OnePlus Nord 3: ಭಾರತದಲ್ಲಿ ಬಹುನಿರೀಕ್ಷಿತ ಒನ್​ಪ್ಲಸ್ ನಾರ್ಡ್ 3, ನಾರ್ಡ್ CE 3 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು ನೋಡಿ

|

Updated on: Jul 06, 2023 | 11:27 AM

OnePlus Nord CE 3: ನಾರ್ಡ್ 3 ಮತ್ತು ನಾರ್ಡ್ CE 3 ಫೋನಿನ ಬೆಲೆಯ ಕುರಿತು ಹಾಗೂ ಸಂಪೂರ್ಣ ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ ನೋಡಿ. ಮೆರಾ, ಬ್ಯಾಟರಿ, ಪ್ರೊಸೆಸರ್ ಸೇರಿದಂತೆ ಎಲ್ಲ ಆಯ್ಕೆ ಬೆಲೆಗೆ ತಕ್ಕಂತೆ ನೀಡಲಾಗಿದೆ.

OnePlus Nord 3: ಭಾರತದಲ್ಲಿ ಬಹುನಿರೀಕ್ಷಿತ ಒನ್​ಪ್ಲಸ್ ನಾರ್ಡ್ 3, ನಾರ್ಡ್ CE 3 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು ನೋಡಿ
OnePlus Nord 3
Follow us on

ಪ್ರೀಮಿಯಂ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಪ್ರಸಿದ್ಧ ಒನ್​ಪ್ಲಸ್ (OnePlus) ಕಂಪನಿ ಭಾರತದಲ್ಲಿ ಎರಡು ಬಹುನಿರೀಕ್ಷಿತ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದೆ. ಒನ್​ಪ್ಲಸ್ ನಾರ್ಡ್ 3 5G (OnePlus Nord 3) ಮತ್ತು ಒನ್​ಪ್ಲಸ್ ನಾರ್ಡ್ CE 3 5G (OnePlus Nord CE 3) ಎಂಬ ಎರಡು ಫೋನನ್ನು ಕಂಪನಿ ದೇಶದಲ್ಲಿ ಅನಾವರಣಗೊಳಿಸಿದೆ. ಈ ಎರಡೂ ಫೋನ್​ನಲ್ಲಿ ಆಕರ್ಷಕ ಫೀಚರ್​ಗಳನ್ನು ನೀಡಲಾಗಿದ್ದು, ಮಧ್ಯಮ ಬೆಲೆಗೆ ಲಭ್ಯವಿದೆ. ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಸೇರಿದಂತೆ ಎಲ್ಲ ಆಯ್ಕೆ ಬೆಲೆಗೆ ತಕ್ಕಂತೆ ನೀಡಲಾಗಿದೆ. ಹಾಗಾದರೆ ನಾರ್ಡ್ 3 ಮತ್ತು ನಾರ್ಡ್ CE 3 ಫೋನಿನ ಬೆಲೆಯ ಕುರಿತು ಹಾಗೂ ಸಂಪೂರ್ಣ ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಒನ್​ಪ್ಲಸ್ ನಾರ್ಡ್ 3, ನಾರ್ಡ್ CE 3 ಬೆಲೆ:

ಒನ್​ಪ್ಲಸ್ ನಾರ್ಡ್ 3 5G ಸ್ಮಾರ್ಟ್​ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM + 128GB ವೇರಿಯೆಂಟ್​ಗೆ 33,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 16GB RAM + 256GB ಸ್ಟೋರೇಜ್ ರೂಪಾಂತರಕ್ಕೆ 37,999 ರೂ. ಇದೆ. ಇದು ಜುಲೈ 15 ರಿಂದ ಅಮೆಜಾನ್​ನಲ್ಲಿ ಖರೀದಿಗೆ ಸಿಗಲಿದೆ. ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ಮಾರಾಟ ಕಾಣಲಿದೆ.

ಇದನ್ನೂ ಓದಿ
Jio Bharat 4G: ಅತಿ ಕಡಿಮೆ ಬೆಲೆಗೆ ಜಿಯೋ ಭಾರತ್ 4ಜಿ ಫೋನ್ ಪರಿಚಯಿಸಿದ ರಿಲಯನ್ಸ್
OnePlus Nord 3: ಮತ್ತೊಂದು ಸ್ಟೈಲಿಶ್ ಫೋನ್ ತರುತ್ತಿದೆ ಒನ್​ಪ್ಲಸ್ ನಾರ್ಡ್
WhatsApp Ban: ಭಾರತದ ನಿಯಮ ಉಲ್ಲಂಘಿಸಿದ 65 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬಂದ್
Amazon Prime Day: ಹೊಸ ಫೋನ್​ ಬಿಡುಗಡೆ ಮತ್ತು ವಿಶೇಷ ಆಫರ್ ನೀಡುವ ಪ್ರೈಮ್ ಡೇ ಸೇಲ್

ಒನ್​ಪ್ಲಸ್ ನಾರ್ಡ್ CE 3 5G ಸ್ಮಾರ್ಟ್​ಫೋನ್ ಕೂಡ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM + 128GB ವೇರಿಯೆಂಟ್​ಗೆ 26,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 12GB RAM + 256GB ಸ್ಟೋರೇಜ್ ರೂಪಾಂತರಕ್ಕೆ 28,999 ರೂ. ಇದೆ. ಈ ಫೋನ್ ಆಗಸ್ಟ್​ನಲ್ಲಿ ಮಾರಾಟ ಕಾಣಲಿದೆ ಎಂದು ಕಂಪನಿ ಹೇಳಿದೆ.

Samsung Galaxy M34 5G: ಗ್ಯಾಜೆಟ್ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾದ Samsung ಸ್ಮಾರ್ಟ್​ಫೋನ್

ಒನ್​ಪ್ಲಸ್ ನಾರ್ಡ್ 3 5G ಫೀಚರ್ಸ್:

ಈ ಸ್ಮಾರ್ಟ್​ಫೋನ್ 6.74-ಇಂಚಿನ 120Hz ರಿಫ್ರೆಶ್​ರೇಟ್ ಇರುವ AMOLED ಡಿಸ್ ಪ್ಲೇಯನ್ನು ಹೊಂದಿದೆ. 93.5% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 9000 ಚಿಪ್‌ಸೆಟ್‌ ಮೂಲಕ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್​ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು, 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ನಾರ್ಟ್ 3 ಕ್ಯಾಮೆರಾ ಅದ್ಭುತವಾಗಿದೆ. ಪ್ರಾಥಮಿಕ ಕ್ಯಾಮೆರಾ 50MP ಸೋನಿ IMX890 ಸೆನ್ಸಾರ್ ಹೊಂದಿದೆ. 8MP ಅಲ್ಟ್ರಾ-ವೈಡ್ ಲೆನ್ಸ್, 2MP ಮ್ಯಾಕ್ರೋ ಕ್ಯಾಮೆತಾ ಮತ್ತು ಸೆಲ್ಫಿಗಳಿಗಾಗಿ 16MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಇತ್ತೀಚಿನ OxygenOS 13.1 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಒನ್​ಪ್ಲಸ್ ನಾರ್ಡ್ CE 3 5G ಫೀಚರ್ಸ್:

ಇದು 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ AMOLED ಡಿಸ್ ಪ್ಲೇಯನ್ನು ಹೊಂದಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 782G ಪ್ರೊಸೆಸರ್ ಅಳವಡಿಸಲಾಗಿದೆ. ಇದು 80W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ನಾರ್ಡ್ CE 3 ಹಿಂಭಾಗ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50MP, 8 MP ಅಲ್ಟ್ರಾವೈಡ್-ಆಂಗಲ್ ಕ್ಯಾಮೆರಾ ಮತ್ತು 2 MP ಮ್ಯಾಕ್ರೋ ಕ್ಯಾಮೆರಾ ಇದೆ. ಸೆಲ್ಫಿಗಾಗಿ ಇದು 16MP ಕ್ಯಾಮೆರಾವನ್ನು ಸೇರಿಸಲಾಗಿದೆ.

ಈ ಸ್ಮಾರ್ಟ್‌ಫೋನ್‌ಗಳ ಜೊತೆಗೆ, ಒನ್​ಪ್ಲಸ್​ನ ಹೊಸ ಒನ್​ಪ್ಲಸ್​ ನಾರ್ಡ್ ಬರ್ಡ್ಸ್ 2r ಅನ್ನು 2,199 ರೂ. ಗೆ ಬಿಡುಗಡೆ ಮಾಡಲಾಗಿದೆ. ಇದು 12.4mm ಡ್ರೈವರ್ಸ್, ಡ್ಯುಯಲ್ ಮೈಕ್‌ಗಳು ಮತ್ತು ಹೊರಗಿನ ಶಬ್ದವನ್ನು ಫಿಲ್ಟರ್ ಮಾಡುವ ಹಾಗೂ ಧ್ವನಿಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವ ‘AI- ಕ್ಲಿಯರ್ ಕಾಲ್ ಅಲ್ಗಾರಿದಮ್’ ನಿಂದ ಚಾಲಿತವಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ