ಬಿಡುಗಡೆ ಆಯಿತು ಭಾರತದ ಸ್ಮಾರ್ಟ್‌ಫೋನ್: ಯಾವುದು?, ಬೆಲೆ ಎಷ್ಟು?
Lava Blaze Pro 5G Launched in India: ಭಾರತದಲ್ಲಿ ಲಾವಾ ಬ್ಲೇಜ್ ಪ್ರೊ 5G ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8 GB RAM + 128 GB ಸ್ಟೋರೇಜ್ ಸಾಮರ್ಥ್ಯಕ್ಕೆ ಕೇವಲ 12,499 ರೂ. ನಿಗದಿ ಮಾಡಲಾಗಿದೆ. ಅಕ್ಟೋಬರ್ 3 ರಿಂದ ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಆಫ್ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ.
ಭಾರತದ ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ಲಾವಾ ಇಂದು ದೇಶದಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್ ಲಾವಾ ಬ್ಲೇಜ್ ಪ್ರೊ 5G (Lava Blaze Pro 5G) ಅನ್ನು ಅನಾವರಣಗೊಳಿಸಿದೆ. ಇದೊಂದು ಬಜೆಟ್ ಫೋನಾಗಿದೆ. ಈ ಮೂಲಕ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವೇ ಕೆಲವು 5ಜಿ ಸ್ಮಾರ್ಟ್ಫೋನ್ಗಳ ಸಾಲಿಗೆ ಇದುಕೂಡ ಸೇರ್ಪಡೆ ಆಗಿದೆ. ಆಕರ್ಷಕ ಕ್ಯಾಮೆರಾ, ಬಲಿಷ್ಠ ಬ್ಯಾಟರಿ, ಪ್ರೊಸೆಸರ್ ಆಯ್ಕೆಯನ್ನು ಹೊಂದಿರುವ ಲಾವಾ ಬ್ಲೇಜ್ ಪ್ರೊ 5G ಫೋನಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಲಾವಾ ಬ್ಲೇಜ್ ಪ್ರೊ 5G ಬೆಲೆ:
ಭಾರತದಲ್ಲಿ ಲಾವಾ ಬ್ಲೇಜ್ ಪ್ರೊ 5G ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8 GB RAM + 128 GB ಸ್ಟೋರೇಜ್ ಸಾಮರ್ಥ್ಯಕ್ಕೆ ಕೇವಲ 12,499 ರೂ. ನಿಗದಿ ಮಾಡಲಾಗಿದೆ. ಅಕ್ಟೋಬರ್ 3 ರಿಂದ ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಆಫ್ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ. ಬ್ಲೇಜ್ ಪ್ರೊ 5G ವಿಶೇಷವಾಗಿ ಬಣ್ಣ-ಬದಲಾಯಿಸುವ ಹಿಂದಿನ ಪ್ಯಾನೆಲ್‌ನಿಂದ ರಚಿತವಾಗಿದೆ. ಮತ್ತು ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುತ್ತದೆ: ಸ್ಟಾರಿ ನೈಟ್ ಮತ್ತು ರೇಡಿಯಂಟ್ ಪರ್ಲ್.
ಲಾವಾ ಬ್ಲೇಜ್ ಪ್ರೊ 5G ಫೀಚರ್ಸ್:
ಲಾವಾ ಬ್ಲೇಜ್ ಪ್ರೊ 5ಜಿ ಫೋನ್ 120Hz ನ ರಿಫ್ರೆಶ್ ರೇಟ್ ಪ್ಯಾನೆಲ್‌ನೊಂದಿಗೆ 6.78-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಸೂಪರ್-ಫಾಸ್ಟ್ ಪ್ರೊಸೆಸರ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 128 GB ಸಂಗ್ರಹಣೆ ಮತ್ತು 8 GB RAM ನೊಂದಿಗೆ ಜೋಡಿಯಾಗಿ ಬರುತ್ತದೆ. ಇದನ್ನು 16 GB ವರೆಗೆ ವಿಸ್ತರಿಸಬಹುದು.
ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ?: ಈ ತಪ್ಪುಗಳನ್ನು ಮಾಡಬೇಡಿ
ಕಂಪನಿಯ ಪ್ರಕಾರ, ಈ ಫೋನ್ ಆಂಡ್ರಾಯ್ಡ್ 13 ಆಧಾರಿತ ಬ್ಲೋಟ್-ಫ್ರೀ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 5000mAhಸಾಮರ್ಥ್ಯದ ಬಿಗ್ ಬ್ಯಾಟರಿ ಲೈಫ್ ನೀಡಲಾಗಿದ್ದು, 33W ಟೈಪ್-ಸಿ ವೇಗದ ಚಾರ್ಜಿಂಗ್ ಬೆಂಬಲವಿದೆ.
EIS ಕಾರ್ಯನಿರ್ವಹಣೆಯೊಂದಿಗೆ ಲಾವಾ ಬ್ಲೇಜ್ ಪ್ರೊ 5G ಸ್ಮಾರ್ಟ್‌ಫೋನ್‌ನ 50 MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಮುಂಭಾಗದ ಕ್ಯಾಮೆರಾದಲ್ಲಿ ಡಿಸ್ ಪ್ಲೇಯು ಫ್ಲ್ಯಾಷ್ ಮತ್ತು 8 MP ಸಂವೇದಕದಿಂದ ಕೂಡಿದೆ. ಇದರಲ್ಲಿರುವ ಸುಧಾರಿತ AI-ಚಾಲಿತ ಇಮೇಜ್ ಆಪ್ಟಿಮೈಸೇಶನ್‌ಗಳು ಪ್ರತಿ ಶಾಟ್ ಅನ್ನು ಅತ್ಯುತ್ತಮವಾಗಿ ಸೆರೆ ಹಿಡಿಯುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ