ಪ್ರಸಿದ್ಧ ಎಲೆಕ್ಟ್ರಾನಿಕ್ ದೈತ್ಯ ಒನ್ಪ್ಲಸ್ ಸಂಸ್ಥೆ ಮಾರುಕಟ್ಟೆಯಲ್ಲಿ ಯಾವ ರೀತಿಯ ಕ್ರೇಜ್ ಹೊಂದಿದೆ ಎಂದು ಹೇಳಬೇಕಾಗಿಲ್ಲ. ಆರಂಭದಲ್ಲಿ ಪ್ರೀಮಿಯಂ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಸ್ಮಾರ್ಟ್ಫೋನ್ಗಳನ್ನು ತಂದ ಒನ್ಪ್ಲಸ್ ಇತ್ತೀಚೆಗೆ ಬಜೆಟ್ ಬೆಲೆಗೆ ಕೂಡ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಹಲವು ಬಜೆಟ್ ಫೋನ್ಗಳನ್ನು ತಂದಿರುವ ಒನ್ಪ್ಲಸ್ ಇದೀಗ ಹೊಸ ಫೋನ್ ಪರಿಚಯಿಸಲು ಹೊರಟಿದೆ. ಇಂದು ಭಾರತೀಯ ಮಾರುಕಟ್ಟೆಯಲ್ಲಿ ಚೀನಾದ ಸ್ಮಾರ್ಟ್‌ಫೋನ್ ದೈತ್ಯ ಒನ್ಪ್ಲಸ್ ತನ್ನ ಹೊಸ ಫೋನ್ ಒನ್ಪ್ಲಸ್ ನಾರ್ಡ್ CE 4 (OnePlus Nord CE 4) ಅನ್ನು ಅನಾವರಣ ಮಾಡುತ್ತಿದೆ. ಏಪ್ರಿಲ್ 1 ರಂದು ಲಾಂಚ್ ಆಗಲಿರುವ ಈ ಫೋನ್ನಲ್ಲಿ ಯಾವ ರೀತಿಯ ಫೀಚರ್ಗಳು ಇರಲಿವೆ ನೋಡೋಣ.
ಒನ್ಪ್ಲಸ್ ನಾರ್ಡ್ CE 4 ಸ್ಮಾರ್ಟ್‌ಫೋನ್ 6.7-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ಈ ಫೋನ್ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 93.4 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಈ 5G ಸ್ಮಾರ್ಟ್‌ಫೋನ್ ಶಕ್ತಿಯುತ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. 8GB RAM ನೊಂದಿಗೆ ಬರುತ್ತಿದೆ, RAM ಅನ್ನು ವಾಸ್ತವಿಕವಾಗಿ 8GB ವರೆಗೆ ಹೆಚ್ಚಿಸಬಹುದು.
ಫ್ಲಿಪ್ಕಾರ್ಟ್ನಲ್ಲಿ ಆರ್ಡರ್ ಮಾಡಿದ್ದು ಸ್ಮಾರ್ಟ್‌ಫೋನ್: ಬಂದಿದ್ದು ಕಲ್ಲು
ಇದರಲ್ಲಿರುವ ಪ್ರೊಸೆಸರ್ ಬಹುಕಾರ್ಯಕಕ್ಕೆ ತುಂಬಾ ಉಪಯುಕ್ತವಾಗಿದೆ. ನೀವು ಒಂದೇ ಬಾರಿಗೆ 15 ಅಪ್ಲಿಕೇಶನ್‌ಗಳನ್ನು ತೆರೆಯಬಹುದು ಮತ್ತು ಅವುಗಳನ್ನು ಉಪಗೋಗಿಸಬಹುದು. ಈ ಫೋನ್ 5500 mAh ನ ಶಕ್ತಿಯುತ ಬ್ಯಾಟರಿಯೊಂದಿಗೆ ಬರುತ್ತಿದ್ದು, ಇದು 100 ವ್ಯಾಟ್ಸ್ ಸೂಪರ್ ವೂಕ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದನ್ನು ಕೇವಲ 29 ನಿಮಿಷಗಳಲ್ಲಿ 100 ಪ್ರತಿಶತದಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಕ್ಯಾಮೆರಾದ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ಗಳ ಹಿಂಭಾಗದ ಕ್ಯಾಮೆರಾವನ್ನು ಹೊಂದಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲದೊಂದಿಗೆ 50MP Sony LYT-600 ಪ್ರಾಥಮಿಕ ಸಂವೇದಕವನ್ನು ಒದಗಿಸಲಾಗಿದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ಲ್ಲಿ ಕಾರ್ಯನಿರ್ವಹಿಸುತ್ತದೆ. ಬೆಲೆಗೆ ಸಂಬಂಧಿಸಿದಂತೆ, ಈ ಸ್ಮಾರ್ಟ್‌ಫೋನ್‌ನ ಮೂಲ ರೂಪಾಂತರದ ಬೆಲೆ ರೂ. 25 ಸಾವಿರ ಎಂದು ಅಂದಾಜಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ