ಅಮೆಜಾನ್​ನಲ್ಲಿ ಶುರುವಾಗುತ್ತಿದೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023: ಲೈವ್ ಆಗಿದೆ ಪೇಜ್

Amazon Great Indian Festival Start Soon in India: ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್​ನಲ್ಲಿ ಮೊಬೈಲ್‌ಗಳು ಮತ್ತು ಪರಿಕರಗಳ ಮೇಲೆ ಶೇಕಡಾ 40 ರಷ್ಟು ರಿಯಾಯಿತಿಯನ್ನು ನೀಡಲಿದೆ. ಬಹುನಿರೀಕ್ಷಿತ ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಸ್ಮಾರ್ಟ್​ಫೋನ್ ಕೂಡ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಮಯದಲ್ಲಿ ಮಾರಾಟವಾಗುವುದು ಖಚತವಾಗಿದೆ.

ಅಮೆಜಾನ್​ನಲ್ಲಿ ಶುರುವಾಗುತ್ತಿದೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023: ಲೈವ್ ಆಗಿದೆ ಪೇಜ್
amazon great indian festival sale
Follow us
|

Updated on:Sep 24, 2023 | 11:56 AM

ದೇಶದಲ್ಲಿ ಹಬ್ಬದ ಸೀಸನ್ ಆರಂಭವಾಗಿದೆ. ಮುಂದಿನ ತಿಂಗಳು ಒಂದರ ಹಿಂದೆ ಒಂದರಂತೆ ಹಬ್ಬಗಳು ಬರಲಿದೆ. ಇದಕ್ಕೆ ಪ್ರಸಿದ್ಧ ಇ ಕಾಮರ್ಸ್ ತಾಣಗಳು ಕೂಡ ಸಿದ್ದವಾಗಿದ್ದು ಹೊಸ ಹೊಸ ಮೇಳಗಳನ್ನು ಆಯೋಜಿಸುತ್ತಿದೆ. ಈಗಾಗಲೇ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಬಗ್ಗೆ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 (Amazon Great Indian Festival) ಪುಟವನ್ನು ಲೈವ್ ಮಾಡಿದೆ.

ಅಮೆಜಾನ್ ಇನ್ನೂ ಮಾರಾಟದ ದಿನಾಂಕಗಳನ್ನು ಘೋಷಿಸಿಲ್ಲ. ಆದರೆ, ಮಾರಾಟದ ಪುಟದಲ್ಲಿ ಮೊಬೈಲ್‌ಗಳು, ಎಲೆಕ್ಟ್ರಾನಿಕ್ಸ್, ಮನೆ, ಫ್ಯಾಷನ್, ಸ್ಮಾರ್ಟ್ ಟಿವಿಗಳು ಮತ್ತು ಹೆಚ್ಚಿನ ವಿಭಾಗಗಳಲ್ಲಿ ಆಕರ್ಷಕ ಆಫರ್ ಇರುವುದು ಕಂಡುಬಂದಿದೆ. ಅಮೆಜಾನ್‌ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್​ನಲ್ಲಿ ಮೊಬೈಲ್‌ಗಳು ಮತ್ತು ಪರಿಕರಗಳ ಮೇಲೆ ಶೇಕಡಾ 40 ರಷ್ಟು ರಿಯಾಯಿತಿಯನ್ನು ನೀಡಲಿದೆ.

Tech Tips: ನಿಮ್ಮ ಮೊಬೈಲ್ ದೀರ್ಘ ಸಮಯ ಚಾರ್ಜ್ ಬರಬೇಕಾ?: ಈ ಟ್ರಿಕ್ ಫಾಲೋ ಮಾಡಿ

ಇದನ್ನೂ ಓದಿ
Image
ಪ್​ಕಾರ್ಟ್​ನಲ್ಲಿ ಶುರುವಾಗುತ್ತಿದೆ ಅತಿ ದೊಡ್ಡ ಬಿಗ್ ಬಿಲಿಯನ್ ಡೇಸ್ ಸೇಲ್
Image
ತಿಂಗಳಲ್ಲಿ ಒಮ್ಮೆಯಾದ್ರೂ ನಿಮ್ಮ ಸ್ಮಾರ್ಟ್​ಫೋನ್ ಅನ್ನು ಹೀಗೆ ಮಾಡಿ
Image
ಐಫೋನ್ 15 ಬೇಕಿದ್ದರೆ ಜಿಯೋ, ರಿಲಯನ್ಸ್ ಡಿಜಿಟಲ್​ನಲ್ಲಿ ಖರೀದಿಸಿ
Image
ನಿಯೋ ಎಂಬ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಟೆಕ್ ಮಾರುಕಟ್ಟೆ ಅಲ್ಲೋಲ-ಕಲ್ಲೋಲ

ಬಹುನಿರೀಕ್ಷಿತ ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಸ್ಮಾರ್ಟ್​ಫೋನ್ ಕೂಡ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಮಯದಲ್ಲಿ ಮಾರಾಟವಾಗುವುದು ಖಚಿತವಾಗಿದೆ. ಈ ಸೇಲ್ ಸಮಯದಲ್ಲಿ, SBI ಬ್ಯಾಂಕ್ ಗ್ರಾಹಕರು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳೊಂದಿಗೆ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

ಗ್ಯಾಲಕ್ಸಿ S23 FE ಹೊರತಾಗಿ, ಅಮೆಜಾನ್ ಈ ಸೇಲ್​ನಲ್ಲಿ ಒನ್​ಪ್ಲಸ್ ನಾರ್ಡ್ CE 3 5G , ರಿಯಲ್ ಮಿ ನಾರ್ಜೊ 60x 5G , ಐಕ್ಯೂ Z7 ಪ್ರೊ 5G ಮತ್ತು ಇತ್ತೀಚೆಗೆ ಅನಾವರಣಗೊಂಡ ಹಾನರ್ 90 5G ಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತದೆ. ಬಜೆಟ್ ಫೋನುಗಳಾದ ರೆಡ್ಮಿ 12 5G , ಐಕ್ಯೂ Z6 ಲೈಟ್ , ರೆಡ್ಮಿ 12C , ಐಟೆಲ್ A60s ಮತ್ತು ಲಾವಾ ಬ್ಲೇಜಾ 5G ಮೇಲೂ ರಿಯಾಯಿತಿ ಇರಲಿದೆಯಂತೆ. ಇದರ ಜೊತೆಗೆ ನೋ-ಕಾಸ್ಟ್ ಇಎಂಐ, ಎಕ್ಸ್‌ಚೇಂಜ್ ಆಫರ್‌ಗಳು ಇದೆ.

ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪುಟವು ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಹೆಡ್‌ಫೋನ್‌ಗಳ ಮೇಲೂ ಆಫರ್ ಇರುವುದನ್ನು ಸೂಚಿಸುತ್ತದೆ. ಇವುಗಳ ಮೇಲೆ 75 ಪ್ರತಿಶತದವರೆಗೆ ಡಿಸ್ಕೌಂಟ್ ಇರುತ್ತದೆ. ಅಮೆಜಾನ್ ಅಲೆಕ್ಸಾ-ಚಾಲಿತ ಸಾಧನಗಳು, ಫೈರ್ ಟಿವಿ ಮತ್ತು ಕಿಂಡಲ್‌ ಮೇಲೆ 55 ಪ್ರತಿಶತದಷ್ಟು ರಿಯಾಯಿತಿ ಇರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:56 am, Sun, 24 September 23

ತಾಜಾ ಸುದ್ದಿ
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು