ಬಿಡುಗಡೆಗೆ ಒಂದು ದಿನ ಇರುವಾಗ ಲೀಕ್ ಆಯಿತು ಒನ್​ಪ್ಲಸ್ 12 ಫೋನಿನ ಎಲ್ಲ ಫೀಚರ್ಸ್

|

Updated on: Jan 22, 2024 | 12:36 PM

ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರು ಒನ್​ಪ್ಲಸ್ 12 ಭಾರತದ ಬೆಲೆಯನ್ನು X ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಪ್ರಕಾರ, ಈ ಫೋನಿನ 12/256GB ರೂಪಾಂತರ ರೂ. 64,999 ರಿಂದ ಪ್ರಾರಂಭವಾಗುತ್ತದೆ. 16/512GB ರೂಪಾಂತರಕ್ಕೆ ಬೆಲೆ 69,999 ರೂ. ಆಗಿದೆ.

ಬಿಡುಗಡೆಗೆ ಒಂದು ದಿನ ಇರುವಾಗ ಲೀಕ್ ಆಯಿತು ಒನ್​ಪ್ಲಸ್ 12 ಫೋನಿನ ಎಲ್ಲ ಫೀಚರ್ಸ್
OnePlus 12
Follow us on

ಒನ್​ಪ್ಲಸ್ ತನ್ನ ಈ ವರ್ಷದ ಬಹುನಿರೀಕ್ಷಿತ ಸ್ಮಾರ್ಟ್​ಫೋನ್ ಬಿಡುಗಡೆಗೆ ಎಲ್ಲ ತಯಾರಿ ನಡೆಸುತ್ತಿದೆ. ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ತನ್ನ ಒನ್​ಪ್ಲಸ್ 12 ಸರಣಿಯನ್ನು (OnePlus 12 Series) ಜನವರಿ 23 ರಂದು ಅನಾವರಣಗೊಳಿಸಲಿದೆ. ಇದರಲ್ಲಿ ಒನ್​ಪ್ಲಸ್ 12 ಮತ್ತು ಒನ್​ಪ್ಲಸ್ 12R ಎಂಬ ಎರಡು ಫೋನುಗಳಿವೆ. ಇದೀಗ ಈ ಫೋನುಗಳ ಬಿಡುಗಡೆಗೆ ಒಂದು ದಿನ ಇರುವಾಗ ಇದರ ಕೆಲ ಫೀಚರ್ಸ್ ಮತ್ತು ಬೆಲೆ ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ. ಟಿಪ್‌ಸ್ಟರ್‌ನಿಂದ ಬೆಲೆ ಮತ್ತು ಮಾರಾಟದ ದಿನಾಂಕವನ್ನು ಸೋರಿಕೆ ಮಾಡಲಾಗಿದೆ.

ಒನ್​ಪ್ಲಸ್ 12 ಬೆಲೆ, ಮಾರಾಟದ ದಿನಾಂಕ:

ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರು ಒನ್​ಪ್ಲಸ್ 12 ಭಾರತದ ಬೆಲೆಯನ್ನು X ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಪ್ರಕಾರ, ಈ ಫೋನಿನ 12/256GB ರೂಪಾಂತರ ರೂ. 64,999 ರಿಂದ ಪ್ರಾರಂಭವಾಗುತ್ತದೆ. 16/512GB ರೂಪಾಂತರಕ್ಕೆ ಬೆಲೆ 69,999 ರೂ. ಆಗಿದೆ.

Tech Tips: ಚಾರ್ಜರ್ ಅನ್ನು ಅಸಲಿ ಅಥವಾ ನಕಲಿ ಫೋನ್ ಗುರುತಿಸುವುದು ಹೇಗೆ?: ಇಲ್ಲಿದೆ ಟ್ರಿಕ್

ಇದನ್ನೂ ಓದಿ
ಪಾಸ್​ವರ್ಡ್​ ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಿ
ಫ್ಲಿಪ್​ಕಾರ್ಟ್​ನಲ್ಲಿ ನಿಮ್ಮ ಹಳೆಯ ಫೋನನ್ನು ಮಾರಾಟ ಮಾಡುವುದು ಹೇಗೆ?
ನಿಮ್ಮ ಗರ್ಲ್ ಫ್ರೆಂಡ್​ಗೆ ಗಿಫ್ಟ್ ಬೇಕಿದ್ದರೆ ಈ ಸ್ಮಾರ್ಟ್ ರಿಂಗ್ ಕೊಡಿ
2 ದಿನ ಬಾಕಿ: ಭಾರತಕ್ಕೆ ಬರುತ್ತಿದೆ ಒನ್​ಪ್ಲಸ್​ನ ಎರಡು ಬಲಿಷ್ಠ ​ಫೋನ್ಸ್

ಒನ್​ಪ್ಲಸ್ 12 ನ ಹಿಂದಿನ ವರ್ಷನ್, ಒನ್​ಪ್ಲಸ್ 11 ಫೋನಿನ 8/128GB ರೂಪಾಂತರ 56,999 ರೂ. ಗೆ ಬಿಡುಗಡೆಯಾಗಿತ್ತು. ಟಿಪ್‌ಸ್ಟರ್ ಮತ್ತೊಂದು ಪೋಸ್ಟ್ ಅನ್ನು ಸಹ ಮಾಡಿದ್ದಾರೆ. ಒನ್​ಪ್ಲಸ್ 12ರ ಮಾರಾಟವು ಭಾರತದಲ್ಲಿ ಜನವರಿ 30 ರಂದು ಪ್ರಾರಂಭವಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೆ, ಈ ಸರಣಿಯಲ್ಲಿ ಹೆಚ್ಚು ಕೈಗೆಟುಕುವ ರೂಪಾಂತರವಾದ ಒನ್​ಪ್ಲಸ್ 12R ಅನ್ನು ಖರೀದಿಸಲು ಬಯಸುವವರು ಫೆಬ್ರವರಿ ತಿಂಗಳವರೆಗೆ ಕಾಯಬೇಕಾಗಬಹುದಂತೆ.

ಒನ್​ಪ್ಲಸ್ 12 ಫೀಚರ್ಸ್:

ಡಿಸ್‌ಪ್ಲೇ: 6.82-ಇಂಚಿನ QHD+ 2K OLED LTPO, 120Hz ರಿಫ್ರೆಶ್ ದರ, 4,500 nits ಗರಿಷ್ಠ ಬ್ರೈಟ್​ನೆಸ್.

ಪ್ರೊಸೆಸರ್: ಕ್ವಾಲ್ಕಂ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್.

ಕ್ಯಾಮೆರಾಗಳು: ಒನ್​ಪ್ಲಸ್ 12 OIS ಜೊತೆಗೆ 50MP Sony LYT-808 ಪ್ರಾಥಮಿಕ ಕ್ಯಾಮೆರಾ, 48MP ಸೋನಿ IMX581 ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 64MP OV64B 3X ಪೆರಿಸ್ಕೋಪ್ ಲೆನ್ಸ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ 32MP ಸೋನಿ IMX615 ಫ್ರಂಟ್ ಕ್ಯಾಮೆರಾವನ್ನು ಸಹ ಹೊಂದಿದೆ.

ಬ್ಯಾಟರಿ: 5,400mAh ಬ್ಯಾಟರಿ, 100W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ.

ಈ ಫೋನ್‌ಗಳ ಮೊದಲ ಸೇಲ್​ ದಿನದಂದು ಇರುವ ಕೊಡುಗೆಗಳ ಕುರಿತು ಒನ್​ಪ್ಲಸ್ ಅಧಿಕೃತವಾಗಿ ಬಹಿರಂಗಪಡಿಸಿದೆ. ಇವುಗಳಲ್ಲಿ ಬ್ಯಾಂಕ್ ರಿಯಾಯಿತಿ ರೂ. 2,000, ವಿನಿಮಯ ಬೋನಸ್, ಯಾವುದೇ ವೆಚ್ಚವಿಲ್ಲದ EMI ಆಯ್ಕೆ ಸೇರಿದಂತೆ ಅನೇಕ ಆಫರ್​ಗಳು ಇರಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ