AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಟ್ 13 ಸರಣಿ ಬಿಡುಗಡೆ ಬೆನ್ನಲ್ಲೇ ನೋಟ್ 12ಗೆ ಬಂಪರ್ ಡಿಸ್ಕೌಂಟ್: ಕಡಿಮೆ ಬೆಲೆಗೆ ಲಭ್ಯ

Redmi Note 12 4G price cut in india: ರೆಡ್ಮಿ ನೋಟ್ 12 4G ಫೋನ್ ಈಗ ಭರ್ಜರಿ ಡಿಸ್ಕೌಂಟ್​ನಲ್ಲಿ ಸೇಲ್ ಆಗುತ್ತಿದೆ. ಶವೋಮಿ ಕಂಪನಿ ಕಳೆದ ವಾರ ಚೀನಾದಲ್ಲಿ ರೆಡ್ಮಿ ನೋಟ್ 13 ಸರಣಿ ರಿಲೀಸ್ ಮಾಡಿದ ನಂತರ ನೋಟ್ 12 4ಜಿ ಅಮೆಜಾನ್ ಮತ್ತು ಇತರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ.

ನೋಟ್ 13 ಸರಣಿ ಬಿಡುಗಡೆ ಬೆನ್ನಲ್ಲೇ ನೋಟ್ 12ಗೆ ಬಂಪರ್ ಡಿಸ್ಕೌಂಟ್: ಕಡಿಮೆ ಬೆಲೆಗೆ ಲಭ್ಯ
redmi note 12 4g
Vinay Bhat
|

Updated on: Sep 25, 2023 | 3:01 PM

Share

ರೆಡ್ಮಿ ನೋಟ್ 11 ಫೋನಿನ ಉತ್ತರಾಧಿಕಾರಿಯಾಗಿ ರೆಡ್ಮಿ ನೋಟ್ 12 4G (Redmi 12 4G) ಸ್ಮಾರ್ಟ್​ಫೋನ್ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಕೆಲವು ಹೊಸ ಫೀಚರ್ ಮತ್ತು ವಿನ್ಯಾಸದಲ್ಲಿ ಬದಲಾವಣೆ ಮಾಡಿ 14,999 ರೂ. ಗಳ ಪ್ರೈಸ್​ಟ್ಯಾಗ್​ನಲ್ಲಿ ಈ ಹ್ಯಾಂಡ್‌ಸೆಟ್ ದೇಶದಲ್ಲಿ ಅನಾವರಣಗೊಂಡಿತ್ತು. ಈ ಫೋನ್ ಈಗ ಭರ್ಜರಿ ಡಿಸ್ಕೌಂಟ್​ನಲ್ಲಿ ಸೇಲ್ ಆಗುತ್ತಿದೆ. ಶವೋಮಿ ಕಂಪನಿ ಕಳೆದ ವಾರ ಚೀನಾದಲ್ಲಿ ರೆಡ್ಮಿ ನೋಟ್ 13 ಸರಣಿ ರಿಲೀಸ್ ಮಾಡಿದ ನಂತರ ನೋಟ್ 12 4ಜಿ ಅಮೆಜಾನ್ ಮತ್ತು ಇತರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ.

ರೆಡ್ಮಿ ನೋಟ್ 12 4G ಆಫರ್:

ರೆಡ್ಮಿ ನೋಟ್ 12 ಭಾರತದಲ್ಲಿ 6GB/64GB ಮಾದರಿಗೆ 14,999 ರೂ. ಮತ್ತು 6GB/128GB ಆವೃತ್ತಿಗೆ 16,999 ರೂ. ಗೆ ಬಿಡುಗಡೆಯಾಗಿತ್ತು. ಇದೀಗ ಬೆಲೆ ಕಡಿತಗೊಂಡು ಈ ಫೋನ್ 6GB + 64GB 12,999 ರೂ. ಗೆ ಮತ್ತು 6GB + 128GB 14,999 ರೂ. ಗೆ ಲಭ್ಯವಿದೆ. 2,000 ರೂ. ಗಳ ಡಿಸ್ಕೌಂಟ್ ಘೋಷಿಸಲಾಗಿದೆ. ಗ್ರಾಹಕರು HDFC, ICICI, Axis ಮತ್ತು SBI ಕ್ರೆಡಿಟ್ ಕಾರ್ಡ್‌ಗಳೊಂದಿಗೆ 1,000 ರೂ. ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದು. ಈ ಹ್ಯಾಂಡ್‌ಸೆಟ್ ಅಮೆಜಾನ್, ಫ್ಲಿಪ್​ಕಾರ್ಟ್ ಮತ್ತು Mi.com ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸಲು ಲಭ್ಯವಿದೆ.

ರೆಡ್ಮಿ ನೋಟ್ 12 4G ಫೀಚರ್ಸ್

ಡಿಸ್‌ಪ್ಲೇ: ರೆಡ್ಮಿ ನೋಟ್ 12 ಸ್ಮಾರ್ಟ್​ಫೋನ್ 1080 × 2400 ಪಿಕ್ಸೆಲ್‌ಗಳ ರೆಸಲ್ಯೂಶನ್, 394ppi ಪಿಕ್ಸೆಲ್ ಸಾಂದ್ರತೆ, 120Hz ರಿಫ್ರೆಶ್ ದರ, 1200 nits ಪೀಕ್ ಬ್ರೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ 6.67-ಇಂಚಿನ FHD+ AMOLED ಡಿಸ್ ಪ್ಲೇಯನ್ನು ಹೊಂದಿದೆ.

ಇದನ್ನೂ ಓದಿ
Image
ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ?: ಈ ತಪ್ಪುಗಳನ್ನು ಮಾಡಬೇಡಿ
Image
ಈ ಆಂಡ್ರಾಯ್ಡ್ ಫೋನ್​ಗಳಲ್ಲಿ ಇನ್ನುಂದೆ ವಾಟ್ಸ್​ಆ್ಯಪ್ ಉಪಯೋಗಿಸಲು ಆಗಲ್ಲ
Image
ಎರಡೇ ದಿನ ಬಾಕಿ: ಸೆಪ್ಟೆಂಬರ್ 26ಕ್ಕೆ ಲಾವಾ ಬ್ಲೇಜ್ ಪ್ರೊ 5G ಬಿಡುಗಡೆ
Image
ಇಲ್ಲಿದೆ 15,000 ರೂ. ಒಳಗಿನ ಆಕರ್ಷಕ ಸ್ಮಾರ್ಟ್​ಫೋನ್ಸ್

ಐಫೋನ್ 15 ಬಾಕ್ಸ್​ನಲ್ಲಿ ಹೈ-ಸೆಕ್ಯುರಿಟಿ ಸಿಸ್ಟಮ್: ಫೇಕ್ ಐಫೋನ್ ಮಾರುವವರಿಗೆ ಶಾಕ್

ಪ್ರೊಸೆಸರ್: ಈ ಫೋನ್ Adreno 610 GPU ಜೊತೆಗೆ ಕ್ವಾಲ್ಕಂ ಸ್ನಾಪ್​ಡ್ರಾಗನ್ 685 ಪ್ರೊಸೆಸರ್​ನಿಂದ ಚಾಲಿತವಾಗಿದೆ.

ಮೆಮೊರಿ ಮತ್ತು ಸಂಗ್ರಹಣೆ: 6GB LPDDR4X RAM, 64GB/128GB UFS 2.2 ಸಂಗ್ರಹಣೆ, ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ.

ಸಾಫ್ಟ್‌ವೇರ್: ಆಂಡ್ರಾಯ್ಡ್ 13-ಆಧಾರಿತ MIUI 14 ಕಸ್ಟಮ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾಗಳು: 50MP ಸ್ಯಾಮ್​ಸಂಗ್ ISOCELL JN1 ಪ್ರಾಥಮಿಕ ಕ್ಯಾಮೆರಾ ಸಂವೇದಕ, 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 2MP ಮ್ಯಾಕ್ರೋ ಕ್ಯಾಮೆರಾ ಮತ್ತು LED ಫ್ಲಾಷ್ ಇದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 16MP ಶೂಟರ್ ಇದೆ.

ಬ್ಯಾಟರಿ-ಇತರೆ: 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. ಡ್ಯುಯಲ್-ಸಿಮ್, 4ಜಿ, ವೈಫೈ 802.11 ಎಸಿ, ಬ್ಲೂಟೂತ್ 5.0, ಜಿಪಿಎಸ್, ಗ್ಲೋನಾಸ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್