ವೈಫೈ ಪಾಸ್‌ವರ್ಡ್ ಮರೆತಿರುವಿರಾ? ಚಿಂತಿಸಬೇಕಾಗಿಲ್ಲ, ಈ ರೀತಿ ಕ್ಷಣಾರ್ಧದಲ್ಲಿ ತಿಳಿಯಿರಿ
WiFi Password: ನೀವು ವೈಫೈ ಪಾಸ್‌ವರ್ಡ್ ಅನ್ನು ಮರೆತರೆ, ಕೆಲವು ಸುಲಭ ತಂತ್ರಗಳನ್ನು ಬಳಸಿಕೊಂಡು ಪಾಸ್‌ವರ್ಡ್ ಅನ್ನು ಕಂಡುಹಿಡಿಯಬಹುದು. ಇದರೊಂದಿಗೆ ನೀವು ಇಂಟರ್ನೆಟ್ ಸಂಪರ್ಕದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಆಂಡ್ರಾಯ್ಡ್ ಫೋನ್‌ನಲ್ಲಿ ವೈಫೈ ಪಾಸ್‌ವರ್ಡ್ ತಿಳಿಯಲು, ನೀವು ಮೊದಲು ಸೆಟ್ಟಿಂಗ್‌ಗಳಿಗೆ ಹೋಗಬೇಕು. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ ಓದಿ.
ಇಂದು ವೈಫೈ (WiFi) ಹೆಚ್ಚಿನವರ ಮನೆಯಲ್ಲಿ ಇದೆ. ನೀವು ಕೂಡ ವೈಫೈ ಬಳಸುತ್ತಿರಬಹುದು. ಒಮ್ಮೆ ಪಾಸ್‌ವರ್ಡ್ ಹಾಕಿ ಬಿಟ್ಟರೆ ನಂತರ ಮೊಬೈಲ್ನಲ್ಲಿ ವೈಫೈ ಆನ್ ಮಾಡಿದಾಗ ಅದೇ ಅಟೋಮೆಟಿಕ್ ಆಗಿ ಕನೆಕ್ಟ್ ಆಗುತ್ತದೆ. ಹೀಗಾಗಿ ಒಮ್ಮೆ ನಮೋದಿಸಿದ ಪಾಸ್‌ವರ್ಡ್ ನೆನಪಿರುವುದಿಲ್ಲ. ಬೇರೆಯವರ ಮೊಬೈಲ್ಗೆ ಪಾಸ್‌ವರ್ಡ್ ಹಾಕಿ ಕನೆಕ್ಟ್ ಮಾಡಬೇಕು ಎಂದರೆ ನಿಮ್ಮ ವೈಫೈ ಪಾಸ್‌ವರ್ಡ್ ಅನ್ನು ನೀವು ಮರೆತಿರುತ್ತೀರಿ. ಆದರೆ, ಇದಕ್ಕೀಗ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ನಾವು ನಿಮಗೆ ಕೆಲವು ಸುಲಭವಾದ ತಂತ್ರಗಳನ್ನು ಹೇಳಲಿದ್ದೇವೆ. ಅದರ ಸಹಾಯದಿಂದ, ನೀವು ವೈಫೈ ಪಾಸ್‌ವರ್ಡ್ ಅನ್ನು ನೆನಪಿಟ್ಟುಕೊಳ್ಳುವುದು ತುಂಬಾ ಸುಲಭವಾಗುತ್ತದೆ.
ಆಂಡ್ರಾಯ್ಡ್ ಫೋನ್‌ನಲ್ಲಿ ವೈಫೈ ಪಾಸ್‌ವರ್ಡ್ ಕಂಡುಹಿಡಿಯುವುದು ಹೇಗೆ?
ಆಂಡ್ರಾಯ್ಡ್ ಫೋನ್‌ನಲ್ಲಿ ವೈಫೈ ಪಾಸ್‌ವರ್ಡ್ ತಿಳಿಯಲು, ನೀವು ಮೊದಲು ಸೆಟ್ಟಿಂಗ್‌ಗಳಿಗೆ ಹೋಗಬೇಕು. ಇದರಲ್ಲಿ ನೀವು ವೈಫೈ ಆಯ್ಕೆಯನ್ನು ನೋಡುತ್ತೀರಿ. ಇಲ್ಲಿ ನಿಮಗೆ ಸಾಕಷ್ಟು ವೈಫೈ ಆಯ್ಕೆ ಕಾಣುತ್ತದೆ. ಈಗ ನೀವು ತಿಳಿದುಕೊಳ್ಳಲು ಬಯಸುವ ಯಾವುದೇ ವೈಫೈ ನೆಟ್‌ವರ್ಕ್‌ನ ಪಾಸ್‌ವರ್ಡ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಬಹುದು ಅಥವಾ ಪಡೆಯಬಹುದು. ವೈಫೈ ನೆಟ್‌ವರ್ಕ್‌ಗೆ ಹೋದ ನಂತರ, ನೀವು ಶೇರ್ ಅಥವಾ ವೈಫೈ ಕ್ಯೂಆರ್ ಕೋಡ್ ಆಯ್ಕೆಯನ್ನು ನೋಡುತ್ತೀರಿ. ಇದನ್ನು ಮಾಡಿದ ನಂತರ, ನಿಮ್ಮ ಡಿಸ್ಪ್ಲೇ ಮೇಲೆ QR ಕೋಡ್ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇಲ್ಲಿ ನೀವು ವೈಫೈ ಪಾಸ್‌ವರ್ಡ್ ಅನ್ನು ಸಹ ನೋಡುತ್ತೀರಿ. ಈಗ ಬಳಕೆದಾರರು ವೈಫೈ ಅನ್ನು ಸಂಪರ್ಕಿಸಲು ಬಯಸಿದರೆ, ಅವರು ಈ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಕನೆಕ್ಟ್ ಆಗಬಹುದು.
ಭಾರತದಲ್ಲಿಂದು ಬಹುನಿರೀಕ್ಷಿತ ಒನ್ಪ್ಲಸ್ ನಾರ್ಡ್ CE 4 ಬಿಡುಗಡೆ: ಬೆಲೆ ಎಷ್ಟು?
ಐಫೋನ್ ಬಳಕೆದಾರರು ಹೇಗೆ ಸಂಪರ್ಕಿಸಬಹುದು?
ನೀವು ಐಫೋನ್ ಬಳಕೆದಾರರಾಗಿದ್ದರೆ, ಪ್ರಕ್ರಿಯೆಯು ಸ್ವಲ್ಪ ವಿಭಿನ್ನವಾಗಿರುತ್ತದೆ. ಇದರಲ್ಲಿಯೂ ಮೊದಲು ನೀವು ಸೆಟ್ಟಿಂಗ್ಸ್‌ಗೆ ಹೋಗಿ ನಂತರ ವೈಫೈ ಆಯ್ಕೆಗೆ ಹೋಗಬೇಕು. ನಂತರ ನೀವು ಕನೆಕ್ಟ್ ಆಗಿರುವ ನೆಟ್ವರ್ಕ್ ಆಯ್ಕೆಗೆ ಹೋಗಬೇಕಾಗುತ್ತದೆ. ಇದರಲ್ಲಿ ನೀವು ಸಣ್ಣ ‘i’ ಐಕಾನ್ ಅನ್ನು ನೋಡುತ್ತೀರಿ. ಇದನ್ನು ಕ್ಲಿಕ್ ಮಾಡಿದ ನಂತರ, ನೀವು ಫೇಸ್ ಐಡಿ ಅಥವಾ ಟಚ್ ಐಡಿ ಆಯ್ಕೆಗೆ ಹೋಗಬೇಕಾಗುತ್ತದೆ. ಇದನ್ನು ಮಾಡಿದ ನಂತರ, ಅಟೋಮೆಟಿಕ್ ಜಾಯಿನ್ ಆಯ್ಕೆಯ ಕೆಳಗೆ ನೀವು ನೆಟ್‌ವರ್ಕ್ ಪಾಸ್‌ವರ್ಡ್ ಅನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ವೈಫೈ ಪಾಸ್‌ವರ್ಡ್ ಕಾಣಿಸುತ್ತದೆ.
ಫ್ಲಿಪ್ಕಾರ್ಟ್ನಲ್ಲಿ ಆರ್ಡರ್ ಮಾಡಿದ್ದು ಸ್ಮಾರ್ಟ್ಫೋನ್: ಬಂದಿದ್ದು ಕಲ್ಲು
ವೈಫೈ ಸಂಪರ್ಕಕ್ಕೆ ಸಂಬಂಧಿಸಿದಂತೆ ನೀವು ತುಂಬಾ ಜಾಗರೂಕರಾಗಿರಬೇಕು. ಒಂದು ಸಣ್ಣ ತಪ್ಪು ಕೂಡ ನಿಮಗೆ ದೊಡ್ಡ ತೊಂದರೆ ಉಂಟುಮಾಡಬಹುದು. ಆದ್ದರಿಂದ, ವೈಫೈ ಪಾಸ್‌ವರ್ಡ್ ಹಂಚಿಕೊಳ್ಳುವಾಗ ನೀವು ತುಂಬಾ ಜಾಗರೂಕರಾಗಿರಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ