ಈ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳಲ್ಲಿ ಇನ್ನುಂದೆ ವಾಟ್ಸ್​ಆ್ಯಪ್ ಉಪಯೋಗಿಸಲು ಆಗಲ್ಲ: ಇಲ್ಲಿದೆ ಪಟ್ಟಿ

WhatsApp will end support for older Android phones: ವಾಟ್ಸ್​ಆ್ಯಪ್ ಈ ಫೋನುಗಳಲ್ಲಿ ಕಾರ್ಯನಿವರ್ಹಿಸುವುದನ್ನು ನಿಲ್ಲಿಸಿದರೆ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು, ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯ ಆಗುವುದಿಲ್ಲ. ಯಾವುದೇ ಇತರ ವಾಟ್ಸ್​ಆ್ಯಪ್ ವೈಶಿಷ್ಟ್ಯಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

ಈ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳಲ್ಲಿ ಇನ್ನುಂದೆ ವಾಟ್ಸ್​ಆ್ಯಪ್ ಉಪಯೋಗಿಸಲು ಆಗಲ್ಲ: ಇಲ್ಲಿದೆ ಪಟ್ಟಿ
WhatsApp
Follow us
Vinay Bhat
|

Updated on: Sep 25, 2023 | 1:10 PM

ಬಳಕೆದಾರರಿಗೆ ಅನುಕೂಲವಾಗುವಂತಹ ಫೀಚರ್, ಗೌಪ್ಯತೆ ಮತ್ತು ಸುರಕ್ಷತೆಯನ್ನು ಸುಧಾರಿಸಲು ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತದೆ. ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ಸೇರಿದಂತೆ ಎಲ್ಲಾ ವಾಟ್ಸ್​ಆ್ಯಪ್ ಆವೃತ್ತಿಗಳು ಹೊಸ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಹೊಂದಿಕೊಳ್ಳಲು ಪ್ರತಿ ತಿಂಗಳು ಹೊಸ ಸಿಸ್ಟಮ್ ನವೀಕರಣಗಳನ್ನು ಸ್ವೀಕರಿಸುತ್ತವೆ. ವಾಟ್ಸ್​​ಆ್ಯಪ್ ಹೊಸ ಅಪ್‌ಡೇಟ್‌ಗಳೊಂದಿಗೆ ಬಂದಾಗ ಅದು ಕೆಲ ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಬೆಂಬಲ ಕಳೆದುಕೊಳ್ಳುತ್ತದೆ. ಇದೀಗ ವಾಟ್ಸ್​​ಆ್ಯಪ್ ಅಕ್ಟೋಬರ್ 24 ರ ನಂತರ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್‌ಫೋನ್‌ಗಳಲ್ಲಿ ತನ್ನ ಬೆಂಬಲವನ್ನು ಕೊನೆಗೊಳಿಸುವುದಾಗಿ ಹೇಳಿದೆ.

“ಈಗಲೂ ಕೆಲವು ಜನರು ತಮ್ಮ ಸ್ಮಾರ್ಟ್​ಫೋನ್​ಗಳನ್ನು ಅಪ್ಡೇಟ್ ಮಾಡದೆ ಅಥವಾ ಹಳೆಯ ಸಾಫ್ಟ್‌ವೇರ್ ಬಳಸುತ್ತಿರುವುದು ಕಂಡುಬಂದಿದೆ. ಈ ಮೊಬೈಲ್​ಗಳು ಇತ್ತೀಚಿನ ಭದ್ರತಾ ನವೀಕರಣಗಳನ್ನು ಹೊಂದಿಲ್ಲದಿರಬಹುದು. ವಾಟ್ಸ್​ಆ್ಯಪ್ ಮುಂದಿನ ನೂತನ ಅಪ್ಡೇಟ್​ಗಾಗಿ ಕೆಲ ಫೋನುಗಳಲ್ಲಿ ಕಾರ್ಯಚರಣೆ ನಿಲ್ಲಿಸಲಿದೆ,” ಎಂದು ವಾಟ್ಸ್​ಆ್ಯಪ್ FAQ ನಲ್ಲಿ ಬರೆದುಕೊಂಡಿದೆ.

ಸಿದ್ಧರಾಗಿ: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗುತ್ತಿದೆ ಅತಿ ದೊಡ್ಡ ಬಿಗ್ ಬಿಲಿಯನ್ ಡೇಸ್ ಸೇಲ್ 2023

ಇದನ್ನೂ ಓದಿ
Image
ಎರಡೇ ದಿನ ಬಾಕಿ: ಸೆಪ್ಟೆಂಬರ್ 26ಕ್ಕೆ ಲಾವಾ ಬ್ಲೇಜ್ ಪ್ರೊ 5G ಬಿಡುಗಡೆ
Image
ಇಲ್ಲಿದೆ 15,000 ರೂ. ಒಳಗಿನ ಆಕರ್ಷಕ ಸ್ಮಾರ್ಟ್​ಫೋನ್ಸ್
Image
ಐಫೋನ್ 15 ಸರಣಿಯ ಬಾಕ್ಸ್​ನಲ್ಲೇ ಇದೆ ಹೈ-ಸೆಕ್ಯುರಿಟಿ ಸಿಸ್ಟಮ್: ಏನದು ನೋಡಿ
Image
ಅಮೆಜಾನ್​ನಲ್ಲಿ ಶುರುವಾಗುತ್ತಿದೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023

ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿರುವ ಫೋನ್‌ಗಳ ಪಟ್ಟಿ:

  • ನೆಕ್ಸಸ್ 7 (ಆಂಡ್ರಾಯ್ಡ್ 4.2 ಗೆ ಅಪ್‌ಗ್ರೇಡ್ ಮಾಡಬಹುದು)
  • ಸ್ಯಾಮ್​ಸಂಗ್ ಗ್ಯಾಲಕ್ಸಿ ನೋಟ್ 2
  • ಹೆಚ್​ಟಿಸಿ ಒನ್
  • ಸೋನಿ ಎಕ್ಸ್‌ಪೀರಿಯಾ Z
  • ಎಲ್ಜಿ ಆಪ್ಟಿಮಸ್ ಜಿ ಪ್ರೊ
  • ಸ್ಯಾಮ್​ಸಂಗ್ ಗ್ಯಾಲಕ್ಸಿ S2
  • ಸ್ಯಾಮ್​ಸಂಗ್ ಗ್ಯಾಲಕ್ಸಿ ನೆಕ್ಸಸ್
  • ಹೆಚ್​ಟಿಸಿ ಸೆನ್ಸೇಶನ್
  • ಮೋಟೋರೊಲ Droid Razr
  • ಸೋನಿ ಎಕ್ಸ್‌ಪೀರಿಯಾ S2
  • ಮೋಟೋರೊಲ Xoom
  • ಸ್ಯಾಮ್​ಸಂಗ್ ಗ್ಯಾಲಕ್ಸಿ ಟ್ಯಾಬ್ 10.1
  • ಏಸಸ್ ಫೀ ಪ್ಯಾಡ್ ಟ್ರಾನ್ಸ್ಫಾರ್ಮರ್
  • ಏಸರ್ ಐಕೋನಿಯಾ ಟ್ಯಾಬ್ A5003
  • ಸ್ಯಾಮ್​ಸಂಗ್ ಗ್ಯಾಲಕ್ಸಿ S
  • ಹೆಚ್​ಟಿಸಿ ಡಿಸೈರ್ HD
  • ಎಲ್​ಜಿ Optimus 2X
  • ಸೋನಿ ಎರಿಕ್ಸಾನ್ ಎಕ್ಸ್‌ಪೀರಿಯಾ Arc3

ನಿಮ್ಮ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಹಳೆಯದರಲ್ಲಿ ಇದೆಯೇ ಅಥವಾ ಇಲ್ಲವೆ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಫೋನಿನಲ್ಲಿನ ಸೆಟ್ಟಿಂಗ್‌ಗಳ ಮೆನುವನ್ನು ನೀವು ಪರಿಶೀಲಿಸಬಹುದು. ಸೆಟ್ಟಿಂಗ್‌ಗೆ ತೆರಳಿ ಸಾಫ್ಟ್‌ವೇರ್ ಆಯ್ಕೆಗೆ ಹೋದರೆ ಅಲ್ಲಿ ಕಾಣಿಸುತ್ತದೆ. ವಾಟ್ಸ್​ಆ್ಯಪ್ ಈ ಫೋನುಗಳಲ್ಲಿ ಕಾರ್ಯನಿವರ್ಹಿಸುವುದನ್ನು ನಿಲ್ಲಿಸಿದರೆ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು, ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯ ಆಗುವುದಿಲ್ಲ. ಯಾವುದೇ ಇತರ ವಾಟ್ಸ್​ಆ್ಯಪ್ ವೈಶಿಷ್ಟ್ಯಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್