AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮೊಬೈಲ್ ಡೇಟಾ ಬೇಗನೆ ಖಾಲಿಯಾಗುತ್ತಿದೆಯೇ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ

Smartphone Tips: ಸ್ಮಾರ್ಟ್​ಫೋನ್​ಗಳಲ್ಲಿ ಕೆಲವು ಆ್ಯಪ್​ಗಳು ಸ್ವಯಂಚಾಲಿತವಾಗಿ ಅಪ್​ಡೇಟ್ ಆಗುತ್ತವೆ. ಇದರಿಂದಾಗಿ ಇಂಟರ್ನೆಟ್ ಡೇಟಾ ಬೇಗನೆ ಖಾಲಿ ಆಗುತ್ತದೆ. ಅದಕ್ಕಾಗಿಯೇ ನೀವು ಅಪ್ಲಿಕೇಶನ್ ಸೆಟ್ಟಿಂಗ್‌ಗಳಿಗೆ ತೆರಳಿ ಅಟೋಮೆಟಿಕ್ ಡೌನ್‌ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ವೈಫೈ ಬಳಸುವಾಗ ಅಪ್ಲಿಕೇಶನ್‌ಗಳನ್ನು ನವೀಕರಿಸುವುದು ಉತ್ತಮ.

ನಿಮ್ಮ ಮೊಬೈಲ್ ಡೇಟಾ ಬೇಗನೆ ಖಾಲಿಯಾಗುತ್ತಿದೆಯೇ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ
Mobile Data
Vinay Bhat
|

Updated on:Sep 26, 2023 | 1:04 PM

Share

ಸ್ಮಾರ್ಟ್​ಫೋನ್ (Smartphone) ಇಂದು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ನಮ್ಮ ಜೊತೆಗೆ ಇರುವುದರಿಂದ ಇದು ಜೀವನದ ಭಾಗವಾಗಿಬಿಟ್ಟಿವೆ. ಇಂಟರ್ನೆಟ್ ಬೆಲೆ ಏರುತ್ತಿದ್ದರೂ ಇದರ ಬಳಕೆ ಮಾತ್ರ ಹೆಚ್ಚುತ್ತಲೇ ಇದೆ. ಆದರೆ ಕೆಲವು ಕಾರಣಗಳಿಂದಾಗಿ ನಾವು ಬಳಸುವ ಮೊಬೈಲ್ ಡೇಟಾ ತ್ವರಿತವಾಗಿ ಖಾಲಿ ಆಗುತ್ತದೆ. ನಿಮಗೂ ಇದೇರೀತಿ ಆಗುತ್ತಿದ್ದರೆ ಚಿಂತಿಸಬೇಕಿಲ್ಲ. ಈ ಸಮಸ್ಯೆ ನಿವಾರಣೆಗೆ ಇಲ್ಲಿದೆ ನೋಡಿ ಟ್ರಿಕ್.

ಸ್ಮಾರ್ಟ್​ಫೋನ್​ಗಳಲ್ಲಿ ಕೆಲವು ಆ್ಯಪ್​ಗಳು ಸ್ವಯಂಚಾಲಿತವಾಗಿ ಅಪ್​ಡೇಟ್ ಆಗುತ್ತವೆ. ಇದರಿಂದಾಗಿ ಇಂಟರ್ನೆಟ್ ಡೇಟಾ ಬೇಗನೆ ಖಾಲಿ ಆಗುತ್ತದೆ. ಅದಕ್ಕಾಗಿಯೇ ನೀವು ಅಪ್ಲಿಕೇಶನ್ ಸೆಟ್ಟಿಂಗ್‌ಗಳಿಗೆ ತೆರಳಿ ಅಟೋಮೆಟಿಕ್ ಡೌನ್‌ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ವೈಫೈ ಬಳಸುವಾಗ ಅಪ್ಲಿಕೇಶನ್‌ಗಳನ್ನು ನವೀಕರಿಸುವುದು ಉತ್ತಮ.

ಈ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳಲ್ಲಿ ಇನ್ನುಂದೆ ವಾಟ್ಸ್​ಆ್ಯಪ್ ಉಪಯೋಗಿಸಲು ಆಗಲ್ಲ: ಇಲ್ಲಿದೆ ಪಟ್ಟಿ

ಇದನ್ನೂ ಓದಿ
Image
ಹೊಸ ವೇರಿಯೆಂಟ್​ನಲ್ಲಿ ಬಿಡುಗಡೆ ಆಗಿದೆ ವಿವೋ Y56 5G ಫೋನ್: ಬೆಲೆ ಕೇವಲ...
Image
ಬರೋಬ್ಬರಿ 14GB ಡೇಟಾ, ಅನಿಯಮಿತ ಕರೆ: ಜಿಯೋದ ಈ ಬಂಪರ್ ಪ್ಲಾನ್ ಗೊತ್ತೇ?
Image
ನೋಟ್ 13 ಸರಣಿ ಬಿಡುಗಡೆ ಬೆನ್ನಲ್ಲೇ ನೋಟ್ 12ಗೆ ಬಂಪರ್ ಡಿಸ್ಕೌಂಟ್
Image
ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ?: ಈ ತಪ್ಪುಗಳನ್ನು ಮಾಡಬೇಡಿ

ಆಂಡ್ರಾಯ್ಡ್ ಫೋನ್‌ಗಳು ಡೇಟಾ ಉಳಿತಾಯ ಮೋಡ್ ಎಂಬ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಆಯ್ಕೆಯನ್ನು ಹೊಂದಿರುವವರು ಅದನ್ನು ಸಕ್ರಿಯಗೊಳಿಸಿದರೆ ಡೇಟಾವನ್ನು ಉಳಿಸಬಹುದು. ಡೇಟಾ ಸೇವಿಂಗ್ ಮೋಡ್ ವೈಶಿಷ್ಟ್ಯದ ಸಹಾಯದಿಂದ, ಸಾಧ್ಯವಾದಷ್ಟು ಡೇಟಾವನ್ನು ಉಳಿಸಲು ಅವಕಾಶವಿದೆ. ಇತ್ತೀಚಿಗೆ ಗೂಗಲ್ ಮ್ಯಾಪ್ ಬಳಕೆ ತುಂಬಾ ಹೆಚ್ಚಾಗಿದೆ. ಇವುಗಳು ಹೆಚ್ಚಿನ ಡೇಟಾವನ್ನು ಸಹ ತಿನ್ನುತ್ತದೆ. ಆದರೆ, ಇಂತಹ ಆ್ಯಪ್​ಗಳನ್ನು ಆಫ್ ಲೈನ್ ಮೋಡ್​ನಲ್ಲಿ ಬಳಸಬೇಕೇ ಹೊರತು ಆನ್ ಲೈನ್ ಮೋಡ್​ನಲ್ಲಿ ಅಲ್ಲ. ಇದು ಇಂಟರ್ನೆಟ್ ಡೇಟಾವನ್ನು ಸಾಧ್ಯವಾದಷ್ಟು ಉಳಿಸುತ್ತದೆ.

ನಾವು ಸಾಮಾನ್ಯವಾಗಿ ನಮ್ಮ ಪ್ರಯಾಣದ ಸಮಯದಲ್ಲಿ OTT ಪ್ಲಾಟ್‌ಫಾರ್ಮ್‌ಗಳು ಅಥವಾ ಯೂಟ್ಯೂಬ್​ನಲ್ಲಿ ವಿಡಿಯೋಗಳನ್ನು ಸ್ಟ್ರೀಮ್ ಮಾಡುತ್ತೇವೆ. ಆದರೆ, ಅದರ ಹೊರತಾಗಿ ವೈಫೈ ಎಲ್ಲಿಯಾದರೂ ಲಭ್ಯವಿದ್ದಾಗ ಕೆಲವು ವಿಡಿಯೋಗಳನ್ನು ಡೌನ್​ಲೋಡ್ ಮಾಡಿಟ್ಟರೆ ಆಫ್‌ಲೈನ್ ಮೋಡ್‌ನಲ್ಲಿ ವೀಕ್ಷಿಸಿ ಮೊಬೈಲ್ ಫೋನ್ ಡೇಟಾವನ್ನು ಉಳಿಸಬಹುದು.

ಡೇಟಾ ಖಾಲಿಯಾಗಲು ಮತ್ತೊಂದು ಪ್ರಮುಖ ಕಾರಣವೆಂದರೆ ವಾಟ್ಸ್​ಆ್ಯಪ್​ನಲ್ಲಿ ಸಿಕ್ಕ ಸಿಕ್ಕ ಫೋಟೋ, ವಿಡಿಯೋಗಳನ್ನು ಡೌನ್‌ಲೋಡ್ ಮಾಡುವುದು. ವಿಡಿಯೋಗಳು ಮತ್ತು ಫೋಟೋಗಳನ್ನು ಅಟೋಮೆಟಿಕ್ ಡೌನ್​ಲೋಡ್ ಆಯ್ಕೆಯಿಂದ ತೆಗೆಯಿರಿ. ಇಲ್ಲವಾದರೆ ಇದು ಡೇಟಾವನ್ನು ವೇಗವಾಗಿ ಪೂರ್ಣಗೊಳಿಸುತ್ತದೆ. ಆದ್ದರಿಂದ ನೀವು ವಾಟ್ಸ್​ಆ್ಯಪ್ ಸೆಟ್ಟಿಂಗ್‌ಗಳಿಗೆ ಹೋಗಿ ಸ್ವಯಂಚಾಲಿತ ಡೌನ್‌ಲೋಡ್ ಅನ್ನು ಆಫ್ ಮಾಡುವ ಮೂಲಕ ಡೇಟಾವನ್ನು ಉಳಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Tue, 26 September 23

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ