ಐಫೋನ್ 15 ಬಾಕ್ಸ್​ನಲ್ಲಿ ಹೈ-ಸೆಕ್ಯುರಿಟಿ ಸಿಸ್ಟಮ್: ಫೇಕ್ ಐಫೋನ್ ಮಾರುವವರಿಗೆ ಶಾಕ್

iPhone 15 Fake or Real: ಹೊಸ ಐಫೋನ್ 15 ಅನ್ನು ಖರೀದಿಸುವ ಮೊದಲು ಆ ಫೋನ್ ಅಸಲಿಯೋ ಅಥವಾ ನಕಲಿಯೇ ಎಂದು ನೀವು ಹೇಗೆ ಪರಿಶೀಲಿಸಬಹುದು ಎಂಬುದನ್ನು ನಿಮಗೆ ಹೇಳುತ್ತೇವೆ. ನಕಲಿ ಐಫೋನ್​ಗಳ ಆವಳಿಯನ್ನು ಕಂಡು ಈ ಬಾರಿ ಸ್ವತಃ ಆ್ಯಪಲ್ ಈ ಸಮಸ್ಯೆಗೆ ಅಂತ್ಯ ಹಾಡಿದೆ. ಹೊಸ ಐಫೋನ್ 15 ಸರಣಿಯ ಚಿಲ್ಲರೆ ಬಾಕ್ಸ್‌ನಲ್ಲಿಯೇ ಹೈ-ಸೆಕ್ಯುರಿಟಿ ಸಿಸ್ಟಮ್ ಅನ್ನು ನೀಡಿದೆ.

ಐಫೋನ್ 15 ಬಾಕ್ಸ್​ನಲ್ಲಿ ಹೈ-ಸೆಕ್ಯುರಿಟಿ ಸಿಸ್ಟಮ್: ಫೇಕ್ ಐಫೋನ್ ಮಾರುವವರಿಗೆ ಶಾಕ್
iPhone 15 Box
Follow us
|

Updated on: Sep 24, 2023 | 12:38 PM

ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಐಫೋನ್ 15 ಸರಣಿಯ (iPhone 15 Series) ಮಾರಾಟ ಶುರುವಾಗಿದೆ. ಗ್ರಾಹಕರು ಕ್ಯೂ ನಿಂತು ನೂತನ ಐಫೋನ್ ಅನ್ನು ಖರೀದಿಸುತ್ತಿದ್ದು, ಕೆಲವು ಕಡೆಗಳಲ್ಲಿ ಈಗಾಗಲೇ ಸೋಲ್ಡ್ ಔಟ್ ಕೂಡ ಆಗಿದೆ. ಆದರೆ, ಇವುಗಳಲ್ಲಿ ಕೆಲವು ನಕಲಿ ಐಫೋನ್ 15 ಕೂಡ ಮಾರಾಟ ಆಗುತ್ತಿದೆ. ನಕಲಿ ಉತ್ಪನ್ನಗಳ ಈ ಯುಗದಲ್ಲಿ, ನೀವು ಐಫೋನ್‌ ನಂತಹ ದುಬಾರಿ ಉತ್ಪನ್ನವನ್ನು ಖರೀದಿಸುವಾಗ ಜಾಗರೂಕರಾಗಿರಬೇಕು. ನಕಲಿ ಫೋನ್‌ಗಳನ್ನು ಅಸಲಿ ಎಂದು ಬಿಂಬಿಸಿ ಮಾರಾಟ ಮಾಡುವುದು ಹಲವು ಕಡೆಗಳಲ್ಲಿ ಕಂಡುಬಂದಿದೆ.

ಹೊಸ ಐಫೋನ್ 15 ಅನ್ನು ಖರೀದಿಸುವ ಮೊದಲು ಆ ಫೋನ್ ಅಸಲಿಯೋ ಅಥವಾ ನಕಲಿಯೇ ಎಂದು ನೀವು ಹೇಗೆ ಪರಿಶೀಲಿಸಬಹುದು ಎಂಬುದನ್ನು ನಿಮಗೆ ಹೇಳುತ್ತೇವೆ. ನಕಲಿ ಐಫೋನ್​ಗಳ ಹಾವಳಿಯನ್ನು ಕಂಡು ಈ ಬಾರಿ ಸ್ವತಃ ಆ್ಯಪಲ್ ಸಂಸ್ಥೆ ಈ ಸಮಸ್ಯೆಗೆ ಅಂತ್ಯ ಹಾಡಿದೆ. ಹೊಸ ಐಫೋನ್ 15 ಸರಣಿಯ ಚಿಲ್ಲರೆ ಬಾಕ್ಸ್‌ನಲ್ಲಿಯೇ ಹೈ-ಸೆಕ್ಯುರಿಟಿ ಸಿಸ್ಟಮ್ ಅನ್ನು ನೀಡಿದೆ. ಅದನ್ನು ನೋಡುವ ಮೂಲಕ ನೀವು ಖರೀದಿಸುತ್ತಿರುವ ಫೋನ್ ನಿಜವಾಗಿಯೂ ಅಸಲಿಯೇ ಅಥವಾ ಅಲ್ಲವೇ ಎಂಬುದನ್ನು ತಿಳಿಯಬಹುದು.

ಇದನ್ನೂ ಓದಿ
Image
ಅಮೆಜಾನ್​ನಲ್ಲಿ ಶುರುವಾಗುತ್ತಿದೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023
Image
ಪ್​ಕಾರ್ಟ್​ನಲ್ಲಿ ಶುರುವಾಗುತ್ತಿದೆ ಅತಿ ದೊಡ್ಡ ಬಿಗ್ ಬಿಲಿಯನ್ ಡೇಸ್ ಸೇಲ್
Image
ತಿಂಗಳಲ್ಲಿ ಒಮ್ಮೆಯಾದ್ರೂ ನಿಮ್ಮ ಸ್ಮಾರ್ಟ್​ಫೋನ್ ಅನ್ನು ಹೀಗೆ ಮಾಡಿ
Image
ಐಫೋನ್ 15 ಬೇಕಿದ್ದರೆ ಜಿಯೋ, ರಿಲಯನ್ಸ್ ಡಿಜಿಟಲ್​ನಲ್ಲಿ ಖರೀದಿಸಿ

ನಿಯೋ ಎಂಬ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಟೆಕ್ ಮಾರುಕಟ್ಟೆ ಅಲ್ಲೋಲ-ಕಲ್ಲೋಲ

ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಈ ಬಾರಿ ಆ್ಯಪಲ್ ಚಿಲ್ಲರೆ ಬಾಕ್ಸ್‌ನಲ್ಲಿಯೇ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿದೆ. ಅದನ್ನು ನೀವು ಫೋನ್ ಖರೀದಿಸುವ ಮೊದಲು ಪರಿಶೀಲಿಸಬೇಕು. ಇತ್ತೀಚಿಗೆ, ಪೋಸ್ಟ್ ಮೂಲಕ ಈ ವಿಡಿಯೋ ಕಾಣಿಸಿಕೊಂಡಿದೆ.

ಐಫೋನ್ 15 ಅಸಲಿಯೇ-ನಕಲಿಯೋ ತಿಳಿಯಲು ಇಲ್ಲಿದೆ ವಿಡಿಯೋ:

ಇನ್ನೂ ಹಲವು ಮಾರ್ಗಗಳಿವೆ

ನಿಮ್ಮ ಐಫೋನ್ ನಕಲಿ ಎಂದು ನಿಮಗೆ ಅನುಮಾನವಿದ್ದರೆ, ಫೋನ್‌ನ ಸೆಟ್ಟಿಂಗ್ಸ್​ಗೆ ತೆರಳಿ ಅಪ್ಲಿಕೇಶನ್‌ಗೆ ಹೋಗುವ ಮೂಲಕ ಅಥವಾ ಫೋನ್‌ನ ಹಿಂಭಾಗದಲ್ಲಿ ತೋರಿಸಿರುವ ಮಾಹಿತಿಯನ್ನು ನೋಡುವ ಮೂಲಕ ಬಾಕ್ಸ್‌ನಲ್ಲಿ ನೀಡಲಾದ ಸರಣಿ ಸಂಖ್ಯೆ ಅಥವಾ IMEI ಸಂಖ್ಯೆಯನ್ನು ನೀವು ಪರಿಶೀಲಿಸಬಹುದು. ಇದಲ್ಲದೆ, SIM ಟ್ರೇನಲ್ಲಿ IMEI ಸಂಖ್ಯೆಯನ್ನು ಸಹ ಬರೆಯಲಾಗಿದೆ. ಈ ಮೂಲಕ ಫೋನ್ ನಿಜವಾಗಿಯೂ ಅಸಲಿಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು.

ಫೋನ್ ತೆಗೆದುಕೊಳ್ಳುವಾಗ, ಫೋನ್‌ನಲ್ಲಿ ಆ್ಯಪಲ್ ಐಡಿಗೆ ಲಾಗ್ ಇನ್ ಮಾಡಿ, ಈ ಫೋನ್ ಕ್ಲೋನ್ ಆಗಿದ್ದರೆ ಆ್ಯಪಲ್ ಐಡಿ ಲಾಗ್ ಇನ್ ಆಗುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಐಫೋನ್ 15 ಸರಣಿಯನ್ನು ಖರೀದಿಸಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ