OnePlus 10 Pro 5G: ಈ ದಿನಾಂಕದಂದು ಭಾರತಕ್ಕೆ ಅಪ್ಪಳಿಸಲಿದ ಒನ್​ಪ್ಲಸ್ 10 ಪ್ರೊ ಸ್ಮಾರ್ಟ್​ಫೋನ್: ಏನು ವಿಶೇಷತೆ?

| Updated By: Vinay Bhat

Updated on: Mar 25, 2022 | 12:53 PM

ಬಹುನಿರೀಕ್ಷಿತ ಒನ್​ಪ್ಲಸ್ 10 ಪ್ರೊ 5ಜಿ (OnePlus 10 Pro 5G) ಫೋನನ್ನು ಇದೀಗ ಭಾರತದಲ್ಲಿ ಅನಾವರಣ ಮಾಡಲು ಕಂಪನಿ ತಯಾರಿ ನಡೆಸಿದೆ. ಇದೇ ಮಾರ್ಚ್ 31 ರಂದು ಒನ್​ಪ್ಲಸ್ ನಾರ್ಡ್ 10 ಪ್ರೊ ದೇಶದಲ್ಲಿ ಬಿಡುಗಡೆ ಆಗಲಿದೆ.

OnePlus 10 Pro 5G: ಈ ದಿನಾಂಕದಂದು ಭಾರತಕ್ಕೆ ಅಪ್ಪಳಿಸಲಿದ ಒನ್​ಪ್ಲಸ್ 10 ಪ್ರೊ ಸ್ಮಾರ್ಟ್​ಫೋನ್: ಏನು ವಿಶೇಷತೆ?
OnePlus 10 Pro 5G
Follow us on

ಭಾರತದಲ್ಲಿ ಇತ್ತೀಚೆಗಷ್ಟೆ ತನ್ನ ನಾರ್ಡ್ (OnePlus Nord) ಸರಣಿಯಲ್ಲಿ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಧೂಳೆಬ್ಬಿಸಿದ್ದ ಪ್ರಸಿದ್ಧ ಒನ್​ಪ್ಲಸ್ ಕಂಪನಿ ಇದೀಗ ಮತ್ತೊಮ್ಮ ಅಬ್ಬರಿಸಲು ತಯಾರಾಗಿದೆ. ತನ್ನ ಬಹುನಿರೀಕ್ಷಿತ ಒನ್​ಪ್ಲಸ್ 10 ಪ್ರೊ 5ಜಿ (OnePlus 10 Pro 5G) ಫೋನನ್ನು ಇದೀಗ ಭಾರತದಲ್ಲಿ ಅನಾವರಣ ಮಾಡಲು ಕಂಪನಿ ತಯಾರಿ ನಡೆಸಿದೆ. ಇದೇ ಮಾರ್ಚ್ 31 ರಂದು ಒನ್​ಪ್ಲಸ್ ನಾರ್ಡ್ 10 ಪ್ರೊ ದೇಶದಲ್ಲಿ ಬಿಡುಗಡೆ ಆಗಲಿದೆ. ಆ ದಿನ ಸಂಜೆ 7:30ಕ್ಕೆ ಲಾಂಚ್ ಕಾರ್ಯಕ್ರಮ ಶುರುವಾಗಲಿದೆ. ಈ ವರ್ಷದ ಆರಂಭದಲ್ಲಿ ಈ ಫೋನ್ ಚೀನಾ ಮಾರುಕಟ್ಟೆಗೆ ಪ್ರವೇಶಿಸಿತ್ತು. ಅಲ್ಲಿ ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಕೇಳಿಬಂದಿದ್ದು, ಹೀಗಾಗಿ ಇದೀಗ ಭಾರತದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಈ ಸ್ಮಾರ್ಟ್​ಫೋನ್​ನ (Smartphone) ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟಪ್ ಇದ್ದು ಅದು 48-ಮೆಗಾ ಪಿಕ್ಸೆಲ್, 50-ಮೆಗಾ ಪಿಕ್ಸೆಲ್​ನಿಂದ ಕೂಡಿದೆ. ಜೊತೆಗೆ ಅತ್ಯಂತ ಬಲಿಷ್ಠವಾದ ಸ್ನಾಪ್‌ಡ್ರಾಗನ್ 8 ಜನ್ 1 ಚಿಪ್‌ಸೆಟ್ ಅಳವಡಿಸಲಾಗಿದೆಯಂತೆ.

ಉಳಿದಂತೆ ಒನ್​ಪ್ಲಸ್ 10 ಪ್ರೊ 5G ಸ್ಮಾರ್ಟ್​​ಫೋನಿನ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ಈವರೆಗೆ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ಈ ಸಾಧನವು 2K ರೆಸಲ್ಯೂಶನ್ ಮತ್ತು 120Hz ನ ವೇರಿಯಬಲ್ ರಿಫ್ರೆಶ್ ದರದೊಂದಿಗೆ 6.7-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ ಎನ್ನಲಾಗಿದೆ ಜೊತೆಗೆ ಒನ್​​ಪ್ಲಸ್ 9 ಪ್ರೊ ಗಿಂತ ಅಪ್‌ಗ್ರೇಡ್ ಮಾಡಲಾದ ಕ್ಯಾಮೆರಾಗಳು ಇರುತ್ತವೆ ಎಂಬ ಮಾತಿದೆ. 48MP ಪ್ರಾಥಮಿಕ ಕ್ಯಾಮೆರಾ, 50MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್ ಬೆಂಬಲದೊಂದಿಗೆ 8MP ಟೆಲಿಫೋಟೋ ಲೆನ್ಸ್. ಸೆಲ್ಫಿಗಳಿಗಾಗಿ, ಪಂಚ್-ಹೋಲ್ ಕಟೌಟ್‌ನಲ್ಲಿ 32MP ಮುಂಭಾಗದ ಕ್ಯಾಮರಾವನ್ನು ಇರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಎಲ್ಲಾ ಮೂರು ಕೆಮೆರಾಗಳು ಎರಡನೇ ತಲೆಮಾರಿನ ಹ್ಯಾಸೆಲ್ಬ್ಲಾಡ್ ಪ್ರೋ ಮೋಡ್ ನ ಸಪೋರ್ಟ್ ಹೊಂದಿವೆ. ಇದು ಹ್ಯಾಸೆಲ್ಬ್ಲಾಡ್ ನ್ಯಾಚುರಲ್ ಕಲರ್ ಸಲೂಶನ್ ನೊಂದಿಗೆ ಪ್ರತಿಯೊಂದು ಕೆಮೆರಾಗೂ 12-ಬಿಟ್ ಆರ್ ಎ ಡಬ್ಲ್ಯೂ ಫೋಟೋ ಸೆರೆಹಿಡಿಯಲು ನೆರವಾಗುತ್ತದೆ.

ಇನ್ನು 80W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000 mAh ಬ್ಯಾಟರಿ ಘಟಕದಿಂದ ಫೋನ್ ಚಾಲಿತವಾಗುತ್ತದೆ. ಫೋನ್ ಐಪಿ68 ರೇಟಿಂಗ್, ಇನ್-ಡಿಸ್ ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಸಾಫ್ಟ್‌ವೇರ್ ಮುಂಭಾಗದಲ್ಲಿ ಆಂಡ್ರಾಯ್ಡ್ 12 ಓಎಸ್‌ನೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ. ಆರಂಭಿಕ ಹಂತದಲ್ಲಿ ಒನ್​ಪ್ಲಸ್ ಪ್ರೋ 5 ಬಣ್ಣಗಳಲ್ಲಿ ಲಭ್ಯವಿದೆ. ಅವು ಯಾವೆಂದರೆ; ವೊಲ್ಕ್ಯಾನಿಕ್ ಬ್ಲ್ಯಾಕ್, ಎಮರಾಲ್ಡ್ ಫಾರೆಸ್ಟ್, ಸಿಲ್ವರ್, ಲೈಟ್ ಬ್ಲ್ಯೂ ಮತ್ತು ಬಿಳಿ.

ಭಾರತದಲ್ಲಿ ಒನ್​ಪ್ಲಸ್ 10 ಪ್ರೊ ಬೆಲೆ ಎಷ್ಟು ಎಂಬುದು ಬಹಿರಂಗಗೊಂಡಿಲ್ಲ. ಆದರೆ, ಈ ವರ್ಷದ ಆರಂಭದಲ್ಲಿ ಇದು ಚೀನಾದಲ್ಲಿ ಬಿಡುಗಡೆ ಆಗಿದ್ದಾಗ ಇದರ ಬೆಲೆಯನ್ನು ನೋಡುವುದಾದರೆ, 8GB RAM + 128GB , 8GB RAM + 256GB ಮತ್ತು 12GB RAM + 256GB ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಆಗಿತ್ತು. ಇವು ಕ್ರಮವಾಗಿ 3,000 ಯುವಾನ್ (ಭಾರತದಲ್ಲಿ ಸುಮಾರು ರೂ. 35,000) ಮತ್ತು 3,999 ಯುವಾನ್ (ಸುಮಾರು ರೂ. 46,700) ನಡುವೆ ಬರಲಿದೆ. ಮಿಡ್-ಟೈರ್ ಮತ್ತು ಹೈ-ಎಂಡ್ ಎರಡೂ ರೂಪಾಂತರಗಳು 4,000 ಯುವಾನ್ (ಸುಮಾರು ರೂ. 46,700) ಮತ್ತು 4,999 ಯುವಾನ್ (ಸುಮಾರು ರೂ. 58,392) ನಡುವೆ ಬರುತ್ತವೆ.

TATA IPL 2022: ಐಪಿಎಲ್ 2022 ಅನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್

Amazon Mi Days: ಅಮೆಜಾನ್​ನಲ್ಲಿ ರೆಡ್ಮಿ, ಎಂಐ ಸ್ಮಾರ್ಟ್​​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್: ಈ ಆಫರ್ ಮಿಸ್ ಮಾಡ್ಬೇಡಿ