ಕುತೂಹಲ ಕೆರಳಿಸಿದ ಒನ್​ಪ್ಲಸ್ 12 5G ಸ್ಮಾರ್ಟ್​ಫೋನ್: ಬಿಡುಗಡೆ ಯಾವಾಗ?, ಏನಿದೆ ಫೀಚರ್ಸ್?

OnePlus 12 leaks start coming: ಒನ್​ಪ್ಲಸ್ 12 5G ಸ್ಮಾರ್ಟ್​ಫೋನ್ ಒನ್​ಪ್ಲಸ್ 11 5G ಯ ಉತ್ತರಾಧಿಕಾರಿಯಾಗಿದೆ. ಒನ್​ಪ್ಲಸ್ 11 5G ಭಾರತದಲ್ಲಿ 56,999 ರೂ. ಗಳಿಂದ ಪ್ರಾರಂಭವಾಗುತ್ತದೆ. ಆದರೆ, ಒನ್​ಪ್ಲಸ್ 12 5G ಎಷ್ಟು ಬೆಲೆ ಹೊಂದಿರಬಹುದು ಎಂಬುದು ತಿಳಿದುಬಂದಿಲ್ಲ.

ಕುತೂಹಲ ಕೆರಳಿಸಿದ ಒನ್​ಪ್ಲಸ್ 12 5G ಸ್ಮಾರ್ಟ್​ಫೋನ್: ಬಿಡುಗಡೆ ಯಾವಾಗ?, ಏನಿದೆ ಫೀಚರ್ಸ್?
OnePlus 12 5G

Updated on: Aug 26, 2023 | 1:33 PM

ಒನ್​ಪ್ಲಸ್ ಕಂಪನಿಯ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗುತ್ತಿದೆ ಎಂದಾದರೆ ಅದರಲ್ಲಿ ಏನಾದರು ಒಂದು ವಿಶೇಷತೆ ಇದ್ದೇ ಇರುತ್ತದೆ. ಅಪರೂಪಕ್ಕೆ ಆಕರ್ಷಕ ಮೊಬೈಲ್ ಅನ್ನು ಪರಿಚಯಿಸುವ ಒನ್​ಪ್ಲಸ್ ಇದೀಗ ತನ್ನ ಬಲಿಷ್ಠವಾದ ಒನ್​ಪ್ಲಸ್ 12 5ಜಿ (OnePlus 12 5G) ಸ್ಮಾರ್ಟ್​ಫೋನ್ ತಯಾರಿಯಲ್ಲಿದೆ. ಭಾರತದಲ್ಲಿ ಈ ಫೋನ್ ಈ ವರ್ಷಾಂತ್ಯಕ್ಕೆ ಅನಾವರಣಗೊಳ್ಳುವ ಸಾಧ್ಯತೆ ಇದೆ. ಒನ್​ಪ್ಲಸ್ ತನ್ನ ಮೊಟ್ಟ ಮೊದಲ ಒನ್​ಪ್ಲಸ್ ಓಪನ್ ಫೋಲ್ಡಬಲ್ ಫೋನ್ ಅನ್ನು ಮುಂಬರುವ ವಾರಗಳು ಅಥವಾ ತಿಂಗಳುಗಳಲ್ಲಿ ಬಿಡುಗಡೆ ಮಾಡುವ ಆಲೋಚನೆಯಲ್ಲಿರುವ ಕಾರಣ ಒನ್​ಪ್ಲಸ್ 12 5G ರಿಲೀಸ್ ಕೊಂಚ ತಡವಾಗಬಹುದು.

ಒನ್​ಪ್ಲಸ್ 12 5G ಸ್ಮಾರ್ಟ್​ಫೋನ್ ಒನ್​ಪ್ಲಸ್ 11 5G ಯ ಉತ್ತರಾಧಿಕಾರಿಯಾಗಿದೆ. ಒನ್​ಪ್ಲಸ್ 11 5G ಭಾರತದಲ್ಲಿ 56,999 ರೂ. ಗಳಿಂದ ಪ್ರಾರಂಭವಾಗುತ್ತದೆ. ಆದರೆ, ಒನ್​ಪ್ಲಸ್ 12 5G ಎಷ್ಟು ಬೆಲೆ ಹೊಂದಿರಬಹುದು ಎಂಬುದು ತಿಳಿದುಬಂದಿಲ್ಲ. ಕೆಲ ಫೀಚರ್ಸ್ ಕುರಿತ ಮಾಹಿತಿ ಮಾತ್ರ ಸೋರಿಕೆ ಆಗಿದೆ.

ಅತ್ಯಂತ ದುಬಾರಿ ಬೆಲೆಗೆ ಸೇಲ್ ಆಗಲಿದೆ ಒನ್​ಪ್ಲಸ್ ಕಂಪನಿಯ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್

ಇದನ್ನೂ ಓದಿ
ಜಿಯೋ ಬಳಕೆದಾರರಿಗೆ ಬಿಗ್ ಶಾಕ್: ಟ್ರೆಂಡಿಂಗ್ ಪ್ಲಾನ್ ಅನ್ನು ದಿಢೀರ್ ಸ್ಥಗಿತಗೊಳಿಸಿದ ಕಂಪನಿ
Train Ticket Booking: IRCTCಯಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಎಚ್ಚರಿಕೆ!​
ತಕ್ಷಣ ಬುಕ್ ಮಾಡಿ: ಊಹಿಸಲಾಗದಷ್ಟು ಕಡಿಮೆ ಬೆಲೆಗೆ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್​ಫೋನ್ ಮಾರಾಟ
ಗಾಬರಿ ಬೇಡ, ಎಐ ಟೆಕ್ನಾಲಜಿ ನಮ್ಮ ಉದ್ಯೋಗ ಕಸಿಯಲ್ಲ; ಹೆಚ್ಚು ಕೆಲಸ ಸೃಷ್ಟಿಸುತ್ತೆ: ಟಾಟಾ ಸನ್ಸ್ ಛೇರ್ಮನ್ ಅನಿಸಿಕೆ

ಮುಂಬರುವ ಒನ್​ಪ್ಲಸ್ 12 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಇದು ಕ್ವಾಲ್ಕಾಮ್‌ನ ಮುಂದಿನ-ಜನ್ ಸ್ನಾಪ್‌ಡ್ರಾಗನ್ 8 Gen 3 SoC ಅನ್ನು ಹೊಂದುವ ನಿರೀಕ್ಷೆಯಿದೆ. RAM ಸಾಮರ್ಥ್ಯದಲ್ಲಿ ಹೆಚ್ಚಳವಾಗಬಹುದು. ಒನ್​ಪ್ಲಸ್ 11 ಫೋನ್​ನಲ್ಲಿ 16GB ನೀಡಲಾಗಿತ್ತು. 6.70-ಇಂಚಿನ QHD+ AMOLED ಡಿಸ್ ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದೆ. ದೊಡ್ಡದಾದ 5,400mAh ಬ್ಯಾಟರಿಯೊಂದಿಗೆ ಅನಾವರಣಗೊಳ್ಳಲಿದ್ದು, ವೇಗದ 100W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಇರಲಿದೆ.

ಇನ್ನು ಚಾರ್ಜಿಂಗ್ ಅನ್ನು ವೇಗಗೊಳಿಸಲು, ಒನ್​ಪ್ಲಸ್ ಎರಡು ಬ್ಯಾಟರಿಗಳನ್ನು ಅಳವಡಿಸುವ ಸಾಧ್ಯತೆ ಇದೆ. ಒಂದು 5,400mAh ಆಗಿದ್ದರೆ ಮತ್ತೊಂದು 2,700mAh ಸಾಮರ್ಥ್ಯದೊಂದಿಗೆ ಇರಬಹುದು. ಕಂಪನಿಯು ಫೋನ್‌ನೊಂದಿಗೆ ಬಾಕ್ಸ್‌ನಲ್ಲಿ ಚಾರ್ಜರ್ ಅನ್ನು ನೀಡುತ್ತದೆ. ಇತ್ತೀಚೆಗೆ ಹಲವಾರು ದೊಡ್ಡ ಟೆಕ್ ಕಂಪನಿಗಳು ಸ್ಮಾರ್ಟ್​ಫೋನ್ ಜೊತೆಗೆ ಬಾಕ್ಸ್​ನಲ್ಲಿ ಚಾರ್ಜರ್ ಕೊಡುವುದನ್ನು ನಿಲ್ಲಿಸಿದೆ. ಆದರೆ, ಒನ್​ಪ್ಲಸ್ 12 ಜೊತೆಗೆ ಚಾರ್ಜರ್ ಕೂಡ ಇರಲಿದೆಯಂತೆ.

ಒನ್​ಪ್ಲಸ್ 12 ನ ಕ್ಯಾಮೆರಾ ಹಾರ್ಡ್‌ವೇರ್‌ ಅಪ್‌ಗ್ರೇಡ್ ಆಗುವ ನಿರೀಕ್ಷೆಯೂ ಇದೆ. ಹಿಂಬದಿ 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಪ್ರೈಮರಿ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಪೆರಿಸ್ಕೋಪ್ ಲೆನ್ಸ್‌ನೊಂದಿಗೆ ಸಜ್ಜುಗೊಂಡ 64-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ.

ಇದರಲ್ಲಿರುವ ಪ್ರಾಥಮಿಕ ಕ್ಯಾಮರಾ ಹೊಸ Sony IMX9xx ಸಂವೇದಕವನ್ನು ಹೊಂದಿರಬಹುದು, ಆದರೆ ಪೆರಿಸ್ಕೋಪ್ ಲೆನ್ಸ್ 3x ಆಪ್ಟಿಕಲ್ ಜೂಮ್ ಅನ್ನು ನೀಡುತ್ತದೆ. ಒನ್​ಪ್ಲಸ್ ಕ್ಯಾಮೆರಾ ಟ್ಯೂನಿಂಗ್‌ಗಾಗಿ Hasselblad ಜೊತೆ ತನ್ನ ಸಹಯೋಗವನ್ನು ಮುಂದುವರಿಸುವ ನಿರೀಕ್ಷೆಯಿದೆ. ಈ ಫೋನಿನ ಮುಂಭಾಗ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದೆ ಎಂಬ ಮಾತಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us