Sim Port: ಆನ್‌ಲೈನ್​ನಲ್ಲಿ ಜಿಯೋಗೆ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡುವುದು ಹೇಗೆ?

Jio Port: ನಿಮ್ಮ ಮೊಬೈಲ್ ಸಂಖ್ಯೆಯನ್ನು ಜಿಯೋಗೆ ಪೋರ್ಟ್ ಮಾಡಲು ಬಯಸಿದರೆ, ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸಬಹುದು. ಇದರ ಪ್ರಕ್ರಿಯೆಯು ತುಂಬಾ ಸುಲಭ, ನೀವೂ ಅನುಸರಿಸಬಹುದು. ಆದಾಗ್ಯೂ, ಡಾಕ್ಯುಮೆಂಟ್ ಪರಿಶೀಲನೆಗಳು ಅಥವಾ ಬಯೋಮೆಟ್ರಿಕ್‌ಗಳಿಗಾಗಿ ನೀವು ಒಮ್ಮೆ ಜಿಯೋ ಸ್ಟೋರ್‌ಗೆ ಭೇಟಿ ನೀಡಬೇಕಾಗುತ್ತದೆ.

Sim Port: ಆನ್‌ಲೈನ್​ನಲ್ಲಿ ಜಿಯೋಗೆ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡುವುದು ಹೇಗೆ?
Reliance JIO
Follow us
Vinay Bhat
|

Updated on: Apr 01, 2024 | 12:33 PM

ನಂಬರ್ ಒನ್ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋಗೆ (Reliance Jio) ದೇಶದ ಸಾಕಷ್ಟು ಮಂದಿ ಬಳಕೆದಾರರಿದ್ದಾರೆ. ಇತರೆ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಜಿಯೋ ಕಡಿಮೆ ಬೆಲೆಗೆ ಡೇಟಾ, ಅನಿಯಮಿತ ಕರೆ ಆಫರ್ ನೀಡುತ್ತಿದೆ. ಹೀಗಾಗಿ ಅನೇಕರು ಜಿಯೋ ಕಡೆ ವಾಲುತ್ತಿದ್ದಾರೆ. ನೀವು ಕೂಡ ನಿಮ್ಮ ಮೊಬೈಲ್ ಸಂಖ್ಯೆಯನ್ನು ಜಿಯೋಗೆ ಪೋರ್ಟ್ ಮಾಡಲು ಬಯಸಿದರೆ, ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸಬಹುದು. ಇದರ ಪ್ರಕ್ರಿಯೆಯು ತುಂಬಾ ಸುಲಭ, ನೀವೂ ಅನುಸರಿಸಬಹುದು. ಆದಾಗ್ಯೂ, ಡಾಕ್ಯುಮೆಂಟ್ ಪರಿಶೀಲನೆಗಳು ಅಥವಾ ಬಯೋಮೆಟ್ರಿಕ್‌ಗಳಿಗಾಗಿ ನೀವು ಒಮ್ಮೆ ಜಿಯೋ ಸ್ಟೋರ್‌ಗೆ ಭೇಟಿ ನೀಡಬೇಕಾಗುತ್ತದೆ. ಆದರೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಏಜೆಂಟ್ ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅಗತ್ಯವಿಲ್ಲ.

ಈ ರೀತಿ ಜಿಯೋಗೆ ಪೋರ್ಟ್ ಮಾಡಿ

  • ನೀವು ಪೋರ್ಟ್ ಮಾಡಲು ಬಯಸುವ ಸಂಖ್ಯೆಯಿಂದ, <PORT<space>> ಮತ್ತು ನಂತರ ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
  • ನಂತರ ನೀವು 1900 ಗೆ ಮೆಸೇಜ್ ಕಳುಹಿಸಬೇಕು.
  • ನಂತರ ನಿಮ್ಮ ಯೂನಿವರ್ಸಲ್ ಪ್ರಾಡಕ್ಟ್ ಕೋಡ್ ಎಂಬ ಸಂದೇಶ ಬರುತ್ತದೆ, ಅದರಲ್ಲಿ UPC ಕೋಡ್ ನೀಡಲಾಗುತ್ತದೆ.
  • ಇದಕ್ಕಾಗಿ ನೀವು ಆ್ಯಪ್ ಸ್ಟೋರ್‌ಗೆ ಹೋಗಬೇಕಾಗುತ್ತದೆ. ನಂತರ ನೀವು MyJio ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು.
  • ಮೈಜಿಯೋ ಅಪ್ಲಿಕೇಶನ್ ತೆರೆಯಬೇಕು ಮತ್ತು ಜಿಯೋ ಕೂಪನ್ ಕೋಡ್ ಅನ್ನು ರಚಿಸಬೇಕು.
  • ನೀವು ಯುಪಿಸಿ ಕೋಡ್ ಮತ್ತು ಜಿಯೋ ಕೂಪನ್ ಕೋಡ್‌ನೊಂದಿಗೆ ರಿಲಯನ್ಸ್ ಜಿಯೋ ಸ್ಟೋರ್‌ಗೆ ಹೋಗಬೇಕು.
  • ನಂತರ ಆಧಾರ್ ಕಾರ್ಡ್‌ನಂತಹ ವಿಳಾಸ ಪುರಾವೆ ಮತ್ತು ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ನೀಡಬೇಕಾಗುತ್ತದೆ.
  • eKYC ಪರಿಶೀಲನೆಯ ನಂತರ ಜಿಯೋ ಸಂಪರ್ಕವನ್ನು ಸಕ್ರಿಯಗೊಳಿಸಲಾಗುತ್ತದೆ.
  • ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆ ಸಕ್ರಿಯಗೊಳ್ಳುತ್ತದೆ.

ವೈಫೈ ಪಾಸ್‌ವರ್ಡ್ ಮರೆತಿರುವಿರಾ? ಚಿಂತಿಸಬೇಕಾಗಿಲ್ಲ, ಈ ರೀತಿ ಕ್ಷಣಾರ್ಧದಲ್ಲಿ ತಿಳಿಯಿರಿ

ಗಮನಿಸಿ : ನೀವು ಹೊಸ ಸಿಮ್ ಪಡೆಯಲು ಬಯಸಿದರೆ, ನೀವು ಅಂಗಡಿಗೆ ಭೇಟಿ ನೀಡಬೇಕು. ಅಲ್ಲದೆ, ಹೊಸ ಸಿಮ್‌ನ ಪ್ರಕ್ರಿಯೆಯು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ, ಏಕೆಂದರೆ ಹೊಸ ಸಿಮ್ ನೀಡುವ ನಿಯಮಗಳನ್ನು ಸರ್ಕಾರವು ಬದಲಾಯಿಸಿದೆ. ಇದರೊಂದಿಗೆ, ಪ್ರತಿ ಗ್ರಾಹಕನಿಗೆ KYC ಕಡ್ಡಾಯವಾಗಿದೆ.

ಏಪ್ರಿಲ್ 15 ರಿಂದ ಈ ಸೇವೆ ಸ್ಥಗಿತ

ನೀವು ಫೋನ್‌ನಲ್ಲಿ *121# ಅಥವಾ *#99# ನಂತಹ USSD ಸೇವೆಗಳನ್ನು ಬಳಸುತ್ತಿದ್ದರೆ ಮುಂದಿನ ಆದೇಶದವರೆಗೆ ಈ ಸೇವೆಯನ್ನು ಟೆಲಿಕಾಂ ಇಲಾಖೆ ನಿಷೇಧಿಸುತ್ತಿದೆ. ಏಪ್ರಿಲ್ 15 ರಿಂದ USSD ಆಧಾರಿತ ಕರೆ ಫಾರ್ವರ್ಡ್ ಮಾಡುವುದನ್ನು ನಿಲ್ಲಿಸುವಂತೆ ದೂರಸಂಪರ್ಕ ಇಲಾಖೆ (DoT) ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಮುಂದಿನ ಆದೇಶದವರೆಗೆ ಇದನ್ನು ಸ್ಥಗಿತಗೊಳಿಸಲಾಗುತ್ತಿದೆ. ಆದಾಗ್ಯೂ, ಕರೆ ಫಾರ್ವರ್ಡ್ ಮಾಡಲು ಗ್ರಾಹಕರಿಗೆ ಪರ್ಯಾಯ ಆಯ್ಕೆಗಳನ್ನು ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್