Nokia C12 Plus: ಭಾರತದಲ್ಲಿ ಕೇವಲ 7,999 ರೂ. ಗೆ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ನೋಕಿಯಾ: ಭರ್ಜರಿ ಸೇಲ್ ಖಚಿತ

ನೋಕಿಯಾ ಆಗಾಗ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ದೇಶದಲ್ಲಿ ಬಜೆಟ್ ಬೆಲೆಗೆ ನೋಕಿಯಾ ಕಂಪನಿ ಹೊಸ ನೋಕಿಯಾ ಸಿ 12 ಪ್ಲಸ್ (Nokia C12 Plus) ಫೋನನ್ನು ಅನಾವರಣ ಮಾಡಿದೆ.

Nokia C12 Plus: ಭಾರತದಲ್ಲಿ ಕೇವಲ 7,999 ರೂ. ಗೆ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ನೋಕಿಯಾ: ಭರ್ಜರಿ ಸೇಲ್ ಖಚಿತ
Nokia C12 Plus
Follow us
Vinay Bhat
|

Updated on:Apr 03, 2023 | 2:34 PM

ನೋಕಿಯಾ (Nokia) ಕಂಪನಿಯ ಸ್ಮಾರ್ಟ್​ಫೋನ್​ಗಳಿಗೆ ಭಾರತದಲ್ಲಿ ಹಿಂದಿನ ರೀತಿ ದೊಡ್ಟ ಮಟ್ಟದ ಮಾರ್ಕೆಟ್ ಇಲ್ಲ. ಒಂದು ಕಾಲದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಈಗ ಹೇಳಹೆಸರಿಲ್ಲದಂತಾಗಿದೆ. ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ, ವಿವೋ ಬ್ರ್ಯಾಂಡ್​ಗಳು ಬಂದ ಮೇಲೆ ನೋಕಿಯಾ ಮೊಬೈಲ್​ಗಳ ಬೇಡಿಕೆ ಕುಸಿಯುತ್ತಾ ಬಂತು. ಹೀಗಿದ್ದರೂ ನೋಕಿಯಾ ಆಗಾಗ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ದೇಶದಲ್ಲಿ ಬಜೆಟ್ ಬೆಲೆಗೆ ನೋಕಿಯಾ ಕಂಪನಿ ಹೊಸ ನೋಕಿಯಾ ಸಿ 12 ಪ್ಲಸ್ (Nokia C12 Plus) ಫೋನನ್ನು ಅನಾವರಣ ಮಾಡಿದೆ. ಬೆಲೆಗೆ ತಕ್ಕಂತೆ ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್​​ಫೋನಿನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಸದ್ಯಕ್ಕೆ ಒಂದು ಸ್ಟೋರೆಜ್ ಆಯ್ಕೆಯಲ್ಲಿ ನೋಕಿಯಾ C12 ಪ್ಲಸ್ ಸ್ಮಾರ್ಟ್​ಫೋನ್ ರಿಲೀಸ್ ಆಗಿದೆ. ಇದರ 2GB RAM ಮತ್ತು 32GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 7,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಯಾವಾಗಿನಿಂದ ಖರೀದಿಗೆ ಸಿಗಲಿದೆ ಎಂಬ ಬಗ್ಗೆ ಕಂಪನಿ ಇನ್ನೂ ಮಾಹಿತಿ ನೀಡಿಲ್ಲ.

boAt Lunar Connect Pro: ಸ್ಟೈಲಿಶ್ ಜತೆಗೆ ಸ್ಮಾರ್ಟ್ ವಾಚ್ ಪ್ರಿಯರಿಗಾಗಿ ಹೊಸ ಬೋಟ್ ವಾಚ್

ಇದನ್ನೂ ಓದಿ
Image
OnePlus Nord CE 2 Lite 5G: ಬಂಪರ್ ಆಫರ್: ಒನ್​ಪ್ಲಸ್​ನ ಈ ಸ್ಮಾರ್ಟ್​ಫೋನನ್ನು ಕೇವಲ 1,049 ರೂ. ಗೆ ಖರೀದಿಸಿ: ಮಿಸ್ ಮಾಡ್ಬೇಡಿ
Image
WhatsApp Ban: ನಿಷೇಧವಾದ ವಾಟ್ಸ್​ಆ್ಯಪ್ ಖಾತೆಯನ್ನು ಮರಳಿ ಪಡೆಯುವುದು ಹೇಗೆ?
Image
WhatsApp Ban: ಭಾರತದಲ್ಲಿ ಬರೋಬ್ಬರಿ 45 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಖಾತೆ ಬ್ಯಾನ್ ಮಾಡಿದ ಕಂಪನಿ: ಎಚ್ಚರ ವಹಿಸಿ
Image
OnePlus 10R 5G: 150W SuperVOOC ಚಾರ್ಜರ್​ನ ಒನ್​ಪ್ಲಸ್‌ 10R ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಆಫರ್ ಮಿಸ್ ಮಾಡ್ಬೇಡಿ

ನೋಕಿಯಾ C12 ಪ್ಲಸ್ ಸ್ಮಾರ್ಟ್‌ಫೋನ್‌ 720*1,520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.3-ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದು ವಾಟರ್ ಡ್ರಾಪ್ ಶೈಲಿಯ ಡಿಸ್ ಪ್ಲೇ ಆಗಿದೆ. ಆಕ್ಟಾ-ಕೋರ್ ಯುನಿಸೋಕ್ SoC ಪ್ರೊಸೆಸರ್‌ ಅನ್ನು ಪಡದುಕೊಂಡಿದ್ದು, ಆಂಡ್ರಾಯ್ಡ್ 12 (ಗೋ ಎಡಿಷನ್) ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಇದರಲ್ಲಿ 8 ಮೆಗಾಪಿಕ್ಸೆಲ್ ರಿಯಲ್ ಕ್ಯಾಮೆರಾ ಸೆನ್ಸಾರ್ ಇದೆ. ಇದು ಅಟೋಫೋಕಸ್ ಫೀಚರ್ ಹೊಂದಿದ್ದು ಮತ್ತು ಎಲ್​ಇಡಿ ಫ್ಲ್ಯಾಶ್ ಅಳವಡಿಸಲಾಗಿದೆ. ಇದರ ಜೊತೆಗೆ ಸೆಲ್ಫಿ ಮತ್ತು ವಿಡಿಯೋ ಕಾಲ್​​ಗಳಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸೆಟಪ್ ನೀಡಲಾಗಿದೆ.

ವಿಶೇಷವಾಗಿ ಈ ಸ್ಮಾರ್ಟ್‌ಫೋನ್‌ 4000mAh ಬ್ಯಾಟರಿಯನ್ನು ಒಳಗೊಂಡಿದ್ದು 10W ಚಾರ್ಜಿಂಗ್ ಅನ್ನು ಬೆಂಬಲಿಸುವ ಸಾಧ್ಯತೆ ಇದೆ. ಕನೆಕ್ಟಿವಿಟ ಆಯ್ಕೆಗಳಲ್ಲಿ 4G LTE, ವೈಫೈ, ಬ್ಲೂಟೂತ್ v5.2, 3.5mm ಹೆಡ್​ಫೋನ್ ಜ್ಯಾಕ್, FM ರೇಡಿಯೋ ಸೇರಿದಂತೆ ಬೇಸಿಕ್ ಆಯ್ಕೆಗಳಿವೆ.

ನೋಕಿಯಾ C12 ಹೇಗಿದೆ?:

ಇತ್ತೀಚೆಗಷ್ಟೆ ಬಿಡುಗಡೆ ಆದ ನೋಕಿಯಾ C12 ಸ್ಮಾರ್ಟ್​ಫೋನ್ ಕೂಡ 6.3 ಇಂಚಿನ HD+ ಡಿಸ್​ಪ್ಲೇ ಹೊಂದಿದೆ. 3000mAh ಬ್ಯಾಟರಿ ಮತ್ತು 5W ಚಾರ್ಜಿಂಗ್ ಸಾಮರ್ಥ್ಯದ ಈ ಸ್ಮಾರ್ಟ್​ಫೋನ್, 2 GB RAM ಮತ್ತು 64 GB ಸ್ಟೋರೇಜ್ ಹೊಂದಿದೆ. ಜತೆಗೆ, Unisoc 9863A1 ಪ್ರೊಸೆಸರ್ ಬೆಂಬಲ ಪಡೆದುಕೊಂಡಿದೆ. ನೋಕಿಯಾ ಸಿ12 ಸ್ಮಾರ್ಟ್​ಫೋನ್, ಡಾರ್ಕ್ ಕ್ಯಾನ್, ಮಿಂಟ್ ಲೈಮ್ ಮತ್ತು ಚಾರ್​ಕೋಲ್ ಬಣ್ಣಗಳಲ್ಲಿ ಲಭ್ಯವಿದೆ. ಇಯರ್​ಫೋನ್, ಚಾರ್ಜರ್ ಸಹಿತ ನೂತನ ನೋಕಿಯಾ C12 ಸ್ಮಾರ್ಟ್​ಫೋನ್ ದೊರೆಯಲಿದೆ. ಅಮೆಜಾನ್​ನಲ್ಲಿ ಇದರ ಬೆಲೆ 5,999 ರೂ. ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:34 pm, Mon, 3 April 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ