ಒನ್ಪ್ಲಸ್ (OnePlus) ಕಂಪನಿಯ ಬಹುನಿರೀಕ್ಷಿತ ಒನ್ಪ್ಲಸ್ ಏಸ್ 2 ಪ್ರೊ (OnePlus Ace 2 Pro) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮೊದಲಿಗೆ ಚೀನಾದಲ್ಲಿ ಬಿಡುಗಡೆ ಆಗಲಿರುವ ಈ ಫೋನಿನ ದಿನಾಂಕವನ್ನು ಕಂಪನಿ ಅಧಿಕೃತವಾಗಿ ಬಹಿರಂಗಪಡಿಸಿದೆ. ಒನ್ಪ್ಲಸ್ ಏಸ್ 2 ಪ್ರೊ ಮುಂದಿನ ವಾರ ಅನಾವರಣಗೊಳಿಸಲಾಗುವುದು ಎಂದು ಕಂಪನಿಯು ತನ್ನ ಮೈಕ್ರೋಬ್ಲಾಗಿಂಗ್ ಸೈಟ್ Weibo ಮೂಲಕ ಘೋಷಿಸಿದೆ. ಒನ್ಪ್ಲಸ್ನ ಹೊಸ ಫೋನ್‌ನ ಪ್ರಮುಖ ಫೀಚರ್ಸ್ ಆದ ಪ್ರೊಸೆಸರ್ ಮತ್ತು RAM ಅನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿದೆ. ಇದರ ಪ್ರಮುಖ ಹೈಲೈಟ್ ಎಂದರೆ ಇದು 24GB RAM ವರೆಗೆ ಲಭ್ಯವಿರುತ್ತದೆ.
Weibo ನಲ್ಲಿ ಹಂಚಿಕೊಂಡ ಟೀಸರ್ ಚಿತ್ರದ ಪ್ರಕಾರ, ಒನ್ಪ್ಲಸ್ ಏಸ್ 2 ಪ್ರೊ ಆಗಸ್ಟ್ 16 ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ. ಏಸ್ ಸರಣಿಯು ಚೀನಾಕ್ಕೆ ಮಾತ್ರ ಪ್ರತ್ಯೇಕವಾಗಿದೆ. ಇದು ವಿಭಿನ್ನ ಹೆಸರಿನೊಂದಿಗೆ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಆಗಲಿದೆಯಂತೆ. ಒನ್ಪ್ಲಸ್ ಏಸ್ 2 ಪ್ರೊ ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಒನ್ಪ್ಲಸ್ 11R ಎಂಬ ಹೆಸರಿನೊಂದಿಗೆ ಅನಾವರಣಗೊಳ್ಳಲಿದೆ.
ಮೊದಲ ದಿನವೇ ದಾಖಲೆಯ ಮಾರಾಟ ಕಂಡ ರೆಡ್ಮಿ 12 ಸರಣಿ: ಸೇಲ್ ಆಗಿದ್ದು ಎಷ್ಟು ಫೋನ್ ಗೊತ್ತೇ?
ಚಿಪ್‌ಸೆಟ್ : ಒನ್ಪ್ಲಸ್ ಏಸ್ 2 ಪ್ರೊ ಸ್ನಾಪ್‌ಡ್ರಾಗನ್ 8 Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಎಂದು ಒನ್ಪ್ಲಸ್ ದೃಢಪಡಿಸಿದೆ.
RAM ಮತ್ತು ಸಂಗ್ರಹಣೆ : ಕುತೂಹಲಕಾರಿಯಾಗಿ, ಒನ್ಪ್ಲಸ್ ಏಸ್ 2 ಪ್ರೊ 24GB RAM ಅನ್ನು ಪಡೆದುಕೊಂಡಿದೆ. ಈ ಫೋನ್ 8GB, 12GB ಮತ್ತು 16GB RAM ಆಯ್ಕೆಗಳಲ್ಲಿಯೂ ಲಭ್ಯವಿರುತ್ತದೆ. ನೀವು 1TB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯನ್ನು ನಿರೀಕ್ಷಿಸಬಹುದು.
ಕ್ಯಾಮೆರಾಗಳು : ಒನ್ಪ್ಲಸ್ ಏಸ್ 2 ಪ್ರೊ 50MP IMX890 ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ. ಇತರ ಕ್ಯಾಮೆರಾ ವಿಶೇಷತೆಗಳು ಇನ್ನೂ ಬಹಿರಂಗಗೊಳ್ಳಬೇಕಿದೆ. ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ನಲ್ಲಿ ಇರಬಹುದು.
ಡಿಸ್ ಪ್ಲೇ : ಒನ್ಪ್ಲಸ್ ಏಸ್ 2 ಪ್ರೊ 120Hz ರಿಫ್ರೆಶ್ ದರದೊಂದಿಗೆ 1.5K AMOLED ಡಿಸ್ ಪ್ಲೇಯನ್ನು ಹೊಂದಿದೆ ಎಂಬ ಮಾತಿದೆ.
ವೇಗದ ಚಾರ್ಜಿಂಗ್ : 5000mAh ಸಾಮರ್ಥ್ಯದ ಬ್ಯಾಟರಿ ಪವರ್ ಇರಲಿದ್ದು, 150W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಉಳಿದಂತೆ ಇದರ ಬೆಲೆ ಹಾಗೂ ಇತರೆ ಫೀಚರ್ಸ್ ಬಗ್ಗೆ ಮಾಹಿತ ತಿಳಿದುಬಂದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ