25,000 ರೂ. ಗಿಂತ ಕಡಿಮೆ ಬೆಲೆಯ ಮಧ್ಯಮ ಶ್ರೇಣಿಯ ಅತ್ಯುತ್ತಮ ಸ್ಮಾರ್ಟ್ಫೋನ್ ಹುಡುಕುತ್ತಿರುವಿರಾ?. ಹಾಗಾದ್ರೆ ಸ್ವಲ್ಪ ದಿನ ಕಾಯಿರಿ. ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿ ಧೂಳೆಬ್ಬಿಸಿದ ನಥಿಂಗ್ ಫೋನ್ (1) (Nothing Phone 1) ಸ್ಮಾರ್ಟ್ಫೋನನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸಮಯದಲ್ಲಿ ಈ ಫೋನ್ ಬೆಲೆ 25,000 ರೂ. ಗಿಂತ ಕಡಿಮೆ ಇರುತ್ತದೆ. ಈ ಮೇಳ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಫ್ಲಿಪ್‌ಕಾರ್ಟ್ ನಿಖರವಾದ ದಿನಾಂಕವನ್ನು ಬಹಿರಂಗಪಡಿಸದಿದ್ದರೂ, ಮಾರಾಟವು ಅಕ್ಟೋಬರ್ 4 ರಂದು ಲೈವ್ ಆಗಲಿದೆ ಎಂದು ಹೇಳಲಾಗಿದೆ.
ಟಿಪ್‌ಸ್ಟರ್ ಮುಕುಲ್ ಶರ್ಮಾ ಅವರ ಟ್ವಿಟರ್ ಪೋಸ್ಟ್ ಪ್ರಕಾರ, ನಥಿಂಗ್ ಫೋನ್ (1) ಬೆಲೆ 23,000 ರೂ. ಗೆ ಇಳಿಯಲಿದೆ. ರಿಯಾಯಿತಿ ದರವು ಬ್ಯಾಂಕ್ ಕೊಡುಗೆಯನ್ನು ಒಳಗೊಂಡಿದೆಯೇ ಅಥವಾ ಕಂಪನಿಯು ಫೋನ್‌ನಲ್ಲಿ ಫ್ಲಾಟ್ ರಿಯಾಯಿತಿಯನ್ನು ನೀಡುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಆರಂಭಿಸದ ನಂತರವಷ್ಟೆ ತಿಳಿಯಬೇಕು.
ನಥಿಂಗ್ ಫೋನ್ (1) 6.55 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದ್ದು, 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ನೀಡಲಾಗಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ.
ಹೊಸ ವೇರಿಯೆಂಟ್ನಲ್ಲಿ ಬಿಡುಗಡೆ ಆಗಿದೆ ವಿವೋ Y56 5G ಫೋನ್: ಬೆಲೆ ಕೇವಲ 16,999 ರೂ.
ಈ ಫೋನ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್ ಹೊಂದಿದೆ. ಇದು OIS ಜೊತೆಗೆ EIS ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ ಬರುತ್ತದೆ. ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ JN1 ಸೆನ್ಸಾರ್ ಹೊಂದಿದೆ. ಇದು EIS ಇಮೇಜ್ ಸ್ಟೆಬಿಲೈಸೇಶನ್, 114-ಡಿಗ್ರಿ ಫೀಲ್ಡ್–ಆಫ್–ವ್ಯೂ ಮತ್ತು ಮ್ಯಾಕ್ರೋ ಮೋಡ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೋನಿ IMX471 ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಬೆಂಬಲಿಸಲಿದೆ. ಆದರೆ, ನಥಿಂಗ್ ಫೋನ್ (1) ನೊಂದಿಗೆ ಚಾರ್ಜರ್ ನೀಡಲಾಗಿಲ್ಲ ಕೇವಲ ಟೈಪ್–ಸಿ ಚಾರ್ಜಿಂಗ್ ಕೇಬಲ್ ಲಭ್ಯ ಮಾಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ v5.2, NFC, GPS/A-GPS, ಗ್ಲೋನಾಸ್ ಮತ್ತು USB ಟೈಪ್- ಸಿ ಪೋರ್ಟ್ ಬೆಂಬಲಿಸುತ್ತದೆ.
ಭಾರತದಲ್ಲಿ ನಥಿಂಗ್ ಫೋನ್ (1) 8GB RAM + 128GB ಸ್ಟೋರೇಜ್ ಆಯ್ಕೆಗೆ 32,999ರೂ. ನಿಗದಿ ಮಾಡಲಾಗಿದೆ. ಅಂತೆಯೆ 8GB RAM + 256GB ಸ್ಟೋರೇಜ್ ಆಯ್ಕೆಗೆ 35,999ರೂ., 12GB RAM + 256GB ಸ್ಟೋರೇಜ್ ಆಯ್ಕೆಗೆ 38,999ರೂ. ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ