OnePlus Nord 3: ಈ ವಾರ ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಹಾಗೂ ಫೀಚರ್ಸ್ ಏನಿದೆ?

|

Updated on: Jul 03, 2023 | 12:59 PM

ಒನ್​ಪ್ಲಸ್ ನಾರ್ಡ್ 3 ಫೋನ್​ನ ಡಿಸೈನ್ ಅನ್ನು ಕೂಡ ಕಂಪನಿ ಖಚಿತ ಪಡಿಸಿದೆ. ಈ ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ ಎಲ್​ಇಡಿ ಫ್ಲ್ಯಾಶ್ ನೀಡಲಾಗಿದೆ.

OnePlus Nord 3: ಈ ವಾರ ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಹಾಗೂ ಫೀಚರ್ಸ್ ಏನಿದೆ?
OnePlus Nord 3
Follow us on

ಭಾರತದಲ್ಲಿ ಈ ವಾರ ಒನ್​ಪ್ಲಸ್ ಕಂಪನಿಯ ನಾರ್ಡ್ 3 (OnePlus Nord 3) ಸ್ಮಾರ್ಟ್​ಫೋನ್ ಅನಾವರಣಗೊಳ್ಳಲಿದೆ. ಈ ಬಹುನಿರೀಕ್ಷಿತ ಮೊಬೈಲ್ ಜುಲೈ 5 ರಂದು ಬಿಡುಗಡೆ ಆಗಲಿದೆ. ಈ ಫೋನ್ ಜೊತೆಗೆ ನಾರ್ಡ್ ಸಿಇ 3 ಕೂಡ ಬಜೆಟ್ ಬೆಲೆಗೆ ರಿಲೀಸ್ ಆಗುವ ಸಾಧ್ಯತೆ ಇದೆ. ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್ (Smartphone) ಜುಲೈ 5 ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಿಲೀಸ್ ಆಗಲಿದೆ ಎಂದು ಕಂಪನಿ ಹೇಳಿದೆ. ಮೊಬೈಲ್ ಅನಾವರಣದ ಕಾರ್ಯಕ್ರಮವನ್ನು ಒನ್​ಪ್ಲಸ್​ನ ಅಧಿಕೃತ ಯೂಟ್ಯೂಬ್ (Youtube) ಚಾನಲ್​ನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದು. ಹಿಂದಿನ ಸರಣಿಗೆ ಹೋಲಿಸಿದರೆ ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್ ಸಾಕಷ್ಟು ಅಪ್ಡೇಟ್ ಆಗಿದ್ದು, ಆಕರ್ಷಕ ಫೀಚರ್​ಗಳಿಂದ ಕೂಡಿರಲಿದೆಯಂತೆ.

ಒನ್​ಪ್ಲಸ್ ನಾರ್ಡ್ 3 ಫೋನ್​ನ ಡಿಸೈನ್ ಅನ್ನು ಕೂಡ ಕಂಪನಿ ಖಚಿತ ಪಡಿಸಿದೆ. ಈ ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ ಎಲ್​ಇಡಿ ಫ್ಲ್ಯಾಶ್ ನೀಡಲಾಗಿದೆ. ಫ್ಲ್ಯಾಟ್ ಡಿಸ್ ಪ್ಲೇ ಇದರಲ್ಲಿದ್ದು, ಬಲ ಭಾಗದ ಮೇಲೆ ಅಲರ್ಟ್ ಸ್ಲೈಡರ್ ನೀಡಲಾಗಿದೆ. ಒಟ್ಟಾರೆಯಾಗಿ ಒನ್​ಪ್ಲಸ್ ನಾರ್ಡ್ 3 ನೋಡಲು ಪ್ರೀಮಿಯಂ ಸ್ಮಾರ್ಟ್​ಫೋನ್ ಲುಕ್ ಹೊಂದಿದೆ.

Insta360 Go 3: ಪ್ರವಾಸದ ಸುಂದರ ಕ್ಷಣಗಳ ಸೆರೆಹಿಡಿಯಲು ಇನ್​ಸ್ಟಾ360 ಕ್ಯಾಮೆರಾ

ಇದನ್ನೂ ಓದಿ
ಹ್ಯಾಂಗ್ ಆಗುತ್ತಿರುವ ಸ್ಮಾರ್ಟ್​ಫೋನನ್ನು ಸೂಪರ್ ಸ್ಪೀಡ್ ಮಾಡುವುದು ಹೇಗೆ?
Galaxy S20 FE 5G: ಫ್ಲಿಪ್​ಕಾರ್ಟ್ ಆಯ್ತು ಈಗ ಅಮೆಜಾನ್ ಸರದಿ: 75,000 ರೂ. ಫೋನನ್ನು 32,000 ರೂ. ಗೆ ಖರೀದಿಸಿ
WhatsApp Ban: ಮೇ ತಿಂಗಳಲ್ಲಿ ಭಾರತದ 65 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಖಾತೆ ಬ್ಯಾನ್ ಮಾಡಿದ ಕಂಪನಿ
Samsung Odyssey OLED G9: ಸೂಪರ್ ಗೇಮಿಂಗ್​ ಪ್ರಿಯರಿಗೆ ಸ್ಯಾಮ್​ಸಂಗ್ ಮಾನಿಟರ್

ಈ ಫೋನಿನ ಬೆಲೆ ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ. ಇದರ 8GB RAM + 128GB ಸ್ಟೋರೇಜ್ ಆಯ್ಕೆಗೆ 32,999 ರೂ. ಇದೆ ಎಂಬ ಮಾಹಿತಿ ತಿಳಿದುಬಂದಿದೆ. ಅಂತೆಯೆ 16GB RAM + 256GB ಸ್ಟೋರೇಜ್ ಮಾದರಿಗೆ 36,999 ರೂ. ನಿಗದಿ ಮಾಡಲಾಗಿದೆ. ವಿಶೇಷ ಎಂದರೆ 16GB RAM ಹೊಂದಿರುವ ಮೊಟ್ಟ ಮೊದಲ ಒನ್​ಪ್ಲಸ್ ನಾರ್ಡ್ ಫೋನ್ ಇದಾಗಿದೆಯಂತೆ.

ಒನ್​ಪ್ಲಸ್ ನಾರ್ಡ್ 3 ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಅಮೋಲೆಡ್‌ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಜೊತೆಗೆ 120Hz ರಿಫ್ರೆಶ್ ರೇಟ್‌ ಆಯ್ಕೆ ನೀಡಲಾಗಿದೆಯಂತೆ. ಬಲಿಷ್ಠವಾದ ಮೀಡಿಯಾಟೆಕ್ ಡೈಮನ್ಸಿಟಿ 900 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಬಂಬಲ ಪಡೆದುಕೊಂಡಿದೆ.

ಕ್ಯಾಮೆರಾ ವಿ‍ಚಾರಕ್ಕೆ ಬಂದರೆ, ಇದರಲ್ಲಿರುವ ಹಿಂಭಾಗದ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸಾಮರ್ಥ್ಯದಲ್ಲಿ ಇರಲಿದೆ. ಇದಕ್ಕೆ ಸೋನಿ ಸೆನ್ಸಾರ್ ಅಳವಡಸಿಲಾಗಿದೆ. ಹಾಗೆಯೆ 8 ಮೆಗಾಪಿಕ್ಸೆಲ್​ನ ಸೆಕೆಂಡರಿ ಕ್ಯಾಮೆರಾ ಇದ್ದು, 2 ಮೆಗಾಪಿಕ್ಸೆಲ್​ನ ಕ್ಯಾಮೆರಾ ಕೂಡ ಇರಲಿದೆ. ಮುಂಭಾಗ ವಿಡಿಯೋ ಕರೆ ಮತ್ತು ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.

ಒನ್​ಪ್ಲಸ್ ನಾರ್ಡ್ 3 ದೀರ್ಘ ಸಮಯ ಬಾಳಿಕೆ ಬರುವ 5,000mAh ಬ್ಯಾಟರಿಯನ್ನು ಒಳಗೊಂಡಿರುವುದು ಬಹುತೇಕ ಖಚಿತ. ಇದು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದೆ. ಹಾಟ್‌ಸ್ಪಾಟ್‌, ಬ್ಲೂಟೂತ್‌ 5.1, ವೈಫೈ, ಬಯೋಮೆಟ್ರಿಕ್ ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಇನ್‌ಡಿಸ್‌ಪ್ಲೇನಲ್ಲಿ ಇರಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ