ಈ ವಾರದ ಆರಂಭದಲ್ಲಿ ಯುಎಇಯಲ್ಲಿ ಸದ್ದಿಲ್ಲದೆ ಅನಾವರಣಗೊಂಡ ಒಪ್ಪೋ ಕಂಪನಿಯ ಬಹುನಿರೀಕ್ಷಿತ ಸ್ಮಾರ್ಟ್ಫೋನ್ ಒಪ್ಪೋ A38 (Oppo A38) ಇದೀಗ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು 5,000mAh ಬ್ಯಾಟರಿಯನ್ನು 33W ವೈರ್ಡ್ SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್ ಮಾಡುತ್ತದೆ. ಹುಬ್ಬೇರಿಸುವಂತಹ ಫೀಚರ್ಗಳು ಇದರಲ್ಲಿ ಅಡಕವಾಗಿದ್ದರೂ ಈ ಫೋನ್ ಬಜೆಟ್ ಬೆಲೆಗೆ ಲಭ್ಯವಿದೆ.
ಗ್ಲೋಯಿಂಗ್ ಬ್ಲ್ಯಾಕ್ ಮತ್ತು ಗ್ಲೋಯಿಂಗ್ ಗೋಲ್ಡ್ ಬಣ್ಣ ಆಯ್ಕೆಗಳಲ್ಲಿ ರಿಲೀಸ್ ಆಗಿರುವ ಒಪ್ಪೋ A38 ಸ್ಮಾರ್ಟ್ಫೋನ್ ಕೇವಲ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಖರೀದಿಗೆ ಲಭ್ಯವಿದೆ. ಇದರ 4GB RAM + 128GB ರೂಪಾಂತರಕ್ಕೆ ಭಾರತದಲ್ಲಿ 12,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಅಧಿಕೃತ ಒಪ್ಪೋ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದ್ದು, ಸೆಪ್ಟೆಂಬರ್ 13 ರಿಂದ ಮಾರಾಟವಾಗಲಿದೆ.
ಒಪ್ಪೋ A38 ಸ್ಮಾರ್ಟ್ಫೋನ್ 6.56-ಇಂಚಿನ HD+ (1612×720 ಪಿಕ್ಸೆಲ್‌ಗಳು) LCD ಡಿಸ್‌ಪ್ಲೇ ಹೊಂದಿದ್ದು, 90Hz ನ ರಿಫ್ರೆಶ್ ದರ ಮತ್ತು 720 nits ವರೆಗಿನ ಗರಿಷ್ಠ ಬ್ರೈಟ್ನೆಸ್ ಮಟ್ಟವನ್ನು ಹೊಂದಿದೆ. ಡ್ಯುಯಲ್ ನ್ಯಾನೊ ಸಿಮ್-ಬೆಂಬಲಿತ ಫೋನ್ ಆಂಡ್ರಾಯ್ಡ್ 13-ಆಧಾರಿತ ColorOS 13.1 ನೊಂದಿಗೆ ಕಾರ್ಯನಿರ್ವಹಿಸುತ್ತದೆ. 4GB RAM ಮತ್ತು 128GB ಅಂತರ್ಗತ ಸಂಗ್ರಹಣೆಯೊಂದಿಗೆ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G85 SoC ನಿಂದ ರನ್ ಆಗುತ್ತದೆ.
ಜಿ20 ಶೃಂಗಸಭೆಗಾಗಿ G20 ಇಂಡಿಯಾ ಮೊಬೈಲ್ ಆ್ಯಪ್ ಬಿಡುಗಡೆ; ವೈಶಿಷ್ಟ್ಯಗಳು, ಪ್ರಯೋಜನಗಳು ಏನೇನು?
ಕ್ಯಾಮೆರಾ ವಿಚಾರಕ್ಕೆ ಬಂದರೆ, ಒಪ್ಪೋ A38 ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. 50-ಮೆಗಾಪಿಕ್ಸೆಲ್ AI-ಬೆಂಬಲಿತ ಪ್ರಾಥಮಿಕ ಸೆನ್ಸಾರ್ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕವನ್ನು ಹೊಂದಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ.
ಒಪ್ಪೋ A38 ಫೋನ್ 5,000mAh ಬ್ಯಾಟರಿಯನ್ನು 33W ವೈರ್ಡ್ SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್ ಮಾಡಲಾಗಿದೆ. ಭದ್ರತೆಗಾಗಿ, ಹ್ಯಾಂಡ್‌ಸೆಟ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು ವೈಫೈ 5, ಬ್ಲೂಟೂತ್ 5.3, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಬೆಂಬಲ ಪಡೆದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ