OnePlus Nord CE 3 Lite: ಭಾರತದಲ್ಲಿಂದು 108MP ಕ್ಯಾಮೆರಾದ ಬಹುನಿರೀಕ್ಷಿತ ನಾರ್ಡ್ CE 3 ಲೈಟ್ ಬಿಡುಗಡೆ

|

Updated on: Apr 04, 2023 | 6:58 AM

ಒನ್​ಪ್ಲಸ್ ಕಂಪನಿ ಬಹುನಿರೀಕ್ಷಿತ ಹೊಸ ಒನ್‌ಪ್ಲಸ್‌ ನಾರ್ಡ್‌ ಸಿಇ 3 ಲೈಟ್ (OnePlus Nord CE 3 Lite) ಸ್ಮಾರ್ಟ್‌ಫೋನ್‌ ಅನ್ನು ಇಂದು ಭಾರತದಲ್ಲಿ ಅನಾವರಣ ಮಾಡುತ್ತಿದೆ. ವಿಶೇಷ ಎಂದರೆ ಇದರಲ್ಲಿ ಬರೋಬ್ಬರಿ 108 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

OnePlus Nord CE 3 Lite: ಭಾರತದಲ್ಲಿಂದು 108MP ಕ್ಯಾಮೆರಾದ ಬಹುನಿರೀಕ್ಷಿತ ನಾರ್ಡ್ CE 3 ಲೈಟ್ ಬಿಡುಗಡೆ
OnePlus Nord CE 3 Lite
Follow us on

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಈಗ ಕ್ಯಾಮೆರಾ ಫೋನ್​ಗಳದ್ದೇ ಹವಾ. ಡಿಎಸ್​ಎಲ್​ಆರ್ ರೇಂಜ್​ಗೆ ಕ್ವಾಲಿಟಿ ನೀಡುವ ಫೋಟೋಗಳು ಈಗ ಮೊಬೈಲ್​ನಲ್ಲಿ ಬರುತ್ತದೆ. ಭಾರತದಲ್ಲಿ ಈ ಕ್ಯಾಮೆರಾ ಫೋನ್​ಗಳು ಎಗ್ಗಿಲ್ಲದೆ ಸೇಲ್ ಆಗುತ್ತದೆ. ಇದಕ್ಕಾಗಿಯೆ ಕಂಪನಿಗಳು ದೇಶದಲ್ಲಿ ಅತಿ ಹೆಚ್ಚು ಅತ್ಯುತ್ತಮ ಕ್ಯಾಮೆರಾ ಕ್ವಾಲಿಟಿ ಇರುವ ಮೊಬೈಲ್ ಅನ್ನು ಅನಾವರಣ ಮಾಡುತ್ತಿದೆ. ಅದೇ ಸಾಲಿಗೆ ಇದೀಗ ಒನ್​ಪ್ಲಸ್ ಕೂಡ ಸೇರ್ಪಡೆ ಆಗುತ್ತಿದೆ. ಒನ್​ಪ್ಲಸ್ ಕಂಪನಿ ಬಹುನಿರೀಕ್ಷಿತ ಹೊಸ ಒನ್‌ಪ್ಲಸ್‌ ನಾರ್ಡ್‌ ಸಿಇ 3 ಲೈಟ್ (OnePlus Nord CE 3 Lite) ಸ್ಮಾರ್ಟ್‌ಫೋನ್‌ ಅನ್ನು ಇಂದು ಭಾರತದಲ್ಲಿ ಅನಾವರಣ ಮಾಡುತ್ತಿದೆ. ವಿಶೇಷ ಎಂದರೆ ಇದರಲ್ಲಿ ಬರೋಬ್ಬರಿ 108 ಮೆಗಾಫಿಕ್ಸೆಲ್ ಕ್ಯಾಮೆರಾ (108MP Camera) ನೀಡಲಾಗಿದೆ.

ನಾರ್ಡ್ CE 3 ಲೈಟ್ ಕಳೆದ ವರ್ಷ ಬಿಡುಗಡೆ ಆಗಿ ಸಾಕಷ್ಟು ಬೇಡಿಕೆ ಸೃಷ್ಟಿಸಿದ್ದ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್ 5G ಯ ​​ಉತ್ತರಾಧಿಕಾರಿಯಾಗಿದೆ. ಈ ಹಿಂದಿನ ಸರಣಿಯಂತೆ ಇದುಕೂಡ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಆಕರ್ಷಕ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ ಪವರ್, ಬಲಿಷ್ಠ ಪ್ರೊಸೆಸರ್‌ ಬಲವನ್ನು ಹೊಂದಿರಲಿದೆ. ಈ ಫೋನ್‌ ಏಪ್ರಿಲ್ 4 ಇಂದು ಮಧ್ಯಾಹ್ನ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತಿದೆ. ಹಾಗಾದರೆ, ನಾರ್ಡ್ CE 3 ಲೈಟ್ ಫೀಚರ್ಸ ಏನಿರಬಹುದು ಎಂಬುದನ್ನು ನೋಡೋಣ.

ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಬಹುನಿರೀಕ್ಷಿತ ಒನ್​ಪ್ಲಸ್ ನಾರ್ಡ್ CE 3 ಲೈಟ್ ಸ್ಮಾರ್ಟ್​ಫೋನ್​ನಲ್ಲಿ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ6.7 ಇಂಚಿನ ಅಮೋಲೆಡ್‌ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಇರುವ ಸಾಧ್ಯತೆ ಇದೆ. ಇದು 120Hz ರಿಫ್ರೆಶ್ ರೇಟ್‌ ಆಯ್ಕೆ ನೀಡಲಾಗಿದೆ. ಜೊತೆಗೆ ಬಯೋಮೆಟ್ರಿಕ್ ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಇನ್‌ಡಿಸ್‌ಪ್ಲೇ ನಲ್ಲಿ ನೀಡಲಾಗಿದೆಯಂತೆ.

ಇದನ್ನೂ ಓದಿ
Nokia C12 Plus: ಭಾರತದಲ್ಲಿ ಕೇವಲ 7,999 ರೂ. ಗೆ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ನೋಕಿಯಾ: ಭರ್ಜರಿ ಸೇಲ್ ಖಚಿತ
OnePlus Nord CE 2 Lite 5G: ಬಂಪರ್ ಆಫರ್: ಒನ್​ಪ್ಲಸ್​ನ ಈ ಸ್ಮಾರ್ಟ್​ಫೋನನ್ನು ಕೇವಲ 1,049 ರೂ. ಗೆ ಖರೀದಿಸಿ: ಮಿಸ್ ಮಾಡ್ಬೇಡಿ
WhatsApp Ban: ನಿಷೇಧವಾದ ವಾಟ್ಸ್​ಆ್ಯಪ್ ಖಾತೆಯನ್ನು ಮರಳಿ ಪಡೆಯುವುದು ಹೇಗೆ?
WhatsApp Ban: ಭಾರತದಲ್ಲಿ ಬರೋಬ್ಬರಿ 45 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಖಾತೆ ಬ್ಯಾನ್ ಮಾಡಿದ ಕಂಪನಿ: ಎಚ್ಚರ ವಹಿಸಿ

OnePlus 10R 5G: 150W SuperVOOC ಚಾರ್ಜರ್​ನ ಒನ್​ಪ್ಲಸ್‌ 10R ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಆಫರ್ ಮಿಸ್ ಮಾಡ್ಬೇಡಿ

ಈ ಫೋನಿನಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಇದ್ದರೂ ಅಚ್ಚರಿ ಪಡಬೇಕಿಲ್ಲ. ಬಲಿಷ್ಠವಾದ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 12GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಬರಬಹುದು ಎನ್ನಲಾಗಿದೆ. ಆಂಡ್ರಾಯ್ಡ್ 13 ಬಂಬಲ ಪಡೆದಿರಲಿದೆ. ಮೈಕ್ರೊ ಎಸ್​ಡಿ ಕಾರ್ಡ್ ಮೂಲಕ ಸ್ಟೋರೇಜ್ ಅನ್ನು ಹೆಚ್ಚಿಸಬಹುದು.

ಒನ್​ಪ್ಲಸ್ ನಾರ್ಡ್ CE 3 ಲೈಟ್ ಕ್ಯಾಮೆರಾ ವಿ‍ಚಾರಕ್ಕೆ ಬಂದರೆ, ಇದರಲ್ಲಿರುವ ಹಿಂಭಾಗದ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ ಸಾಮರ್ಥ್ಯದಲ್ಲಿ ಇರಲಿದೆ ಎಂದು ಕಂಪನಿ ಹೇಳಿದೆ. ಇದು ಸೋನಿ IMX890 ಸೆನ್ಸಾರ್ ಸಾಮರ್ಥ್ಯ ಇರುವ ಸಾಧ್ಯತೆ ಇದೆ. ಹಾಗೆಯೆ 2 ಮೆಗಾಪಿಕ್ಸೆಲ್​ನ ಡ್ಯುಯೆಲ್ ಕ್ಯಾಮೆರಾ ಇರಲಿದ್ದು ಇದು ಅಲ್ಟ್ರಾ ವೈಡ್ ಹಾಗೂ ಮ್ಯಾಕ್ರೋ ಕ್ಯಾಮೆರಾ ಆಗಿರಲಿದೆ. ಮುಂಭಾಗ ವಿಡಿಯೋ ಕರೆ ಮತ್ತು ಸೆಲ್ಫಿಗಾಗಿ ಎಷ್ಟು ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂಬುದು ಬಹಿರಂಗವಾಗಿಲ್ಲ.

ಈ ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 5,000mAh ಬ್ಯಾಟರಿಯನ್ನು ಒಳಗೊಂಡಿರುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಇದು 67W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿರುವ ಜೊತೆಗೆ ಹಾಟ್‌ಸ್ಪಾಟ್‌, ಬ್ಲೂಟೂತ್‌ 5.1, ವೈಫೈ, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಎಂದಿನಂತೆ ಇರಲಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ ಇನ್ನು ಬಹಿರಂಗವಾಗಿಲ್ಲ. ಆದರೆ ಇದು ಭಾರತದಲ್ಲಿ 25,000 ರೂ. ಒಳಗಡೆ ಇರಬಹುದು. ಕಳೆದ ವರ್ಷ ಬಿಡುಗಡೆ ಆಗಿದ್ದ ನಾರ್ಡ್‌ CE 2 ಲೈಟ್ ಬೆಲೆ 19,999 ರೂ. ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ