಧಿಸಿದಂತೆ ಬಳಕೆದಾರರ ದೂರುಗಳಲ್ಲಿ ಹೆಚ್ಚಳವನ್ನು ತೋರಿಸುತ್ತಿದೆ.

ಇಂದು (ಅಕ್ಟೋಬರ್ 6, ಬುಧವಾರ) ಬೆಳಿಗ್ಗೆ ಸುಮಾರು 9:30ರಿಂದ ಜಿಯೋ ನೆಟ್​ವರ್ಕ್​ ಸಮಸ್ಯೆ ಕಾಡತೊಡಗಿದೆ. ಬಳಿಕ ಸಮಯ ಸಾಗುತ್ತಿದ್ದಂತೆಯೇ ಸಮಸ್ಯೆ ಇನ್ನೂ ಉತ್ತುಂಗಕ್ಕೇರಿದೆ. ಡೌನ್ ಡಿಟೆಕ್ಟರ್ ವರದಿಗಳ ಪ್ರಕಾರ, ದೆಹಲಿ, ಮುಂಬೈ, ಬೆಂಗಳೂರು, ಇಂದೋರ್ ಮತ್ತು ರಾಯ್ಪುರದಲ್ಲಿ ಜಿಯೋ ನೆಟ್​ವರ್ಕ್​ ಡೌನ್ ಸಮಸ್ಯೆ ತೀವ್ರವಾಗಿದೆ. ಜಿಯೋ ಇದುವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲವಾದರೂ, ಕಂಪನಿಯ ಟ್ವಿಟರ್ ಹ್ಯಾಂಡಲ್, ಸಂಪರ್ಕ ಸಮಸ್ಯೆಗಳು ಎದುರಾಗಿವೆ ಎಂದು ಬಳಕೆದಾರರಿಗೆ ಪ್ರತಿಕ್ರಿಯಿಸಿದೆ.

ಕೆಲವರು ಕರೆ ಮಾಡುವಾಗ ಸಮಸ್ಯೆಗಳಾಗಿರುವುದನ್ನು ತಿಳಿಸಿದ್ದಾರೆ, ಇನ್ನು ಕೆಲವರು ಇಂಟರ್​ನೆಟ್​ ಸಮಸ್ಯೆ ಆಗಿರುವುದನ್ನು ಹೇಳಿಕೊಂಡಿದ್ದಾರೆ. ಟ್ವಿಟರ್​ನಲ್ಲಿ ರಿಲಾಯನ್ಸ್ ಜಿಯೋ ಟೆಲಿಕಾಂನ ಅನೇಕ ಬಳಕೆದಾರರು ಜಿಯೋ ಡೌನ್ ಕುರಿತಾಗಿ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಇನ್ನು ಕೆಲವರು ನೆಟ್​ವರ್ಕ್​ ಸ್ಥಗಿತದ ಕುರಿತಾಗಿ ದೂರಿದ್ದಾರೆ.

ಇದನ್ನೂ ಓದಿ:

Jio: IPL​ ಗಾಗಿ ಉಚಿತ ಹಾಟ್​ಸ್ಟಾರ್ ರಿಚಾರ್ಜ್​ ಪ್ಲ್ಯಾನ್ ಪರಿಚಯಿಸಿದ ಜಿಯೋ

JIO: ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಎರಡು ಆಕರ್ಷಕ ಪ್ಲಾನ್ ದಿಢೀರ್ ಸ್ಥಗಿತ

Published On - 12:54 pm, Wed, 6 October 21